ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೋದರಿ‌ ನಿವೇದಿತಾ ಪ್ರತಿಷ್ಠಾನದ ಹೆಣ್ಣುಮಕ್ಕಳ ಸಾಮಾಜಿಕ ಕಾರ್ಯ

By ರಘು ಶಿಕಾರಿ, ಶಿವಮೊಗ್ಗ
|
Google Oneindia Kannada News

ಶಿವಮೊಗ್ಗ, ಜನವರಿ 10: ಕೋವಿಡ್ ಸಂದರ್ಭದಲ್ಲಿ ಜನರು ಮನೆಯಿಂದ ಹೊರ ಬರುವುದು ಕಷ್ಟ. ಆದರೆ, ಸಂಕಷ್ಟದ ಸಮಯದಲ್ಲಿ ಶಿವಮೊಗ್ಗದ ಸಹೋದರಿ ನಿವೇದಿತಾ ಪ್ರತಿಷ್ಠಾನದ ಹೆಣ್ಣು ಮಕ್ಕಳ ಮಾಡಿರುವ ಸಾಮಾಜಿಕ ಕಾರ್ಯ ಜನರ ಮೆಚ್ಚುಗೆಗೆ ಕಾರಣವಾಗಿದೆ.

ಕಳೆದ ಮೂರು ವರ್ಷಗಳಿಂದ ಶಿವಮೊಗ್ಗದಲ್ಲಿ ಅಲೆಮಾರಿ ಜನಾಂಗದವರೇ ಇರುವ ತಾಂಡವೊಂದಕ್ಕೆ ಪ್ರತಿ ವಾರಾಂತ್ಯ ಭೇಟಿಕೊಟ್ಟು 'ಸ್ವಚ್ಛಮನಸ್ಸು' ಎಂಬ ಕಾರ್ಯಕ್ರಮವನ್ನು ಮಾಡುತ್ತಿದ್ದಾರೆ. ತಂಡದ ಹೆಣ್ಣು ಮಕ್ಕಳು ಗ್ರಾಮೀಣ ಭಾಗದ ಮಹಿಳೆಯರು ಮತ್ತು ಮಕ್ಕಳಲ್ಲಿ ಸ್ವಚ್ಚತೆ ಅರಿವು ಮೂಡಿಸಿ ಅವರ ಜೀವನದಲ್ಲಿ ಹೊಸ ಬದಲಾವಣೆ ಮೂಡಿಸುತ್ತಿದ್ದಾರೆ.

ಶಾಲೆ ಪುನರಾರಂಭದ ಬಗ್ಗೆ ಆರೋಗ್ಯ ಸಚಿವರು ನೀಡಿದ ಸಲಹೆ ಏನು? ಶಾಲೆ ಪುನರಾರಂಭದ ಬಗ್ಗೆ ಆರೋಗ್ಯ ಸಚಿವರು ನೀಡಿದ ಸಲಹೆ ಏನು?

ಮಕ್ಕಳನ್ನು ಕೂರಿಸಿಕೊಂಡು ಶ್ಲೋಕ, ಹಾಡುಗಳನ್ನು ಹೇಳಿಕೊಟ್ಟು, ಕಥೆಗಳನ್ನು ಹೇಳುತ್ತಾ ಅವರೊಳಗೆ ಸಂಸ್ಕಾರದ ಭಾವನೆಯನ್ನು ಜಾಗೃತಗೊಳಿಸುವ ಪ್ರಯತ್ನವನ್ನು ಸಹೋದರಿ ನಿವೇದಿತಾ ಪ್ರತಿಷ್ಠಾನದವರು ಮಾಡುತ್ತಿದ್ದಾರೆ. ಆರಂಭದಲ್ಲಿ ತರಲೆ ಮಾಡಿಕೊಂಡು ಅತ್ತಿತ್ತ ಅಡ್ಡಾಡುತ್ತಿದ್ದ ಮಕ್ಕಳು ಈಗ ಇವರ ಮಾತುಗಳನ್ನು ಕೇಳಲು ತಾವೇ ಅಂಗಳವನ್ನು ಸ್ವಚ್ಛಗೊಳಿಸಿ, ಚಾಪೆ ಹಾಸಿ ಕುಳಿತುಕೊಳ್ಳುವಷ್ಟು ಬದಲಾವಣೆ ಕಂಡರು.

ಖಾಸಗಿ ಶಿಕ್ಷಣ ಸಂಸ್ಥೆಗಳ ಮಾನ್ಯತೆ ನವೀಕರಣ ಪ್ರಕ್ರಿಯೆ: ಸಿದ್ದಗಂಗಾ ಶ್ರೀಗಳಿಗೆ ಸುರೇಶ್ ಕುಮಾರ್ ಪತ್ರ!ಖಾಸಗಿ ಶಿಕ್ಷಣ ಸಂಸ್ಥೆಗಳ ಮಾನ್ಯತೆ ನವೀಕರಣ ಪ್ರಕ್ರಿಯೆ: ಸಿದ್ದಗಂಗಾ ಶ್ರೀಗಳಿಗೆ ಸುರೇಶ್ ಕುಮಾರ್ ಪತ್ರ!

ಜನರಿಗೆ ವಿಶ್ವಾಸ ಹೆಚ್ಚಿತು

ಜನರಿಗೆ ವಿಶ್ವಾಸ ಹೆಚ್ಚಿತು

ಈ ಕಾರ್ಯಕರ್ತೆಯರು ಅಲ್ಲಿ‌ನ ಹೆಣ್ಣುಮಕ್ಕಳಿಗೆ ಭಿನ್ನ ಭಿನ್ನ ಚಟುವಟಿಕೆಗಳನ್ನು ಆಯೋಜಿಸುವ ಪ್ರಯತ್ನವನ್ನು ಮಾಡಿದರು. ಯಾರು ಹೆಚ್ಚಿನ ಆಸಕ್ತಿ ತೋರಿಸಲಿಲ್ಲ, ಅವರುಗಳಿಗೆ ಆಸಕ್ತಿಯೇ ಇಲ್ಲವೆನಿಸುವ ಭಾವನೆ ಕಾಡುತ್ತಿತ್ತು. ಮುಂದೆ ಅಲ್ಲಿನ ಕೆಲವು ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನದಲ್ಲಿ ವಿದ್ಯಾರ್ಥಿ ನಿಲಯಗಳಿಗೆ ಸೇರಿಸಿ ಅಧ್ಯಯನಕ್ಕೆ ಪೂರಕವಾಗಿ ಕೆಲಸಗಳನ್ನು‌ ಮಾಡಿದಂತೆಲ್ಲ ಜನರಿಗೆ ವಿಶ್ವಾಸ ಹುಟ್ಟಿತು.

ಆರೋಗ್ಯ ತಪಾಸಣೆ ಶಿಬಿರ

ಆರೋಗ್ಯ ತಪಾಸಣೆ ಶಿಬಿರ

ಇತ್ತಿಚೆಗೆ ಅಲ್ಲಿ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಿದಾಗ 60ಕ್ಕೂ ಹೆಚ್ಚು ಮಕ್ಕಳು, 50ಕ್ಕೂ ಹೆಚ್ಚು ತಾಯಂದಿರು ಭಾಗವಹಿಸಿ ಅಚ್ಚರಿ ಮೂಡಿಸಿದರು. ಪ್ರದೇಶದಲ್ಲಿರುವ ಜನರಿಗೆ ಈ ಹೆಣ್ಣುಮಕ್ಕಳ ಮೇಲೆ ಅಪಾರವಾದ ವಿಶ್ವಾಸ ಮೂಡಿತು. ಮುಂದೆ ಇಡಿಯ ತಾಂಡ ಸ್ವಚ್ಛಗೊಳಿಸಲು ಅವರು ಕೈಜೋಡಿಸುವ ಭರವಸೆ ಕೊಟ್ಟಿದ್ದಾರೆ.

ಜನರ ಮುಚ್ಚುಗೆ ಗಳಿಸಿದರು

ಜನರ ಮುಚ್ಚುಗೆ ಗಳಿಸಿದರು

ಆ ಹೊತ್ತಿಗೆ ಜನರಿಂದ ಹಳೆಯ ಸೀರೆಗಳನ್ನು ಸಂಗ್ರಹಿಸಿ ಅವರ ಟೆಂಟುಗಳಿಗೆ ಕಾಯಕಲ್ಪ ಮಾಡಬೇಕೆಂಬ ಆಲೋಚನೆಯೂ ಇದೆ ಮಾಡಿದ್ದಾರೆ. ಸಹೋದರಿ ನಿವೇದಿತಾ ಅವರ ಕನಸುಗಳು ಈ ಹೆಣ್ಣುಮಕ್ಕಳ ಮೂಲಕ ಸಾಕಾರಗೊಳ್ಳುತ್ತಿರುವುದು ಜನರಲ್ಲಿ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ.

ಚಕ್ರವರ್ತಿ ಸೂಲಿಬೆಲೆ ಭೇಟಿ

ಚಕ್ರವರ್ತಿ ಸೂಲಿಬೆಲೆ ಭೇಟಿ

ಈ ಕಾರ್ಯಕ್ರಮಗಳಿಗೆ ಯುವ ಬ್ರಿಗೇಡ್ ಕಾರ್ಯಕರ್ತರು ಸಹಕಾರ ನೀಡುತ್ತಿದ್ದು ತಮ್ಮ ಬಿಡುವಿನ ಸಮಯದಲ್ಲಿ ಯುವ ಬ್ರಿಗೇಡ್ ಮತ್ತು ಸಹೋದರಿ ನಿವೇದಿತಾ ಪ್ರತಿಷ್ಠಾನ ಮಾರ್ಗದರ್ಶಕರಾದ ಚಕ್ರವರ್ತಿ ಸೂಲಿಬೆಲೆ‌ ಅವರು ಈ ಸ್ಥಳಗಳಿಗೆ ಭೇಟಿ ನೀಡಿ ಮಕ್ಕಳಿಗೆ ಮಹಿಳೆಯರಿಗೆ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.

English summary
Sodari Nivedita Pratishtana cleaning awareness program in rural areas of Shivamogga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X