ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ; ತ್ಯಾವರೆಕೊಪ್ಪ ಸಫಾರಿಯ ಹಿರಿಯ ಹುಲಿ ಹನುಮ ಸಾವು

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಸೆಪ್ಟೆಂಬರ್‌, 23: ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದ ಹಿರಿಯ ಹುಲಿ ಹನುಮ ಮೃತಪಟ್ಟಿದ್ದಾನೆ. ಕೆಲವು ತಿಂಗಳಿನಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಹನುಮನಿಗೆ ಸಫಾರಿಯಲ್ಲಿ ವಿಶೇಷ ಆರೈಕೆ ಮಾಡಲಾಗುತ್ತಿತ್ತು. ಆದರೂ ವಯೋಸಹಜ ಸಮಸ್ಯೆ, ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದೆ.

ಈ ಹಿಂದೆ ಸಫಾರಿಯಲ್ಲಿ ದೀರ್ಘ ಕಾಲ ಜೀವಿಸಿದ್ದ ಕೃತ್ತಿಕಾ ಎಂಬ ಹುಲಿಯ ದಾಖಲೆಯನ್ನು ಹನುಮ ಸರಿಗಟ್ಟಿದ್ದಾನೆ. 19 ವರ್ಷಗಳ ಕಾಲ ಜೀವಿಸಿದ್ದ ಕೃತ್ತಿಕಾ 2016ರ ಆಗಸ್ಟ್‌ನಲ್ಲಿ ಕೊನೆಯುಸಿರೆಳೆದಿತ್ತು. ಹನುಮ ಕೂಡಾ 19 ವರ್ಷಗಳ ನಂತರ ಕೊನೆಯುಸಿರೆಳೆದಿದ್ದಾನೆ. ಚಾಮುಂಡಿ ಎಂಬ ಹುಲಿ ರಾಮ, ವಾಲಿ ಮತ್ತು ಹನುಮನಿಗೆ ಜನುಮ ನೀಡಿತ್ತು. 2020ರ ಡಿಸೆಂಬರ್‌ನಲ್ಲಿ ವಾಲಿ, ಇದೇ ವರ್ಷ ಮೇನಲ್ಲಿ ರಾಮ ಎಂಬ ಹುಲಿಗಳು ಸಾವನ್ನಪ್ಪಿವೆ. ಬಳಿಕ ಇವುಗಳ ಸಹೋದರ ಹನುಮ ಕೂಡ ಇಹಲೋಕ ತ್ಯಜಿಸಿದ್ದಾನೆ. ಇದೀಗ ಸಫಾರಿಯಲ್ಲಿ ಹುಲಿಗಳ ಸಂಖ್ಯೆ 4ಕ್ಕೆ ಇಳಿಕೆ ಆಗಿದೆ.

ಥೈಲ್ಯಾಂಡ್, ಮಹಾರಾಷ್ಟ್ರದಂತೆ ಶಿವಮೊಗ್ಗ ಜಿಲ್ಲೆಯಲ್ಲೊಂದು ಗಣಪತಿ ಮ್ಯೂಸಿಯಂಥೈಲ್ಯಾಂಡ್, ಮಹಾರಾಷ್ಟ್ರದಂತೆ ಶಿವಮೊಗ್ಗ ಜಿಲ್ಲೆಯಲ್ಲೊಂದು ಗಣಪತಿ ಮ್ಯೂಸಿಯಂ

ಸಫಾರಿ ಇಲ್ಲವೇ ಪಾಣಿ ಸಂಗ್ರಹಾಲಯದಲ್ಲಿ ಹುಲಿಗಳ ಗರಿಷ್ಠ ಜೀವಿತಾವಧಿ 15 ರಿಂದ 17 ವರ್ಷ ಆಗಿದೆ. ಆದರೆ ತ್ಯಾವರೆಕೊಪ್ಪ ಸಫಾರಿಯಲ್ಲಿ ಸರಾಸರಿ ವಯಸ್ಸನ್ನೂ ಮೀರಿ ಹುಲಿಗಳು ಜೀವನ ನಡೆಸಿರುವುದು ವಿಶೇಷವಾಗಿದೆ. ಹುಲಿಗಳ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದರೂ ಅವುಗಳನ್ನು ಕ್ರಾಲ್‌ನಲ್ಲಿ ಇರಿಸಿ ನಿಗಾ ವಹಿಸಲಾಗುತ್ತದೆ. ಆದರೆ ಹುಲಿಗಳು ಒಂದು ಹಂತದ ಬಳಿಕ ಕ್ರಮೇಣ ಅಂಗಾಂಗ ವೈಫಲ್ಯದಂತಹ ಗಂಭೀರ ಸಮಸ್ಯೆಗಳಿಗೆ ಒಳಗಾಗುತ್ತವೆ. ಇದೀಗ ಹನುಮನ ಸಾವಿಗೂ ಅಂಗಾಂಗ ವೈಫಲ್ಯವೇ ಕಾರಣವಾಗಿದೆ ಎಂದು ತಿಳಿದುಬಂದಿದೆ.

Shivamogga: Tyavarekoppa tiger and lion safari tiger Hanuma death

ಅನಾರೋಗ್ಯದಿಂದ ಬಳಲುತ್ತಿದ್ದ ಹನುಮ

20 ವರ್ಷ ಕಳೆದ ಹನುಮ ಹುಲಿ ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದ, ದಿನ ಕಳೆದಂತೆ ಆತನ ಚಟುವಟಿಕೆಯೂ ಇಲ್ಲದಂತಾಗಿತ್ತು. ಆದರೆ, ಇಲ್ಲಿನ ಅರಣ್ಯಾಧಿಕಾರಿಗಳ ಮುತುವರ್ಜಿಯಿಂದ ಆತನು ಈವರೆಗೆ ಬದುಕಿದ್ದ ಎಂಬುದು ವಿಶೇಷ. ಹಿರಿಯ ಹುಲಿಯನ್ನು ಉಳಿಸಿಕೊಳ್ಳಲು ಸಿಂಹಧಾಮದ ಸಿಬ್ಬಂದಿಯೂ ಸಾಕಷ್ಟು ಶ್ರಮ ಹಾಕಿದ್ದರು. ಹನುಮ ಮಲಗುವುದಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಇದನ್ನು ಹೊರತುಪಡಿಸಿ ಆತನ ಓಡಾಟ ಹಾಗೂ ಊಟೋಪಚಾರದ ಬಗ್ಗೆ ವಿಶೇಷ ಗಮನ ವಹಿಸಲಾಗಿತ್ತು.

ಸಿಟ್ಟಿನಲ್ಲಿ ಮಾವುತನನ್ನೇ ಅಟ್ಟಾಡಿಸಿದ ಸಕ್ರೆಬೈಲಿನ ಸಾಕಾನೆಸಿಟ್ಟಿನಲ್ಲಿ ಮಾವುತನನ್ನೇ ಅಟ್ಟಾಡಿಸಿದ ಸಕ್ರೆಬೈಲಿನ ಸಾಕಾನೆ

ದಾಖಲೆ ಬರೆದ ಹನುಮ

ತಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದಲ್ಲಿ ಅತಿಹೆಚ್ಚು ದಿನ ಬದುಕಿದ ಗಂಡು ಹುಲಿ ಎಂಬ ಪ್ರಖ್ಯಾತಿಯನ್ನು ಹನುಮ ಹೊಂದಿದ್ದಾನೆ. ವಾಲಿ ಹಾಗೂ ರಾಮ ಹನುಮನ ಸೋದರರಾಗಿದ್ದರು. ಈ ಎರಡು ಹುಲಿಗಳು 18 ವರ್ಷಗಳ ಕಾಲ ಬದುಕಿದ್ದವು. ಲಯನ್‌ ಸಫಾರಿಯಲ್ಲಿಯೇ ಜನಿಸಿದ್ದ ಇವುಗಳನ್ನ ನೋಡಲೇಂದೆ ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಪ್ರವಾಸಿಗರು ಕಿಕ್ಕಿರಿದು ಬರುತ್ತಿದ್ದರು. ಹನುಮ ತನ್ನ ಹಾವಭಾವಗಳಿಂದಲೇ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದ್ದ.

ಹಿರಿಯ ಹನುಮ ಹುಲಿ ನಿಧನದ ನಂತರ ಸದ್ಯ ಸಿಂಹಧಾಮದಲ್ಲಿ ಹುಲಿಗಳ ಸಂಖ್ಯೆ 4ಕ್ಕೆ ಇಳಿದಿದೆ. ಎರಡು ವರ್ಷದ ಹಿಂದೆ ಸಿಂಹಧಾಮದಲ್ಲಿ ಗಂಡು ಹುಲಿಗಳೇ ಹೆಚ್ಚಿದ್ದವು. ಎರಡು ವರ್ಷದಿಂದ ಈಚೇಗೆ ರಾಮ, ವಾಲಿ, ಭರತ ಹಾಗೂ ಇದೀಗ ಹನುಮ ಸಾವನ್ನಪ್ಪಿರುವ ನಂತರ ಗಂಡು ಹುಲಿ ಎಂದು ಉಳಿದುಕೊಂಡಿರುವುದು ವಿಜಯ ಮಾತ್ರ. ಉಳಿದ ಮೂರು ಹುಲಿಗಳು ಹೆಣ್ಣು ಹುಲಿಗಳಾಗಿವೆ. ಇದರಲ್ಲಿ 16 ವರ್ಷ ಕಳೆದಿರುವ ಸೀತಾ ಸದ್ಯ ಸಿಂಹಧಾಮಕ್ಕೆ ಹಿರಿಯಕ್ಕಳಾಗಿದ್ದಾಳೆ. ಇನ್ನು ದಶಮಿ ಎಂಬ ಹೆಣ್ಣು ಹುಲಿಗೆ 15 ವರ್ಷ ಆಗಿದ್ದು, ಪೂರ್ಣಿಮಾಗೆ 12 ವರ್ಷದ ತುಂಬಿದೆ ಎನ್ನಲಾಗಿದೆ.

English summary
tiger hanuma death in Tyavarekoppa tiger and lion safari, Hanuma died due to age related problems and organ failure. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X