ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜಕಾರಣಿಗಳಿಗೆ ಶಿವರಾಜ್ ಕುಮಾರ್ ಕಿವಿಮಾತು

|
Google Oneindia Kannada News

ಬೆಂಗಳೂರು/ಶಿವಮೊಗ್ಗ, ಏ 10: ರಾಜಕಾರಣಿಗಳು ಕಲಾವಿದರ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಇರಲಿ, ಅವರು ಜನಪ್ರತಿನಿಧಿಗಳು ಎನ್ನುವುದನ್ನು ಮೊದಲು ಅರಿತುಕೊಳ್ಳಲಿ. ಅವರು ನೀಡುವ ಬೇಕಾಬಿಟ್ಟಿ ಹೇಳಿಕೆಗಳು ಸಮಾಜಕ್ಕೆ ತಪ್ಪು ಸಂದೇಶ ನೀಡದಿರಲಿ ಎಂದು ನಾಡಿನ ಸಮಸ್ತ ರಾಜಕಾರಣಿಗಳಿಗೆ ಹ್ಯಾಟ್ರಿಕ್ ಶಿವರಾಜ್ ಕುಮಾರ್ ಎಚ್ಚರಿಕೆ ಮತ್ತು ಸಂದೇಶ ರವಾನಿಸಿದ್ದಾರೆ.

ಈಗಾಗಲೇ ಹಲವಾರು ಬಾರಿ ನಾನು ಹೇಳಿದ್ದೇನೆ. ನಾನು ಯಾವ ಪಕ್ಷದ ಜೊತೆಗೂ ಇಲ್ಲ, ನನ್ನ ಪತ್ನಿ ಗೀತಾ ಜೆಡಿಎಸ್ ಪಕ್ಷದ ಟಿಕೆಟಿನಿಂದ ಸ್ಪರ್ಧಿಸುತ್ತಿದ್ದಾರೆ. ನಾನು ನನ್ನ ಪತ್ನಿಗೆ ಟಿಕೆಟ್ ನೀಡಿ ಎಂದು ಮತದಾರರಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆಯೇ ಹೊರತು ಜೆಡಿಎಸ್ ಪಕ್ಷಕ್ಕೆ ಮತನೀಡಿ ಎಂದಲ್ಲ.(ಶಿವಮೊಗ್ಗದಲ್ಲಿ ಕೇಳಿಬಂದ ಪಂಚಿಂಗ್ ಡೈಲಾಗ್ ಗಳು)

ನನ್ನ ಪತ್ನಿ ಕಣಕ್ಕಿಳಿದಿರುವುದರಿಂದ ಗಂಡನಾಗಿ ನಾನು ಮತಯಾಚಿಸಬೇಕಾಗಿದೆ. ಹಾಡುವುದು, ಕುಣಿಯುವುದು ಕಲಾವಿದನಾದ ನನ್ನ ಧರ್ಮ. ಅದನ್ನು ನಾನು ಮಾಡುತ್ತಿದ್ದೇನೆ.

ಅದನ್ನು ರಾಜಕಾರಣಿಗಳು ವ್ಯಂಗ್ಯವಾಡುವುದು ಸರಿಯಲ್ಲ ಎಂದು ಪರೋಕ್ಷವಾಗಿ ಬಿಜೆಪಿಯ ಆಯನೂರು ಮಂಜುನಾಥ್ ಮತ್ತು ಸಚಿವ ಕಿಮ್ಮನೆ ರತ್ನಾಕರ ಅವರಿಗೆ ಶಿವಣ್ಣ ಟಾಂಗ್ ನೀಡಿದ್ದಾರೆ.

ಮುಂದೆ ಓದಿ..

ಕ್ರೀಡಾಮನೋಭಾವದಿಂದ ತೆಗೆದುಕೊಳ್ಳಿ

ಕ್ರೀಡಾಮನೋಭಾವದಿಂದ ತೆಗೆದುಕೊಳ್ಳಿ

ಪತ್ನಿಗಾಗಿ ನಾನು ಮತಯಾಚಿಸುತ್ತಿದ್ದೇನೆ. ಎಲ್ಲಾ ಪಕ್ಷದವರು ಅದನ್ನು ಕ್ರೀಡಾಮನೋಭಾವದಿಂದ ತೆಗೆದುಕೊಳ್ಳಲಿ. ಕಲಾವಿದನಾಗಿ ನನಗೆ ಎಲ್ಲಾ ಪಕ್ಷಗಳು ಒಂದೇ - ಶಿವರಾಜ್ ಕುಮಾರ್

ಲೂಸ್ ಮಾದ ಟಾಕ್

ಲೂಸ್ ಮಾದ ಟಾಕ್

ಆಯನೂರು ಮಂಜುನಾಥ್ ಈ ಹಿಂದೆ ನೀಡಿದ್ದ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ್ದ ಲೂಸ್ ಮಾದ ಯಾನೆ ಯೋಗೀಶ್, ಕಲಾವಿದರು ಮೈಗೆ ಬಣ್ಣ ಹಚ್ಚಿಕೊಂಡರೆ ರಾಜಕಾರಣಿಗಳು ನಾಲಿಗೆಗೆ ಬಣ್ಣ ಹಚ್ಚಿಕೊಳ್ಳುತ್ತಾರೆ ಎಂದಿದ್ದಾರೆ.

ಶಿವಣ್ಣನಿಗಾಗಿ ಬಂದೆ

ಶಿವಣ್ಣನಿಗಾಗಿ ಬಂದೆ

ನನಗೆ ಶಿವಣ್ಣ ಮುಖ್ಯ. ಅವರಿಗಾಗಿ ಇಲ್ಲಿಗೆ ಬಂದು ಗೀತಕ್ಕನ ಪರ ಮತಯಾಚಿಸುತ್ತಿದ್ದೇನೆ. ನಮಗೆ ಇದೇ ಪಕ್ಷದ ಪರವಾಗಿ ಪ್ರಚಾರ ಮಾಡಬೇಕೆನ್ನುವ ಕಟ್ಟುಪಾಡಿಲ್ಲ - ಯೋಗೀಶ್

ಆಯನೂರು ಮಂಜುನಾಥ್

ಆಯನೂರು ಮಂಜುನಾಥ್

ಜೋಗಿ ಸ್ಟೈಲಿನಲ್ಲಿ ಮತ ಯಾಚಿಸೋಕೆ ಸಂಸತ್ತು ಅನ್ನುವುದು ಮನರಂಜನೆಯ ತಾಣವೇ. ಹಾಡ್ಕೊಂಡು, ಡ್ಯಾನ್ಸ್ ಮಾಡ್ಕೊಂಡು ಮತಯಾಚಿಸುತ್ತಿದ್ದಾರಲ್ಲಾ, ಶಿವಮೊಗ್ಗದ ರಾಜಕೀಯ ಎಲ್ಲಿಗೆ ಬಂದು ನಿಂತಿತು ಎಂದು ಆಯನೂರು ಮಂಜುನಾಥ್, ಶಿವಣ್ಣ ವಿರುದ್ದ ಹೇಳಿಕೆ ನೀಡಿದ್ದರು.

ಯೋಗಿಗೆ ಆಯನೂರು ಉತ್ತರ

ಯೋಗಿಗೆ ಆಯನೂರು ಉತ್ತರ

ರಾಜಕಾರಣಿಗಳು ನಾಲಿಗೆಗೆ ಬಣ್ಣ ಹಚ್ಚಿಕೊಳ್ಳುತ್ತಾರೆಂದು ಯೋಗೀಶ್ ಹೇಳುತ್ತಾರೆ. ಲೂಸ್ ಮಾದ ಹೆಸರಿಗೆ ತಕ್ಕಂತೆ ಯೋಗೀಶ್ ಹೇಳಿಕೆ ನೀಡುತ್ತಾರೆ. ಶಿವಮೊಗ್ಗದ ಜನತೆ ಇದೇ 17ನೇ ತಾರೀಕು ಇವರ ಬಣ್ಣ ತೆಗೀತಾರೆ.

English summary
Shivaraj Kumar asked all politicians to take Shimoga election in sportsman spirit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X