ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ: ಶಿವರಾತ್ರಿಗೆ ಹೋದ ಬಾಲಕರು ತುಂಗೆ ಪಾಲು

|
Google Oneindia Kannada News

ಶಿವಮೊಗ್ಗ, ಫೆ. 18: ನದಿ ದಂಡೆಯ ಮೇಲೆ ಶಿವರಾತ್ರಿ ಉತ್ಸವ ನಡೆಯುತ್ತಿತ್ತು. ಘಂಟಾ ಘೋಷ, ವಾದ್ಯಗಳ ಶಬ್ದ ಮೊಳಗುತ್ತಿತ್ತು. ಆದರೆ ಅದೇ ಸಮಯಕ್ಕೆ ಪಕ್ಕದ ನದಿಯಲ್ಲಿ ಈಜಲು ನೀರಿಗಿಳಿದಿದ್ದ ಮೂವರು ಬಾಲಕರು ನೀರು ಪಾಲಾಗಿದ್ದರು. ಅವರ ಆಕ್ರಂದನ ಉತ್ಸವದ ಗಲಾಟೆಯಲ್ಲಿ ಜನರ ಕಿವಿಗೆ ಕೇಳಲೇ ಇಲ್ಲ.

ಹೌದು... ಶಿವರಾತ್ರಿ ಉತ್ಸವಕ್ಕೆ ತೆರಳಿದ್ದ ಮೂವರು ಬಾಲಕರು ತುಂಗಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಶಿವಮೊಗ್ಗ ಅರಕೆರೆ ಸಮೀಪದ ಶಿವಾಲಯದ ಬಳಿಯ ತುಂಗಾ ನದಿ ಮೂವರು ಬಾಲಕರ ಪ್ರಾಣ ಬಲಿತೆಗೆದುಕೊಂಡಿದೆ.[ಗರ್ಭಿಣಿ ಪ್ರಿಯತಮೆಯನ್ನು ನದಿಗೆ ತಳ್ಳಿದ ಭೂಪ]

river

ಶಿವಮೊಗ್ಗದ ನಂದೀಶ್, ಲೋಹಿತ್ ಸಿಂಗ್ ಮತ್ತು ಅಭಿಷೇಕ್ ಸಾವೀಗೀಡಾದ ಬಾಲಕರು. ಫೆಬ್ರವರಿ 17 ಶಿವರಾತ್ರಿ ಪ್ರಯುಕ್ತ ಅರಕೆರೆಯಲ್ಲಿ ನಡೆಯುತ್ತಿದ್ದ ಉತ್ಸವಕ್ಕೆ ತೆರಳಿದ್ದ ಬಾಲಕರು ಈಜಲು ನದಿಗೆ ಇಳಿದಿದ್ದಾರೆ. ಆದರೆ ಮೂವರು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಘಟನೆ ಮಂಗಳಾರವೇ ನಡೆದಿದ್ದು ಬುಧವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ದುರ್ಗಿಗುಡಿಯ ಶಾಲೆಯಲ್ಲಿ ಎಸ್ಎಸ್ ಎಲ್ ಸಿ ಓದುತ್ತಿದ್ದ ನಾಲ್ವರು ಬಾಲಕರು ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಲು ಅರಕೆರೆಗೆ ಆಗಮಿಸಿದ್ದರು. ಈ ವೇಳೆ ಮೂವರು ಬಾಲಕರು ನೀರಿಗಿಳಿಯುವ ತೀರ್ಮಾನ ಮಾಡಿದ್ದಾರೆ. ಮತ್ತೊಬ್ಬ ಬಾಲಕ ನವೀನ್ ಮಾತ್ರ ಮೇಲೆ ಉಳಿದಿದ್ದಾನೆ.

ಸಂಜೆ ಮನೆಗೆ ಮಕ್ಕಳು ಹಿಂದಿರುಗದ್ದನ್ನು ನೋಡಿ ಪಾಲಕರು ಗಾಬರಿಗೊಂಡಿದ್ದಾರೆ. ತಕ್ಷಣ ಅಕ್ಕಪಕ್ಕದವರೊಂದಿಗೆ ಸೇರಿ ಮಕ್ಕಳನ್ನು ಹುಡುಕಲು ಪ್ರಯತ್ನ ಮಾಡಿದ್ದಾರೆ. ರಾತ್ರಿಯಿಡಿ ಮಕ್ಕಳಿಗಾಗಿ ಹುಡುಕಾಟ ನಡೆಸಿದರೂ ಪ್ರಯೋಜನವಾಗಿಲ್ಲ.

ನಂತರ ಬೆಳಗಿನ ಜಾವ ಮಕ್ಕಳ ಪಾಲಕರು ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರೆ. ಬುಧವಾರ ಬೆಳಗ್ಗೆ ತುಂಗಾ ನದಿಯಲ್ಲಿ ಲೋಹಿತ್ ಸಿಂಗ್ ಎಂಬ ಬಾಲಕನ ಶವ ತೆಲುತ್ತಿರುವುದು ಕಂಡುಬಂದಿದೆ. ಇದನ್ನು ತಿಳಿದ ಪೊಲೀಸರು ಹುಡುಕಾಟ ನಡೆಸಿದಾಗ ಮಕ್ಕಳ ಶವ ಪತ್ತೆಯಾಗಿದೆ.

English summary
Shivamogga: Three boys lost their lives in Tunga River on February 17. The boys who are natative of Shivamogga Nandeesh, Lohit and Abhishek fall in water near Arakere.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X