ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ಮಾರ್ಟ್ ಸಿಟಿ ಶಿವಮೊಗ್ಗ : 53 ಯೋಜನೆಗಳಿಗೆ ಚಾಲನೆ

|
Google Oneindia Kannada News

ಶಿವಮೊಗ್ಗ, ಜೂನ್ 26 : ಸ್ಮಾರ್ಟ್ ಸಿಟಿ ಯೋಜನೆಯಡಿ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಸಮ ಪ್ರಮಾಣದ ಅನುದಾನ ಶಿವಮೊಗ್ಗದ ಅಭಿವೃದ್ಧಿಗೆ ಬಿಡುಗಡೆಯಾಗಿದ್ದು. ಮುಂದಿನ 5 ವರ್ಷದಲ್ಲಿ 1 ಸಾವಿರ ಕೋಟಿ ರೂ.ಗಳ ಅನುದಾನ ಬಿಡುಗಡೆಯಾಗಲಿದೆ.

ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕಿ ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಾದ ಚಾರುಲತ ಸೋಮಲ್ ಅವರು ಅನುದಾನದ ಬಗ್ಗೆ ವಿವರಣೆ ನೀಡಿದರು.

ಶಿವಮೊಗ್ಗ : ಬೀದಿಯಲ್ಲಿ ಬೈದಾಡಿಕೊಂಡ ಆಯುಕ್ತೆ, ಆಯನೂರು ಮಂಜುನಾಥ್ಶಿವಮೊಗ್ಗ : ಬೀದಿಯಲ್ಲಿ ಬೈದಾಡಿಕೊಂಡ ಆಯುಕ್ತೆ, ಆಯನೂರು ಮಂಜುನಾಥ್

'ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಸಮ ಪ್ರಮಾಣದ ಅನುದಾನ ಬಿಡುಗಡೆಯಾಗಿದ್ದು ಒಟ್ಟು ಮೊತ್ತ 222 ಕೋಟಿ ಆಗಿದೆ. ಮುಂದಿನ ಐದು ವರ್ಷಗಳಲ್ಲಿ ಬಿಡುಗಡೆಯಾಗಲಿರುವ 1 ಸಾವಿರ ಕೋಟಿ ರೂಗಳ ಅನುದಾನದಲ್ಲಿ 968.32 ಕೋಟಿ ವೆಚ್ಚದ 53 ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತದೆ' ಎಂದರು.

ಸ್ಮಾರ್ಟ್‌ ಸಿಟಿ ಯೋಜನೆ : ಅನುದಾನ ಬಳಕೆಯಲ್ಲಿ ಕರ್ನಾಟಕ ಹಿಂದೆಸ್ಮಾರ್ಟ್‌ ಸಿಟಿ ಯೋಜನೆ : ಅನುದಾನ ಬಳಕೆಯಲ್ಲಿ ಕರ್ನಾಟಕ ಹಿಂದೆ

Smart city : 53 projects will taken up in Shivamogga city

'ಮೊದಲ ಹಂತದಲ್ಲಿ 467.80 ಕೋಟಿ ಮೊತ್ತದ 26 ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಮುಗಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ಈಗಾಗಲೇ 66 ಲಕ್ಷ ರೂ.ಗಳ ಎರಡು ಯೋಜನೆಗಳು ಮುಕ್ತಾಯ ಹೊಂದಿದ್ದು 326.83 ಕೋಟಿ ರೂ. ಗಳ 13 ಯೋಜನೆಗಳು ಟೆಂಡರ್ ಪ್ರಕ್ರಿಯೆಯಲ್ಲಿವೆ' ಎಂದು ತಿಳಿಸಿದರು.

ಕರ್ನಾಟಕ : ಹಳ್ಳ ಹಿಡಿದ ಸ್ಮಾರ್ಟ್‌ ಸಿಟಿ ಯೋಜನೆ, ಅನುದಾನ ಖರ್ಚಾಗಿಲ್ಲಕರ್ನಾಟಕ : ಹಳ್ಳ ಹಿಡಿದ ಸ್ಮಾರ್ಟ್‌ ಸಿಟಿ ಯೋಜನೆ, ಅನುದಾನ ಖರ್ಚಾಗಿಲ್ಲ

'99.84 ಕೋಟಿ ಮೊತ್ತದ 8 ಕಾಮಗಾರಿಗಳಿಗೆ ಯೋಜನಾ ವರದಿ ತಯಾರಿಸಲಾಗಿದ್ದು ಸಕ್ಷಮ ಪ್ರಾಧಿಕಾರದ ಅನುಮೋದನೆಗೆ ಕಾಯುತ್ತಿದ್ದೇವೆ. 32 ಕೋಟಿಯ 6 ಕಾಮಗಾರಿಗಳಿಗೆ ವರದಿ ತಯಾರಿಸಲಾಗಿದ್ದು ಖಾಸಗಿ ಸಹಭಾಗಿತ್ವದಲ್ಲಿ ಸಹ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳತ್ತಿದ್ದೇವೆ' ಎಂದರು.

'ವಿದ್ಯುತ್ ದೀಪದ ಕಂಬಗಳು ಹಾಗೂ ಭೂಗತ ವಿದ್ಯುತ್ ಕೇಬಲ್ ಅಳವಡಿಕೆ, ಚರಂಡಿ ಅಭಿವೃದ್ಧಿಗಾಗಿ 366.70 ಕೋಟಿ ಮೊತ್ತದ ಹಣವನ್ನು ಮೀಸಲಿಡಲಾಗಿದೆ. ಇನ್ನುಳಿದಂತೆ ತುಂಗಾ ಎಡ ನಾಲೆಯ ಎರಡು ದಂಡೆಗಳಲ್ಲೂ ಉದ್ಯಾನವನ, ಯೋಜನೆ ವ್ಯಾಪ್ತಿ ಪ್ರದೇಶಗಳಲ್ಲಿ ಔಷಧಿ ಸಸ್ಯಗಳನ್ನು ಬೆಳೆಸುವ ಮೂಲಕ ಹಸಿರೀಕರಣದ ಆಲೋಚನೆಯಿದ್ದು ಅರಣ್ಯ ಇಲಾಖೆಯೊಂದಿಗೆ ಚರ್ಚೆ ನಡೆಯುತ್ತಿದೆ' ಎಂದು ಹೇಳಿದರು.

ಪ್ರಮುಖ ಯೋಜನೆಗಳ ವಿವರ : 17 ಸ್ಥಳಗಳಲ್ಲಿ ಸ್ಮಾರ್ಟ್ ತಂಗುದಾಣ ನಿರ್ಮಾಣಕ್ಕೆ 18.50 ಕೋಟಿ, ಶಿವಪ್ಪನಾಯಕ ಅರಮನೆ ಅಭಿವೃದ್ಧಿಗೆ 18.50 ಕೋಟಿ, ಶಿವಪ್ಪನಾಯಕ ಹೂವಿನ ಮಾರುಕಟ್ಟೆ ಸ್ಥಳದಲ್ಲಿ ಬಹುಮಹಡಿ ವಾಣಿಜ್ಯ ಸಂಕೀರ್ಣ, ಕಾರ್ ಪಾರ್ಕಿಂಗ್ ಸಂಕೀರ್ಣ ನಿರ್ಮಾಣಕ್ಕೆ 30 ಕೋಟಿ, 15 ಸ್ಥಳಗಳಲ್ಲಿ ಸ್ಮಾರ್ಟ್ ಗ್ರಂಥಾಲಯಕ್ಕೆ 3.48 ಕೋಟಿ, ನೆಹರೂ ಕ್ರೀಡಾಂಗಣವನ್ನು ಅಂತರಾಷ್ಟ್ರೀಯ ದರ್ಜೆಗೆ ಉನ್ನತೀಕರಣಗೊಳಿಸಲು 24.85 ಕೋಟಿ.

English summary
Under smart city project in the cost of 968.32 crore 53 projects will taken up in Shivamogga city said Shivamogga Corporation Commissioner Charulatha Somal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X