ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಎದುರಿಸಲು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಸನ್ನದ್ಧ: ಸಿಇಒ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಮಾರ್ಚ್ 13: ಶಿವಮೊಗ್ಗ ಜಿಲ್ಲೆಗೆ ಕೊರೊನಾ ವೈರಸ್ ಇನ್ನೂ ಕಾಲಿಟ್ಟಿಲ್ಲ. ಹಾಗಂತ ಜಿಲ್ಲಾಡಳಿತ ಕೈಕಟ್ಟಿ ಕುಳಿತಕೊಳ್ಳದೇ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೊರೊನಾ ಎದುರಿಸಲು ಮುಂಜಾಗ್ರತಾ ಕ್ರಮವಾಗಿ ಸಮರ್ಪಕವಾಗಿ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೈಶಾಲಿ ತಿಳಿಸಿದರು.

ಈ ಮೊದಲು ಕೇವಲ ಒಂದು ಕೊಠಡಿಯಲ್ಲಿ 6 ಬೆಡ್ ಗಳನ್ನು ಸುಸಜ್ಜಿತವಾಗಿ ವ್ಯವಸ್ಥೆ ಮಾಡಲಾಗಿತ್ತು. ಈಗ 12 ಹಾಸಿಗೆಗಳುಳ್ಳ ಎರಡು ಕೊಠಡಿಗಳನ್ನು ಮೀಸಲಿಡಲಾಗಿದೆ. ಇದಕ್ಕೆ ಬೇಕಾದ N95 ಮಾಸ್ಕ್ ನ್ನ ತರಿಸಿಡಲಾಗಿದ್ದು, ಅಗತ್ಯ ಔಷಧಿಗಳನ್ನು ತಂದಿಟ್ಟುಕೊಳ್ಳಲಾಗಿದೆ. ವೈದ್ಯರಿಗೆ ಮತ್ತು ನರ್ಸ್ ಗಳಿಗೆ ಅಗತ್ಯ ತರಬೇತಿಯನ್ನೂ ನೀಡಲಾಗಿದೆ ಎಂದರು.

ಶಿವಮೊಗ್ಗದ ಮಹಿಳೆಗೆ ಕೊರೊನಾ ವೈರಸ್ ನೆಗೆಟಿವ್ಶಿವಮೊಗ್ಗದ ಮಹಿಳೆಗೆ ಕೊರೊನಾ ವೈರಸ್ ನೆಗೆಟಿವ್

ಇದರ ಜೊತೆಗೆ ಗೌನ್ ಗಳ ಅವಶ್ಯಕತೆ ಇದ್ದು, ಇದರ ಕೊರತೆ ಇರುವ ಬಗ್ಗೆ ಮಾಹಿತಿ ಬರುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ಈಶ್ವರಪ್ಪ, ಗೌನ್ ಗಳ ಬಗ್ಗೆ ಸರ್ಕಾರದೊಂದಿಗೆ ಮಾತನಾಡಿ ಶೀಘ್ರದಲ್ಲಿಯೇ ವ್ಯವಸ್ಥೆ ಮಾಡಲಾಗುವುದು ಎಂದರು.

CEO Said Shivamoggas Meggan Hospital Prepares To Face Corona

ಮೆಗ್ಗಾನ್ ಕುಂದುಕೊರತೆಗಳ ಬಗ್ಗೆ ಏಪ್ರಿಲ್ ಮೊದಲನೇ ವಾರದಲ್ಲಿ ಸಭೆ ಮೆಗ್ಗಾನ್ ನಲ್ಲಿ ಅವ್ಯವಸ್ಥೆಯ ಕುರಿತು ಈಗಾಗಲೇ ನಿರ್ದೇಶಕ ಡಾ.ಲೇಪಾಕ್ಷಿಯೊಂದಿಗೆ ಸಭೆ ನಡೆಸಲಾಗಿದ್ದು, ಹಲವು ಸೂಕ್ತ ನಿರ್ದೇಶನವನ್ನು ನೀಡಲಾಗಿತ್ತು. ಮುಂದಿನ ಪುನರ್ ಪರಿಶೀಲನಾ ಸಭೆಯಲ್ಲಿ ಸರಿಪಡಿಸಿಕೊಳ್ಳುವುದಾಗಿ ನಿರ್ದೇಶಕರು ತಿಳಿಸಿದರು.

ಕೊರೊನಾ ಎಫೆಕ್ಟ್: 4 ಸಾವಿರ ಕೋಳಿಗಳು ಜೀವಂತವಾಗಿ ಗುಂಡಿಗೆಕೊರೊನಾ ಎಫೆಕ್ಟ್: 4 ಸಾವಿರ ಕೋಳಿಗಳು ಜೀವಂತವಾಗಿ ಗುಂಡಿಗೆ

ಈ ತಿಂಗಳಲ್ಲಿ ಸಭೆ ನಡೆಸಬಹುದು ಎಂದು ತಿಳಿದಿದ್ದೆವು, ಆದರೆ ಅಧಿವೇಶನ ನಡೆಯುತ್ತಿರುವುದರಿಂದ ಈ ತಿಂಗಳಲ್ಲಿ ಪುನರ್ ಪರಿಶೀಲನಾ ಸಭೆ ನಡೆಸಲಾಗುತ್ತಿಲ್ಲ. ಇದನ್ನು ಏಪ್ರಿಲ್ ತಿಂಗಳ ಮೊದಲನೇ ವಾರದಲ್ಲಿ ನಡೆಸಲಾಗುವುದು ಎಂದರು.

English summary
Shivamogga Zilla Panchayat CEO Vaishali said, "Meggan Hospital has been adequately prepared to deal with corona."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X