ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ-ಯಶವಂತಪುರ ಶತಾಬ್ದಿ ರೈಲಿಗೆ ಹೊಸ ನಿಲುಗಡೆ

|
Google Oneindia Kannada News

ಶಿವಮೊಗ್ಗ, ಜನವರಿ 15 : ಶಿವಮೊಗ್ಗ-ಯಶವಂತಪುರ ನಡುವೆ ಸಂಚಾರ ನಡೆಸುವ ಜನಶತಾಬ್ದಿ ರೈಲಿಗೆ ಮತ್ತೊಂದು ನಿಲುಗಡೆಯನ್ನು ಕಲ್ಪಿಸಲಾಗಿದೆ. ವಾರದ ಆರು ದಿನ ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲು ಸಂಚಾರ ನಡೆಸುತ್ತಿದೆ.

ನೈಋತ್ಯ ರೈಲ್ವೆ ಶಿವಮೊಗ್ಗ-ಯಶವಂತಪುರ ರೈಲು (12089/12090) ಜನವರಿ 15ರಿಂದ ತರೀಕೆರೆಯಲ್ಲಿಒಂದು ನಿಮಿಷ ನಿಲುಗಡೆಗೊಳ್ಳಲಿದೆ ಎಂದು ಹೇಳಿದೆ. ಪ್ರಾಯೋಗಿಕವಾಗಿ ರೈಲನ್ನು ಜುಲೈ 14ರ ತನಕ ನಿಲ್ಲಿಸಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ರೈಲ್ವೆ ಇಲಾಖೆಯಿಂದ ಶಿವಮೊಗ್ಗಕ್ಕೆ ಮತ್ತೊಂದು ಕೊಡುಗೆರೈಲ್ವೆ ಇಲಾಖೆಯಿಂದ ಶಿವಮೊಗ್ಗಕ್ಕೆ ಮತ್ತೊಂದು ಕೊಡುಗೆ

ಶಿವಮೊಗ್ಗ-ಯಶವಂತಪುರ (12090) ರೈಲು ಬೆಳಗ್ಗೆ 6.04ಕ್ಕೆ ತರೀಕೆರೆ ನಿಲ್ದಾಣ ತಲುಪಿ 6.05ಕ್ಕೆ ಹೊರಡಲಿದೆ. ಯಶವಂತಪುರ-ಶಿವಮೊಗ್ಗ (12089) ರೈಲು ರಾತ್ರಿ 9.02ಕ್ಕೆ ತರೀಕೆರೆ ನಿಲ್ದಾಣ ತಲುಪಲಿದ್ದು, 9.03ಕ್ಕೆ ಹೊರಡಲಿದೆ ಎಂದು ಪ್ರಕಟಣೆ ಹೇಳಿದೆ.

Shivamoggg-Yeshwantpur Shatabdi Train To Stop At Tarikere

ತಾಳಗುಪ್ಪ-ಹುಬ್ಬಳ್ಳಿ ರೈಲು ಮಾರ್ಗದ ಸಮೀಕ್ಷೆಗೆ ಒಪ್ಪಿಗೆತಾಳಗುಪ್ಪ-ಹುಬ್ಬಳ್ಳಿ ರೈಲು ಮಾರ್ಗದ ಸಮೀಕ್ಷೆಗೆ ಒಪ್ಪಿಗೆ

ರೈಲಿಗೆ ನಾಮಕರಣ : "ಬೆಂಗಳೂರು-ತಾಳಗುಪ್ಪ ಎಕ್ಸ್‌ಪ್ರೆಸ್ ರೈಲಿಗೆ ಕೆಳದಿ ರಾಣಿ ಚನ್ನಮ್ಮಾಜಿ ಎಕ್ಸ್‌ಪ್ರೆಸ್ ಎಂದು ನಾಮಕರಣ ಮಾಡಲಾಗುತ್ತದೆ" ಎಂದು ಶಿವಮೊಗ್ಗದ ಬಿಜೆಪಿ ಸಂಸದ ಬಿ. ವೈ. ರಾಘವೇಂದ್ರ ಹೇಳಿದ್ದಾರೆ.

ನೈಋತ್ಯ ರೈಲ್ವೆ ಇಂಜಿನಿಯರ್ ವಿರುದ್ಧ ಸಿಬಿಐ ಎಫ್‌ಐಆರ್ನೈಋತ್ಯ ರೈಲ್ವೆ ಇಂಜಿನಿಯರ್ ವಿರುದ್ಧ ಸಿಬಿಐ ಎಫ್‌ಐಆರ್

ಕೆಳದಿ ರಾಜವಂಶದ ಹೆಸರಾಂತ ರಾಣಿ ಚನ್ನಮ್ಮನ ಹೆಸರನ್ನು ರೈಲಿಗೆ ಇಡಲು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ರೈಲ್ವೆ ಇಲಾಖೆಯಿಂದ ಅಂತಿಮ ಒಪ್ಪಿಗೆ ಸಿಗುವುದು ಮಾತ್ರ ಬಾಕಿ ಇದೆ.

English summary
South Western railway announced that Shivamoggg-Yeshwantpur jan shatabdi express train will stop at Tarikere station from January 15, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X