ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟೆಕ್ಕಿ ಕುಟುಂಬ ಆತ್ಮಹತ್ಯೆ ಯತ್ನ, ನಾಗ ನಂದನ್ ಶವ ಪತ್ತೆ

|
Google Oneindia Kannada News

ಶಿವಮೊಗ್ಗ, ನ.5 : ತಂದೆ-ತಾಯಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಳ್ಳಲು ಸಾಗರದ ಲಾಡ್ಜ್ ಗೆ ಆಗಮಿಸಿದ್ದ ಬೆಂಗಳೂರು ಮೂಲದ ಸಾಫ್ಟ್‌ವೇರ್‌ ಇಂಜಿನಿಯರ್‌ ನಾಗ ನಂದನ್ ಶವವಾಗಿ ಪತ್ತೆಯಾಗಿದ್ದಾರೆ. ಸೋಮವಾರ ಜೋಗ ಜಲಪಾತದಲ್ಲಿ ಅವರ ಮೃತದೇಹ ಪತ್ತೆಯಾಗಿದ್ದು, ನಾಗ ನಂದನ್ ಶವವೆಂದು ಕುಟುಂಬದವರು ಗುರುತಿಸಿದ್ದಾರೆ.

ಸೋಮವಾರ ಭದ್ರಾವತಿ ಮೂಲದ ವಿದ್ಯಾರ್ಥಿ ನಾಪತ್ತೆಯಾಗಿದ್ದರು, ಅವರ ಶವ ಹುಡುಕಲು ಜೋಗ ಜಲಪಾತದ ಕೆಳಭಾಗಕ್ಕೆ ಇಳಿದ ತಂಡಕ್ಕೆ ಶವವೊಂದು ದೊರಕಿತ್ತು. ಆದರೆ, ಅದು ಅಭಿಷೇಕ್ ಶವವಲ್ಲ ಎಂಬುದು ನಂತರ ತಿಳಿಯಿತು. ಸಾಗರ ಪೊಲೀಸರು ಶವವನ್ನು ಪರೀಕ್ಷೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಿದ್ದರು.

jog falls

ಶವದ ಕಾಲು ಮತ್ತು ಕೈ ಬೆರಳಿನ ಆಧಾರವ ಮೇಲೆ ನಾಗ ನಂದನ್ ಕುಟುಂಬದವರು ಇದು ಅವರ ಶವ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಇದರಿಂದ ಕಳೆದ ಆರು ದಿನಗಳಿಂದ ನಾಪತ್ತೆಯಾಗಿದ್ದ ನಾಗ ನಂದನ್ ಶವವಾಗಿ ಪತ್ತೆಯಾಗಿದ್ದಾರೆ. ಸಾಗರದ ವರದಶ್ರೀ ಲಾಡ್ಜ್ ಗೆ ಆತ್ಮಹತ್ಯೆ ಮಾಡಿಕೊಳ್ಳಲು ಆಗಮಿಸಿದ್ದ ಕುಟುಂಬದಲ್ಲಿ ನಾಗ ನಂದನ್ ಮತ್ತು ಅವರ ತಂದೆ ಕಸ್ತೂರಿ ರಂಗನ್ ಮೃತಪಟ್ಟಿದ್ದು, ತಾಯಿ ರಮಾ ಬದುಕುಳಿದಿದ್ದಾರೆ.

ಬೆಂಗಳೂರಿನ ಸಾಫ್ಟ್‌ವೇರ್‌ ಇಂಜಿನಿಯರ್‌ ನಾಗನಂದನ್ ತನ್ನ ತಂದೆ ಬೆಮಲ್ ನಿವೃತ್ತ ಉದ್ಯೋಗಿ ಕಸ್ತೂರಿ ರಂಗನ್ ಮತ್ತು ತಾಯಿ ರಮಾ ಅವರ ಜೊತೆಗೆ ಆತ್ಮಹತ್ಯೆ ಮಾಡಿಕೊಳ್ಳಲು ಸಾಗರಕ್ಕೆ ಆಗಮಿಸಿ, ಅ.29ರಂದು ವರದಶ್ರೀ ಲಾಡ್ಜ್ ನಲ್ಲಿ ವಾಸ್ತವ್ಯ ಹೂಡಿದ್ದರು. ತಂದೆಯನ್ನು ಉಸಿರುಗಟ್ಟಿಸಿ ಸಾಯಿಸಿದ ನಾಗ ನಂದನ್ ತಾಯಿಯ ಕತ್ತುಕೊಯ್ದು ಪರಾರಿಯಾಗಿದ್ದರು. ಲಾಡ್ಜ್ ಸಿಬ್ಬಂದಿ ಪ್ರಜ್ಞಾ ಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದ ನಾಗ ನಂದನ್ ತಾಯಿಯನ್ನು ಆಸ್ಪತ್ರೆಗೆ ಸೇರಿಸಿ ಬದುಕಿಸಿದ್ದರು. (ಜೋಗದಲ್ಲಿ ಟೆಕ್ಕಿ ಕುಟುಂಬದ ಆತ್ಮಹತ್ಯೆ ಯತ್ನ)

ಘಟನೆ ನಡೆದ ದಿನದಿಂದಲೂ ನಾಗ ನಂದನ್ ನಾಪತ್ತೆಯಾಗಿದ್ದರು. ಸಾಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅವರಿಗಾಗಿ ಹುಡುಕಾಡ ನಡೆಸಿದ್ದರು. ಸೋಮವಾರ ನಾಗ ನಂದನ್ ಮೃತದೇಹ ಪತ್ತೆಯಾಗುವುದರೊಂದಿಗೆ ಟೆಕ್ಕಿ ಕುಟುಂಬ ಆತ್ಮಹತ್ಯೆ ಪ್ರಕರಣ ಧಾರುಣವಾಗಿ ಅಂತ್ಯಗೊಂಡಿದೆ. ಸಾಲದ ಸುಳಿಗೆ ಸಿಲುಕಿದ್ದ ಕುಟುಂಬ ಬೆಂಗಳೂರಿನಿಂದ ಜೋಗಕ್ಕೆ ಆತ್ಮಹತ್ಯೆ ಮಾಡಿಕೊಳ್ಳಲು ಆಗಮಿಸಿತ್ತು.

English summary
Software engineer Naganandan found dead in jog falls on Monday, November 4. Naganandan who comes with Family members to commits suicide at Varadashree lodge in Sagara Shimoga. Koramangala ( Bangalore) based family Kasturirangan, wife Rama attempt suicide at lodge. Kasturirangan died and Rama admitted to hospital. Son, Naganandan go missing from the hotel from October 30. Sagara police registered the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X