ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಸ್ತೆಯಲ್ಲಿ ಸಿಲುಕಿದ 6 ಅಡಿ ಉದ್ದದ ನಾಗರ ಹಾವಿನ ರಕ್ಷಣೆ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಡಿಸೆಂಬರ್ 29; ಶಿಕಾರಿಪುರ-ಶಿರಾಳಕೊಪ್ಪ ನಡುವಿನ ರಸ್ತೆಯಲ್ಲಿ ಸಿಲುಕಿದ್ದ 6 ಅಡಿ ಉದ್ದದ ನಾಗರ ಹಾವನ್ನು ರಕ್ಷಣೆ ಮಾಡಲಾಗಿದೆ. ಜನರನ್ನು ಕಂಡು ಭಯಗೊಂಡಿದ್ದ ಹಾವು ರಸ್ತೆ ದಾಟಲು ಸಾಧ್ಯವಾಗದೇ ಪರದಾಡುತ್ತಿತ್ತು.

ಶಿಕಾರಿಪುರ-ಶಿರಾಳಕೊಪ್ಪ ರಸ್ತೆಯಲ್ಲಿ ವಾಹನಗಳ ಸಂಚಾರ ಹೆಚ್ಚು. ಭದ್ರಾಪುರ ಬಳಿ ರಸ್ತೆ ದಾಟಲು ಹಾವಿಗೆ ಸಾಧ್ಯವಾಗಿರಲಿಲ್ಲ. ವಾಹನಗಳ ಅಡಿ ಸಿಲುಕಬೇಕಿದ್ದ ಹಾವನ್ನು ಸ್ನೇಕ್ ಕೃಷ್ಣಪ್ಪ ರಕ್ಷಣೆ ಮಾಡಿದರು.

ದೆವ್ವದ ಕಣ್ಣಿನ ಕಪ್ಪೆ, ಭಯಾನಕ ಹಾವು! ವಿಜ್ಞಾನಿಗಳು ಕಂಡ ಹೊಸ ಜೀವಿಗಳುದೆವ್ವದ ಕಣ್ಣಿನ ಕಪ್ಪೆ, ಭಯಾನಕ ಹಾವು! ವಿಜ್ಞಾನಿಗಳು ಕಂಡ ಹೊಸ ಜೀವಿಗಳು

ಮುಖ್ಯರಸ್ತೆಯಲ್ಲಿ ಹಾವು ವಾಹನದಡಿಯಲ್ಲಿ ಸಿಲುಕುತ್ತಿತ್ತು. ಜಕ್ಕಿನಹಳ್ಳಿಯ ಸ್ನೇಕ್ ಕೃಷ್ಣಪ್ಪ ಅವರು ಇದನ್ನು ಗಮನಿಸಿ, ಹಾವನ್ನು ರಕ್ಷಣೆ ಮಾಡಿದರು. ಬಳಿಕ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

 ಹಾವು ಕಚ್ಚಿತ್ತು, ಕೊರೊನಾ ಬಂದಿತ್ತು; ಸಾವು ಗೆದ್ದವನಿಗೆ ಊರಲ್ಲಿ ಸ್ವಾಗತ ಹಾವು ಕಚ್ಚಿತ್ತು, ಕೊರೊನಾ ಬಂದಿತ್ತು; ಸಾವು ಗೆದ್ದವನಿಗೆ ಊರಲ್ಲಿ ಸ್ವಾಗತ

Snake In Shikaripura Shiralakoppa Road Rescued

ಶಿಕಾರಿಪುರ-ಶಿರಾಳಕೊಪ್ಪ ನಡುವೆ ಇರುವ ಭದ್ರಾಪುರದ ಬಸ್ ನಿಲ್ದಾಣದ ಬಳಿಯ ಮನೆಯೊಂದರ ಬಳಿಯಲ್ಲಿ ನಾಗರಹಾವು ಕಾಣಿಸಿಕೊಂಡಿತ್ತು. ಜನರು ಸೇರಿದ ಹಿನ್ನೆಲೆಯಲ್ಲಿ ಗಾಬರಿಗೊಂಡಿತು.

ಹಾವು ಕಚ್ಚಿಸಿ ಪತ್ನಿ ಹತ್ಯೆ ಕೇಸ್: ಎಲ್ಲರೆದುರು ತಪ್ಪೊಪ್ಪಿಕೊಂಡ ಪತಿ ಹಾವು ಕಚ್ಚಿಸಿ ಪತ್ನಿ ಹತ್ಯೆ ಕೇಸ್: ಎಲ್ಲರೆದುರು ತಪ್ಪೊಪ್ಪಿಕೊಂಡ ಪತಿ

ಬುಸುಗುಡುತ್ತಾ ರಸ್ತೆ ದಾಟಲು ಪ್ರಯತ್ನ ನಡೆಸಿತ್ತು. ಮುಖ್ಯರಸ್ತೆಯಾದ ಕಾರಣ ವಾಹನ ಸಂಚಾರವೂ ಅಧಿಕವಾಗಿದ್ದು, ಹಾವು ವಾಹನಕ್ಕೆ ಸಿಲುಕುವ ಅಪಾಯವಿತ್ತು. ವಿಷಯ ತಿಳಿದು ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಸ್ನೇಕ್ ಕೃಷ್ಣಪ್ಪ ಹಾವನ್ನು ರಕ್ಷಣೆ ಮಾಡಿದರು.

ಜನರನ್ನು ನೋಡಿ ಗಾಬರಿಗೊಂಡಿದ್ದ ಹಾವನ್ನು ಹಿಡಿಯುವುದು ಸವಾಲಿನ ಕೆಲಸ. ಆದರೆ, ಕೃಷ್ಣಪ್ಪ ಅವರು ಹಲವು ನಿಮಿಷಗಳ ಕಾಲ ತಮ್ಮದೇ ಚಾಕಚಕ್ಯತೆಯಲ್ಲಿ ಅದನ್ನು ಹಿಡಿದು, ಅರಣ್ಯಕ್ಕೆ ಬಿಟ್ಟರು.

English summary
6 feet snake which found in Shikaripura to Shiralakoppa road rescued. Snake Krishnappa took snake to forest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X