ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ; ಸೆಪ್ಟೆಂಬರ್ 1ರಿಂದ ಮತ್ತೊಂದು ರೈಲು, ವಿವರಗಳು

|
Google Oneindia Kannada News

ಶಿವಮೊಗ್ಗ, ಆಗಸ್ಟ್ 30; ಶಿವಮೊಗ್ಗ ಜಿಲ್ಲೆಯ ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ. ಬಹುದಿನಗಳಿಂದ ಸ್ಥಗಿತಗೊಂಡಿದ್ದ ಹಲವು ಭಾಗಗಳಿಗೆ ಸಂಪರ್ಕ ಕಲ್ಪಿಸುವ ರೈಲು ಸೇವೆಗಳು ಪುನಃ ಆರಂಭಗೊಳ್ಳಲಿವೆ. ಶಿವಮೊಗ್ಗ-ತಾಳಗುಪ್ಪ ನಡುವಿನ ಪ್ಯಾಸೆಂಜರ್ ರೈಲು ಸಹ ಸೆಪ್ಟೆಂಬರ್ 1ರಿಂದ ಆರಂಭವಾಗುತ್ತಿದೆ.

ಕೋವಿಡ್ ಪರಿಸ್ಥಿತಿಯ ಕಾರಣ ಅನೇಕ ರೈಲುಗಳ ಸಂಚಾರದಲ್ಲಿ ಕಳೆದ ಎರಡು ವರ್ಷಗಳಲ್ಲಿ ವ್ಯತ್ಯಯ ಉಂಟಾಗಿತ್ತು. ಅದನ್ನು ಸರಿಪಡಿಸಲು ರೈಲ್ವೆ ಇಲಾಖೆಯ ಜೊತೆ ಸಂಸದ ಬಿ. ವೈ. ರಾಘವೇಂದ್ರ ನಿರಂತರ ಮಾತುಕತೆ ನಡೆಸಿದ್ದು, ಈಗ ರೈಲು ಸಂಚಾರಕ್ಕೆ ಒಪ್ಪಿಗೆ ಸಿಕ್ಕಿದೆ.

ಹೊಸಕೋಟೆಗೆ ನಮ್ಮ ಮೆಟ್ರೋ ರೈಲು ಸಂಪರ್ಕ ಕಲ್ಪಿಸಿ ಹೊಸಕೋಟೆಗೆ ನಮ್ಮ ಮೆಟ್ರೋ ರೈಲು ಸಂಪರ್ಕ ಕಲ್ಪಿಸಿ

ಈಗಾಗಲೇ ಸಂಚರಿಸುತ್ತಿರುವ ರೈಲುಗಳ ಜೊತೆಗೆ ರೈಲು ಸಂಖ್ಯೆ 67369/ 75 ತಾಳಗುಪ್ಪ-ಶಿವಮೊಗ್ಗ ಟೌನ್-ತಾಳಗುಪ್ಪ ಪ್ಯಾಸೆಂಜರ್ ರೈಲು ಸೇವೆ ಸೆಪ್ಟೆಂಬರ್ 1ರಿಂದ ಆರಂಭವಾಗುತ್ತಿದೆ.

ಬೆಂಗಳೂರು-ಹುಬ್ಬಳ್ಳಿ ನಡುವೆ ವಾರಾಂತ್ಯ ವಿಶೇಷ ರೈಲು ಬೆಂಗಳೂರು-ಹುಬ್ಬಳ್ಳಿ ನಡುವೆ ವಾರಾಂತ್ಯ ವಿಶೇಷ ರೈಲು

Shivamogga Talaguppa Passenger Train From September 1

ರೈಲು ಸಂಖ್ಯೆ 07311/ 07312 ಯಶವಂತಪುರ-ಶಿವಮೊಗ್ಗ-ಯಶವಂತಪುರ ವಾರಕ್ಕೆ 3 ಬಾರಿ ಸಂಚರಿಸುವ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಅಕ್ಟೋಬರ್ 12ರಿಂದ ಪುನಃ ಆರಂಭಿಸಲಾಗುತ್ತಿದೆ. ಈ ರೈಲು ಸೋಮವಾರ ಬುಧವಾರ ಮತ್ತು ಶನಿವಾರ ಸಂಚಾರ ನಡೆಸಲಿದೆ.

ಶಿವಮೊಗ್ಗ-ತಾಳಗುಪ್ಪ ನಡುವಿನ ಅರಸಾಳು ರೈಲ್ವೆ ನಿಲ್ದಾಣದ ಪ್ಲಾಟ್‍ಫಾರಂ ವಿಸ್ತರಣಾ ಕಾಮಗಾರಿ 2020ರ ಜನವರಿಯಲ್ಲಿ ಲೋಕಾರ್ಪಣೆ ಮಾಡಲಾಗಿದ್ದು, ಈಗ 24 ಕೋಚ್‍ಗಳ ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಗೆ ಬೇಕಾದ ಮೂಲಸೌಕರ್ಯವನ್ನು ಹೊಂದಿರುತ್ತದೆ.

ರೈಲ್ವೆ ಇಲಾಖೆಯು 06227-06228 ಮೈಸೂರು-ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್ ರೈಲನ್ನು 1/9/2021 ರಿಂದ ಅರಸಾಳು ನಿಲ್ದಾಣದಲ್ಲಿ ನಿಲುಗಡೆ ಮಾಡಲಿದೆ.

ಬೆಂಗಳೂರು-ಶಿವಮೊಗ್ಗ ನಡುವೆ ಮತ್ತೊಂದು ರೈಲು; ವೇಳಾಪಟ್ಟಿ ಬೆಂಗಳೂರು-ಶಿವಮೊಗ್ಗ ನಡುವೆ ಮತ್ತೊಂದು ರೈಲು; ವೇಳಾಪಟ್ಟಿ

ಶಿವಮೊಗ್ಗ -ಯಶವಂತಪುರ-ಶಿವಮೊಗ್ಗ ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಈಗಾಗಲೇ ಬೆಂಗಳೂರು ನಗರ ನಿಲ್ದಾಣದವರೆಗೆ ವಿಸ್ತರಿಸಲಾಗಿದೆ. ಮೈಸೂರು-ಬೆಂಗಳೂರು-ತಾಳಗುಪ್ಪ ಎಕ್ಸ್‌ಪ್ರೆಸ್ ಬೆಳಗಿನ ಜಾವ ಸುಮಾರು 4 ಗಂಟೆಗೆ ತಲುಪುತಿದ್ದು, ಪ್ರಯಾಣಿಕರಿಗೆ ಅನಾನುಕೂಲವಾಗುತ್ತಿತ್ತು, ಶಿವಮೊಗ್ಗದಲ್ಲಿ ಈ ರೈಲು ಬೆಳಗ್ಗೆ 5 ಗಂಟೆಗೆ ಆಗಮಿಸುವಂತೆ ವೇಳಾಪಟ್ಟಿಯಲ್ಲಿ ಮಾರ್ಪಾಡು ಮಾಡಲಾಗಿದೆ.

ಹಾಗೆಯೇ ತಾಳಗುಪ್ಪ-ಶಿವಮೊಗ್ಗ-ಬೆಂಗಳೂರು ಎಕ್ಸ್‌ಪ್ರೆಸ್ ಸೇವೆಯು ಬೆಂಗಳೂರು ನಗರ ನಿಲ್ದಾಣಕ್ಕೆ ಸುಮಾರು 4 ಗಂಟೆಗೆ ತಲುಪುತ್ತಿದ್ದದ್ದನ್ನು ಈಗ 5 ಗಂಟೆಗೆ ಆಗಮಿಸುವಂತೆ ಮಾಡಲಾಗಿದೆ.

ಶಿವಮೊಗ್ಗ ಭಾಗದ ಎಲ್ಲಾ ಪ್ರಯಾಣಿಕರು ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಹೊರಡಿಸಿರುವ ನಿಯಮಾವಳಿಗಳನ್ನು ಪಾಲಿಸುತ್ತಾ, ಸಾಮಾಜಿಕ ಅಂತರವನ್ನು ಪಾಲಿಸಿಕೊಂಡು ರೈಲುಗಳಲ್ಲಿ ಸಂಚಾರ ಮಾಡಬಹುದಾಗಿದೆ.

ವಾರಾಂತ್ಯದ ವಿಶೇಷ ರೈಲು; ಪ್ರಯಾಣಿಕರ ಅನುಕೂಲಕ್ಕಾಗಿ ವಾರಾಂತ್ಯದಲ್ಲಿ ಬೆಂಗಳೂರು-ಹುಬ್ಬಳ್ಳಿ ನಡುವೆ ವಿಶೇಷ ರೈಲನ್ನು ಓಡಿಸುವುದಾಗಿ ನೈಋತ್ಯ ರೈಲ್ವೆ ಘೋಷಣೆ ಮಾಡಿದೆ. ಯಶವಂತಪುರ-ಹುಬ್ಬಳ್ಳಿ ನಡುವೆ ಪ್ರತಿ ಶುಕ್ರವಾರ ಮತ್ತು ಶನಿವಾರ ವಿಶೇಷ ರೈಲು ಸಂಚಾರ ನಡೆಸಲಿದೆ.

ಯಶವಂತರಪುರದಿಂದ ರೈಲು ಸೆಪ್ಟೆಂಬರ್ 3ರಂದು 11.50ಕ್ಕೆ ಹೊರಡಲಿದೆ. ಹುಬ್ಬಳ್ಳಿಯಿಂದ ಸೆಪ್ಟೆಂಬರ್ 4ರಂದು ರಾತ್ರಿ 7.35ಕ್ಕೆ ಹೊರಡಲಿದೆ. ಯಶವಂತಪುರದಿಂದ ಹೊರಡುವ ರೈಲು ತುಮಕೂರು, ಅರಸೀಕೆರೆ ಜಂಕ್ಷನ್, ದಾವಣಗೆರೆ, ಹರಿಹರ, ಹಾವೇರಿ ಮಾರ್ಗವಾಗಿ ಸಂಚರಿಸಲಿದೆ.

English summary
South western railway will run Shivamogga to Talaguppa passenger train from September 1, 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X