ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking:ಶಿವಮೊಗ್ಗ ಚೂರಿ ಇರಿತ ಪ್ರಕರಣದ ಆರೋಪಿಗೆ ಉಗ್ರರ ನಂಟು: ಆರಗ ಜ್ಞಾನೇಂದ್ರ

By ಶಿಮಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಸೆಪ್ಟೆಂಬರ್ 3: ಸಾವರ್ಕರ್ ಫೋಟೊ ವಿವಾದ ಸಂದರ್ಭ ಯುವಕನಿಗೆ ಚಾಕು ಇರಿದ ಆರೋಪಿ ಜಬೀವುಲ್ಲಾನ ಹಿನ್ನೆಲೆ ಭಯಾನಕವಾಗಿದೆ. ಆತನಿಗೆ ಹಲವು ಉಗ್ರ ಗುಂಪಿನೊಂದಿಗೆ ನಂಟು ಇದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಶನಿವಾರ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಉಗ್ರ ಗುಂಪಿನೊಂದಿಗೆ ನಂಟು ಇರುವ ಹಿನ್ನಲೆಯಲ್ಲಿ ಶೀಘ್ರದಲ್ಲೇ ಜಬೀವುಲ್ಲಾ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಲಾಗುತ್ತದೆ. ಇಂತಹವರಿಂದ ದೇಶ ಉಳಿಯುತ್ತದೆ. ಆತನ ಹಿನ್ನೆಲೆ ಭಯಾನಕವಾಗಿ ಇರುವುದರಿಂದ ಎನ್ಐಎಗೆ ಪ್ರಕರಣ ವಹಿಸಲಾಗುತ್ತಿದೆ ಎಂದು ತಿಳಿಸಿದರು.

ಮುರುಘಾ ಮಠದ ಸ್ವಾಮೀಜಿ ನನಗೆ ದೇವರ ಸಮಾನ: ಕೆಎಸ್ ಈಶ್ವರಪ್ಪಮುರುಘಾ ಮಠದ ಸ್ವಾಮೀಜಿ ನನಗೆ ದೇವರ ಸಮಾನ: ಕೆಎಸ್ ಈಶ್ವರಪ್ಪ

ಯಾರಿದು ಜಬೀವುಲ್ಲಾ?

ಆಗಸ್ಟ್ 15ರಂದು ಶಿವಮೊಗ್ಗದ ಅಮೀರ್ ಅಹಮದ್ ಸರ್ಕಲ್‌ನಲ್ಲಿ ಸಾರ್ವಕರ್ ಫ್ಲೆಕ್ಸ್ ವಿವಾದ ಸಂಬಂಧ ಗಲಾಟೆಯಾಗಿತ್ತು. ಆ ದಿನ ಗಾಂಧಿ ಬಜಾರ್ ಬಳಿ ಪ್ರೇಮ್ ಸಿಂಗ್ ಎಂಬ ಯುವಕನಿಗೆ ಚಾಕು ಇರಿಯಲಾಗಿತ್ತು. ಈ ಪ್ರಕರಣ ಸಂಬಂಧ ಜಬೀವುಲ್ಲಾನ ಪಾತ್ರ ಇರುವುದು ಪೊಲೀಸರಿಗೆ ತಿಳಿದು ಬಂದಿತ್ತು.

Shivamogga stabbed case: Accused Link with Terror Groups: Araga Jnanendra

ಮಾರ್ನಮಿ ಬೈಲು ನಿವಾಸಿ ಜಬೀವುಲ್ಲಾ ಅಲಿಯಾಸ್ ಚರ್ಬಿ (30) ಎಂಬಾತನನ್ನು ಬಂಧಿಸುವ ವೇಳೆ, ಪೊಲೀಸರ ಮೇಲೆ ಚಾಕುವಿನಿಂದ ದಾಳಿ ಮಾಡಲು ಯತ್ನಿಸಿದ್ದ. ಈ ಸಂದರ್ಭ ಪೊಲೀಸರು ಆತ್ಮರಕ್ಷಣೆಗೆ ಹಾರಿಸಿದ ಗುಂಡು, ಜಬೀವುಲ್ಲಾನ ಕಾಲಿಗೆ ತಗುಲಿತ್ತು. ಗಾಯಗೊಂಡಿದ್ದ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇತ್ತೀಚೆಗಷ್ಟೆ ಜಬೀವುಲ್ಲಾ ಆಸ್ಪತ್ರೆಯಿಂದ ಬಿಡುಗಡೆಯಾಗಿ, ಜೈಲು ಸೇರಿದ್ದ.

Shivamogga stabbed case: Accused Link with Terror Groups: Araga Jnanendra

ಜಬೀವುಲ್ಲಾ ಮನೆ ಮೇಲೆ ದಾಳಿ

ಜಬೀವುಲ್ಲಾ ಸೇರಿದಂತೆ ಚಾಕು ಇರಿತ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳ ಹಿನ್ನೆಲೆ ಕುರಿತು ಅನುಮಾನ ವ್ಯಕ್ತಪಡಿಸಿದ್ದ ಪೊಲೀಸರು, ಮನೆಗಳ ಮೇಲೆ ದಾಳಿ ನಡೆಸಿದ್ದರು. ರಾತ್ರೋರಾತ್ರಿ ದಾಳಿ ನಡೆಸಿದ್ದ ಪೊಲೀಸರು ಕೆಲವು ವಸ್ತುಗಳು ಮತ್ತು ದಾಖಲೆಗಳನ್ನು ವಶಕ್ಕೆ ಪಡೆದಿದ್ದರು.

English summary
Accused who arrested for stabbing a youth on August 15 in Shivamogga has links with Pakistan-based terror outfits, said Home Minister Araga Jnanendra on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X