ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟ್ರೋಲ್ ಆದ ಈ ಪುಟ್ಟ ಹುಡುಗನ ಫೋಟೊ ಕಥೆ

By ರಘು ಶಿಕಾರಿ
|
Google Oneindia Kannada News

ಶಿವಮೊಗ್ಗ, ನವೆಂಬರ್ 11: ನವೆಂಬರ್ 1ರಂದು ಮಕ್ಕಳು, ಶಾಲಾ ಶಿಕ್ಷಕರು ಎಲ್ಲರೂ ಕನ್ನಡ ರಾಜ್ಯೋತ್ಸವದ ಆಚರಣೆಯಲ್ಲಿ ಮಗ್ನರಾಗಿದ್ದರು. ಸಚಿವ ಈಶ್ವರಪ್ಪ ಶಿವಮೊಗ್ಗದಲ್ಲಿ ಧ್ವಜಾರೋಹಣ ಮುಗಿಸಿ ಶಾಲಾ ಮಕ್ಕಳ ನೃತ್ಯವನ್ನು ನೋಡುತ್ತಿದ್ದರು. ಈ ಸಂದರ್ಭದಲ್ಲೇ ಧ್ವಜದ ಕಟ್ಟೆ ಹತ್ತಿ ಖಾಸಗಿ ಶಾಲಾ ವಿದ್ಯಾರ್ಥಿಗಳು ನೃತ್ಯ ಮಾಡುತ್ತಿದ್ದುದನ್ನು ಗಾಂಭೀರ್ಯದಿಂದ ನೋಡುತ್ತಾ ನಿಂತಿದ್ದ ಒಬ್ಬ ಹುಡುಗ.

ಈ ಪುಟ್ಟ ಹುಡುಗನ ವಿಡಿಯೋ ಮತ್ತು ಚಿತ್ರ ತುಂಬಾ ಟ್ರೋಲ್ ಆಗಿತ್ತು. ಗತ್ತಿನಿಂದ ನೋಡುತ್ತಾ ನಿಂತಿದ್ದ ಈ ಹುಡುಗನ ಚಿತ್ರ ಸಾವಿರಾರು ಜನರಿಂದ ಮೆಚ್ಚುಗೆ ಪಡೆದಿತ್ತು. ಕನ್ನಡ ಸರ್ಕಾರಿ ಶಾಲೆಗಳ ಮಕ್ಕಳ ಧೈರ್ಯವನ್ನು ಕೊಂಡಾಡುತ್ತಾ ಹಲವು ಕಮೆಂಟ್ ಗಳೂ ಈ ಫೋಟೊಗೆ ಬಂದಿದ್ದವು. ರಾಜಾರೋಷವಾಗಿ ಧ್ವಜದ ಕಟ್ಟೆ ಹತ್ತಿ ನೃತ್ಯವನ್ನು ನೋಡುತ್ತಾ ನಿಂತಿದ್ದ ಈ ಪುಟ್ಟ ಹುಡುಗನಿಗೆ, ಅವನ ಧೈರ್ಯಕ್ಕೆ, ಆ ಮುಗ್ಧತೆಗೆ ಎಷ್ಟೋ ಮಂದಿ ಮನಸೋತಿದ್ದರು.

'ನಿಖಿಲ್ ಎಲ್ಲಿದ್ದೀಯಪ್ಪಾ' ಎಂದಿದ್ದಕ್ಕೆ ಬಂಧಿಸಿದ್ದ ಪೊಲೀಸರಿಗೆ ಹೈಕೋರ್ಟ್ ಛೀಮಾರಿ'ನಿಖಿಲ್ ಎಲ್ಲಿದ್ದೀಯಪ್ಪಾ' ಎಂದಿದ್ದಕ್ಕೆ ಬಂಧಿಸಿದ್ದ ಪೊಲೀಸರಿಗೆ ಹೈಕೋರ್ಟ್ ಛೀಮಾರಿ

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ, ವಿಧಾನ ಪರಿಷತ್ ಸದಸ್ಯ ಆರ್ ಪ್ರಸನ್ನಕುಮಾರ್ ಹಾಗೂ ಎಲ್ಲಾ ಜಿಲ್ಲಾ ಪಂಚಾಯತ್ ಸದಸ್ಯರು ಜಿಲ್ಲಾಧಿಕಾರಿಗಳು ಸೇರಿದಂತೆ ಎಲ್ಲಾ ಸರ್ಕಾರಿ ಅಧಿಕಾರಿಗಳು ಇದ್ದರು.

Shivamogga Student Watching Dance Photo Trolled In Facebook

ಸಿನಿಮಾ ಸ್ಟಾರ್ ಗಳೆಲ್ಲ ಈಗ ಎಲ್ಲಿ ಹೋದ್ರಿ? ವೈರಲ್ ಆಗಿದೆ ಬೆಳಗಾವಿ ಟ್ರೋಲ್ ಸಿನಿಮಾ ಸ್ಟಾರ್ ಗಳೆಲ್ಲ ಈಗ ಎಲ್ಲಿ ಹೋದ್ರಿ? ವೈರಲ್ ಆಗಿದೆ ಬೆಳಗಾವಿ ಟ್ರೋಲ್

ಆದರೂ ಈ ಹುಡುಗ ತನ್ನಷ್ಟಕ್ಕೆ ತಾನು ನೃತ್ಯವನ್ನು ನೋಡುತ್ತಾ ನಿಂತಿದ್ದ. ಎಎನ್ಐ ಸುದ್ದಿ ಸಂಸ್ಥೆಯ ವರದಿಗಾರ ಉದಯ್ ಸಾಗರ್ ಈ ವೀಡಿಯೋ ಮಾಡಿದ್ದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದರು.

English summary
The photo of shivamogga small boy watching dance gone viral in facebook. There is a small story behind this photo
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X