ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ : ಬಾರ್, ರೆಸ್ಟೋರೆಂಟ್‌ಗಳಲ್ಲಿ ಧೂಮಪಾನ ನಿಷೇಧ

|
Google Oneindia Kannada News

ಶಿವಮೊಗ್ಗ, ಜೂನ್ 27 : ಶಿವಮೊಗ್ಗ ನಗರದ ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಇನ್ನು ಮುಂದೆ ಧೂಮಪಾನ ಮಾಡುವಂತಿಲ್ಲ. ಅಬಕಾರಿ ಇಲಾಖೆ ಈ ಕುರಿತು ಆದೇಶವನ್ನು ಹೊರಡಿಸಿದೆ.

ಸಿಗರೇಟು ಮತ್ತು ಇತರೆ ತಂಬಾಕು ಪದಾರ್ಥ ಕಾಯ್ದೆ (ಕೋಟ್ಟಾ) ಪರಿಣಾಮಕಾರಿ ಅನಿಷ್ಠಾನ ಮಾಡುವ ಸಲುವಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಕೋಟ್ಪಾ ಕಾಯ್ದೆ ಸೆಕ್ಷನ್ 4ನ್ನು ಅಬಕಾರಿ ಸನ್ನದುಗಳಲ್ಲಿ ಸಮರ್ಪಕವಾಗಿ ಅನುಷ್ಠಾನ ಮಾಡುವಂತೆ ಹಾಗೂ ಬಾರ್ & ರೆಸ್ಟೋರೆಂಟ್, ಪಬ್, ಕ್ಲಬ್ ಮತ್ತು ಹೊಟೇಲ್‍ಗಳನ್ನು 'ಧೂಮಪಾನ ಮುಕ್ತ' ಮಾಡುವ ನಿಟ್ಟಿನಲ್ಲಿ ರಾಜ್ಯ ಅಬಕಾರಿ ಆಯುಕ್ತರು ಸೂಚನೆಗಳನ್ನು ನೀಡಿದ್ದಾರೆ.

ಬೆಂಗಳೂರಲ್ಲಿ 18 ವರ್ಷದೊಳಿಗಿನ ಮಕ್ಕಳು ಇಷ್ಟೊಂದು ಸಿಗರೇಟು ಸೇದ್ತಾರಾ?ಬೆಂಗಳೂರಲ್ಲಿ 18 ವರ್ಷದೊಳಿಗಿನ ಮಕ್ಕಳು ಇಷ್ಟೊಂದು ಸಿಗರೇಟು ಸೇದ್ತಾರಾ?

ಶಿವಮೊಗ್ಗ ಜಿಲ್ಲೆಯ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಉಪ ಆಯುಕ್ತರ ಕಛೇರಿಯಲ್ಲಿ ತಂಬಾಕು ನಿಯಂತ್ರಣ ಕಾಯಿದೆ ಕೋಟ್ಪಾ 2003ರ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಅಬಕಾರಿ ಆಯುಕ್ತರ ಆದೇಶ ಹಾಗು ಸೂಚನೆಯ ಮೇರೆಗೆ ಧೂಮಪಾನ ಮುಕ್ತಗೊಳಿಸಲು ಈಗಾಗಲೇ ತಂಡ ಕಾರ್ಯಪ್ರವೃತ್ತವಾಗಿದೆ.

ದಂಡ ಕಟ್ಟುವ ಭಯಕ್ಕಾದರೂ ಧೂಮಪಾನ ತ್ಯಜಿಸಿ!ದಂಡ ಕಟ್ಟುವ ಭಯಕ್ಕಾದರೂ ಧೂಮಪಾನ ತ್ಯಜಿಸಿ!

Smoking ban in bar and restaurants in Shivamogga city

ಕೋಟ್ಪಾ ಕಾಯ್ದೆ ಕುರಿತು ಜಿಲ್ಲಾ ತಂಬಾಕು ನಿಯಂತ್ರಣಾ ಕೋಶದ ಸಲಹೆಗಾರ ಹೇಮಂತ್ ರಾಜ್ ಅರಸ್ ಮಾತನಾಡಿ, 'ಪ್ರತೀ ವರ್ಷ ದೇಶದಲ್ಲಿ 10ಲಕ್ಷ ಜನರು ತಂಬಾಕಿಗೆ ಬಲಿಯಾಗುತ್ತಿದ್ದಾರೆ. ಈ ಸಾವು ನೋವುಗಳನ್ನು ತಡೆಗಟ್ಟಲು ಹಾಗು ಧೂಮಪಾನ ಮಾಡದವರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯು ಕೋಟ್ಪಾ 2003 ಕಾಯಿದೆಯನ್ನು ಜಾರಿಗೆ ತಂದಿದೆ' ಎಂದರು.

ಕರ್ನಾಟಕದಲ್ಲಿ ಕ್ಲಬ್, ಹೋಟೆಲ್ ಗಳಲ್ಲಿ ಧೂಮಪಾನ ನಿಷೇಧಕರ್ನಾಟಕದಲ್ಲಿ ಕ್ಲಬ್, ಹೋಟೆಲ್ ಗಳಲ್ಲಿ ಧೂಮಪಾನ ನಿಷೇಧ

ಕಾಯ್ದೆ ಅನ್ವಯ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಥಿಯೇಟರ್, ಹೊಟೇಲ್, ಬಾರ್ & ರೆಸ್ಟೋರೆಂಟ್, ಪಬ್, ಕ್ಲಬ್, ಸಮದಾಯ ಭವನಗಳು, ಸಾರ್ವಜನಿಕ ಕಛೇರಿಗಳು ಮತ್ತು ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧವಿದೆ.

ಬಾರ್ & ರೆಸ್ಟೋರೆಂಟ್, ಪಬ್, ಕ್ಲಬ್ ಹಾಗು ಹೊಟೇಲ್‍ಗಳಲ್ಲಿ ಧೂಮಪಾನ ಮಾಡುವುದರಿಂದ ಧೂಮಪಾನ ಮಾಡದವರ ಆರೋಗ್ಯದ ಮೇಲೂ ಪರಿಣಾಮ ಉಂಟಾಗುತ್ತದೆ. ಆದ್ದರಿಂದ, ಧೂಮಪಾನ ಮುಕ್ತ ಮಾಡಲು ಆದೇಶ ನೀಡಲಾಗಿದೆ.

English summary
Excise department has imposed a complete ban on smoking in bars and restaurants across the Shivamogga city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X