ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಣ್ಣು ಕಾಣದ ವ್ಯಕ್ತಿ ಕಾಲು ಮುರಿದ ಶಿವಮೊಗ್ಗ ಸ್ಮಾರ್ಟ್ ಸಿಟಿ ಗುಂಡಿ!

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಜನವರಿ 30; ಶಿವಮೊಗ್ಗ ನಗರದಲ್ಲಿನ ಸ್ಮಾರ್ಟ್ ಸಿಟಿ ಕಾಮಗಾರಿಯ ಅವಾಂತರಗಳು ನಿಲ್ಲುವ ಹಾಗೆ ಕಾಣುತ್ತಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಜನರು ಪ್ರತಿದಿನ ಹಿಡಿಶಾಪ ಹಾಕುವಂತಾಗಿದೆ. ಈಗ ಸ್ಮಾರ್ಟ್ ಸಿಟಿ ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ಅಂಧನೊಬ್ಬ ಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದ್ದಾರೆ. ನೋವಿನಿಂದ ಸಂಕಟ ಪಡುತ್ತಿದ್ದಾರೆ.

ಇಮಾಮ್ ಸಾಬ್ ಇನಾಂದಾರ್ (38) ಎಂಬ ಅಂಧರೊಬ್ಬರು ಸ್ಮಾರ್ಟ್ ಸಿಟಿ ಗುಂಡಿಗೆ ಬಿದ್ದು ಕಾಲು ಮುರಿದುಕೊಂಡಿದ್ದಾರೆ. ಗುತ್ತಿಗೆದಾರರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಆರೋಪಿಸಲಾಗಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಸ್ಮಾರ್ಟ್ ಆಗಬೇಕಿದ್ದ ಶಿವಮೊಗ್ಗ ಧೂಳು ಸಿಟಿಯಾಯ್ತು, ಜನರಲ್ಲಿ ಉಲ್ಬಣಿಸಿದ ಶ್ವಾಸಕೋಶ ಸಮಸ್ಯೆ ಸ್ಮಾರ್ಟ್ ಆಗಬೇಕಿದ್ದ ಶಿವಮೊಗ್ಗ ಧೂಳು ಸಿಟಿಯಾಯ್ತು, ಜನರಲ್ಲಿ ಉಲ್ಬಣಿಸಿದ ಶ್ವಾಸಕೋಶ ಸಮಸ್ಯೆ

ಇಮಾಮ್ ಸಾಬ್ ಇನಾಂದಾರ್ ಮೂಲತಃ ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನವರು. ಹುಟ್ಟಿನಿಂದ ಅಂಧತ್ವ ಇದೆ. ಕಳೆದ ಐದು ವರ್ಷದಿಂದ ಶಿವಮೊಗ್ಗ ನ್ಯಾಯಾಲಯದಲ್ಲಿ 2ನೇ ಡಿವಿಜನ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ.

ಸ್ಮಾರ್ಟ್ ಸಿಟಿ; ರಸ್ತೆ ಗುಂಡಿ ಮುಚ್ಚಿದ ಶಿವಮೊಗ್ಗ ಪೊಲೀಸರು! ಸ್ಮಾರ್ಟ್ ಸಿಟಿ; ರಸ್ತೆ ಗುಂಡಿ ಮುಚ್ಚಿದ ಶಿವಮೊಗ್ಗ ಪೊಲೀಸರು!

ವೀರಭದ್ರೇಶ್ವರ ಟಾಕೀಸ್ ಬಳಿ ಇರುವ ಮುಸ್ಲಿಂ ಹಾಸ್ಟೆಲ್‌ನಲ್ಲಿ ವಾಸವಾಗಿದ್ದಾರೆ. 5 ವರ್ಷದಿಂದ ಕುವೆಂಪು ರಂಗಮಂದಿರ ಮುಂಭಾಗದ ರಸ್ತೆಯ ಮೂಲಕ ನ್ಯಾಯಾಲಯಕ್ಕೆ ತೆರಳುತ್ತಿದ್ದರು. ಗುರುವಾರ ಮಧ್ಯಾಹ್ನ ಊಟಕ್ಕೆಂದು ನ್ಯಾಯಾಲಯದಿಂದ ಹಾಸ್ಟೆಲ್‌ಗೆ ತೆರಳುವಾಗ ಗುಂಡಿಗೆ ಬಿದ್ದು ಕಾಲು ಮುರಿದುಕೊಂಡಿದ್ದಾರೆ.

ಶಿವಮೊಗ್ಗ ಸ್ಮಾರ್ಟ್ ಸಿಟಿ; ಕಂಡಕಂಡಲ್ಲಿ ಗುಂಡಿ, ಮಳೆಯಲ್ಲಿ ಸಂಕಷ್ಟ!ಶಿವಮೊಗ್ಗ ಸ್ಮಾರ್ಟ್ ಸಿಟಿ; ಕಂಡಕಂಡಲ್ಲಿ ಗುಂಡಿ, ಮಳೆಯಲ್ಲಿ ಸಂಕಷ್ಟ!

ಹೊಸದಾಗಿ ಗುಂಡಿ ತೋಡಲಾಗಿದೆ

ಹೊಸದಾಗಿ ಗುಂಡಿ ತೋಡಲಾಗಿದೆ

ಇಮಾಮ್ ಸಾಬ್ ಇನಾಂದಾರ್ ಶಿವಮೊಗ್ಗ ನ್ಯಾಯಾಲಯದಿಂದ ಹಾಸ್ಟೆಲ್‌ಗೆ ಪ್ರತಿದಿನದ ಹಾಗೆ ರಾಷ್ಟ್ರೀಯ ಕಾನೂನು ಕಾಲೇಜು ಮುಂಭಾಗದ ರಸ್ತೆಯಲ್ಲಿ ನಡೆದು ಬರುತ್ತಿದ್ದರು. ಆದರೆ ಆ ರಸ್ತೆಯಲ್ಲಿ ಹೊಸತೊಂದು ಗುಂಡಿ ತೆಗೆದಿರುವುದು ಇಮಾಮ್ ಸಾಬ್ ಇನಾಂದಾರ್ ಗಮನಕ್ಕೆ ಬಂದಿರಲಿಲ್ಲ.

"ನಾನು ಪ್ರತಿದಿನ ಓಡಾಡುವ ರಸ್ತೆ ಅದು. ಹೊಸದಾಗಿ ಗುಂಡಿ ತೆಗೆದಿದ್ದಾರೆ. ನಾನು ಸ್ಟಿಕ್ ಇಟ್ಟು, ಎಡಗಾಲು ಮುಂದಿಟ್ಟೆ. ನೇರವಾಗಿ ಗುಂಡಿಯೊಳಗೆ ಬಿದ್ದೆ. ತೊಡೆ ಭಾಗದಲ್ಲಿ ಭಾರಿ ನೋವಾಯಿತು" ಎಂದು ಹೇಳಿದ್ದಾರೆ.

ಇಮಾಮ್ ಸಾಬ್ ಇನಾಂದಾರ್ ಬಿದ್ದ ಗುಂಡಿಯೊಳಗೆ ಕಬ್ಬಿಣದ ರಾಡ್‌ಗಳನ್ನು ಹಾಕಿರಲಿಲ್ಲ. ಒಂದು ವೇಳೆ ರಾಡ್ ಹಾಕಿದ್ದರೆ ದೊಡ್ಡ ಅನಾಹುತ ಸಂಭವಿಸುತ್ತಿತ್ತು. ಸದ್ಯ ಇಮಾಮ್ ಸಾಬ್ ಇನಾಂದಾರ್ ಬಲಗಾಲಿಗೆ ಫ್ರಾಕ್ಚರ್ ಆಗಿದೆ. ಒಂದೂವರೆ ತಿಂಗಳು ವಿಶ್ರಾಂತಿ ಪಡೆಯಬೇಕು ಎಂದು ವೈದ್ಯರು ಸೂಚಿಸಿದ್ದಾರೆ.

ಗುತ್ತಿಗೆದಾರರ ಗಾಢ ನಿರ್ಲಕ್ಷ್ಯ

ಗುತ್ತಿಗೆದಾರರ ಗಾಢ ನಿರ್ಲಕ್ಷ್ಯ

ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳು ಅವೈಜ್ಞಾನಿಕ ಎಂಬ ಆರೋಪವಿದೆ. ಈ ಮಧ್ಯೆ ಕಾಮಗಾರಿ ಸಂದರ್ಭ ಜನರ ಸುರಕ್ಷತೆ ಬಗ್ಗೆ ಕಿಂಚಿತ್ತು ಗಮನ ಹರಿಸುತ್ತಿಲ್ಲ ಎಂಬ ಆಕ್ರೋಶವಿದೆ. ಕಾಮಗಾರಿಗಾಗಿ ಗುಂಡಿ ತೆಗೆದು ಹಾಗೆ ಬಿಡಲಾಗುತ್ತದೆ. ಗುಂಡಿಯ ಸುತ್ತಲು ಬ್ಯಾರಿಕೇಡ್ ಅಳವಡಿಸಬೇಕು. ಅದರೆ ಆ ಬಗ್ಗೆ ಗುತ್ತಿಗೆದಾರರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದನ್ನು ಪರಿಶೀಲಿಸಬೇಕಾದ ಅಧಿಕಾರಿಗಳು ಕ್ಯಾರೆ ಅನ್ನದೆ ಕಚೇರಿಗೆ ಸೀಮತವಾಗಿದ್ದಾರೆ. ಇದೇ ಕಾರಣಕ್ಕೆ ಇಮಾಮ್ ಸಾಬ್ ಇನಾಂದಾರ್ ಬಿದ್ದು ಗಾಯಗೊಂಡಿದ್ದಾರೆ.

ಗುತ್ತಿಗೆದಾರನ ವಿರುದ್ಧ ಕೇಸ್

ಗುತ್ತಿಗೆದಾರನ ವಿರುದ್ಧ ಕೇಸ್

ಸ್ಮಾರ್ಟ್ ಸಿಟಿ ಗುತ್ತಿಗೆದಾರರು ಸುರಕ್ಷತಾ ಕ್ರಮ ಕೈಗೊಳ್ಳದಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಇಮಾಮ್ ಸಾಬ್ ಇನಾಂದಾರ್ ದೂರು ದಾಖಲಿಸಿದ್ದಾರೆ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.

"ನನಗೆ ಆದಂಗೆ ಇನ್ನೊಬ್ಬರಿಗೆ ಆಗಬಾರದು. ಯಾರಿಗೂ ನೋವಾಗಬಾರದು ಅನ್ನುವ ಕಾರಣಕ್ಕೆ ದೂರು ಕೊಟ್ಟಿದ್ದೇನೆ. ಈತನಕ ಸ್ಮಾರ್ಟ್ ಸಿಟಿಯ ಅಧಿಕಾರಿಗಳ್ಯಾರು ಬಂದು ತಮ್ಮ ಆರೋಗ್ಯ ವಿಚಾರಿಸಿಲ್ಲ" ಎಂದು ಬೇಸರ ವ್ಯಕ್ತಪಡಿಸುತ್ತಾರೆ ಗಾಯಾಳು ಇಮಾಮ್ ಸಾಬ್ ಇನಾಂದಾರ್.

ಜನ, ಜಾನುವಾರುಗಳಿಗೆ ನಿತ್ಯ ಸಂಕಷ್ಟ

ಜನ, ಜಾನುವಾರುಗಳಿಗೆ ನಿತ್ಯ ಸಂಕಷ್ಟ

ಸ್ಮಾಟ್ ಸಿಟಿ ಕಾಮಗಾರಿ ಶುರುವಾದಾಗಿನಿಂದ ಶಿವಮೊಗ್ಗದ ಜನರು ಧೂಳು ಮತ್ತು ಗುಂಡಿಗಳ ಸಮಸ್ಯೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಗುಂಡಿ ತೆಗೆದು ಎಚ್ಚರಿಕೆ ಫಲಕಗಳನ್ನು ಅಳವಡಿಸದೆ ಜನ, ಜಾನುವಾರುಗಳು ಬಿದ್ದು, ನುಲುಗಿದ ಹಲವು ಉದಾಹರಣೆ ಇದೆ. ನಿಧಾನಗತಿ ಕಾಮಗಾರಿಯಿಂದಾಗಿ ಶಿವಮೊಗ್ಗ ನಗರ ಧೂಳುಮಯವಾಗಿದೆ. ಇದರಿಂದ ಶ್ವಾಸಕೋಶ ಸಮಸ್ಯೆಗಳು ಉಂಟಾಗಿವೆ. ಇಷ್ಟಾದರೂ ಪಾಲಿಕೆ ಅಧಿಕಾರಿಗಳು, ಗುತ್ತಿಗೆದಾರರು ಜನರ ಸುರಕ್ಷತೆ ಬಗ್ಗೆ ಕ್ರಮ ಕೈಗೊಳ್ಳದೆ ಸ್ಮಾರ್ಟ್ ಸಿಟಿ ನಿರ್ಮಿಸಲು ಹೊರಟಿದ್ದಾರೆ.

Recommended Video

Rohit Sharma ತಂಡಕ್ಕೆ ಫ್ಲೈಟ್ ವ್ಯವಸ್ಥೆ ಮಾಡದ BCCI | Oneindia Kannada

English summary
Shivamogga court second division assistant leg fracture due to smart city work project at Shivamogga city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X