ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗದಲ್ಲಿ ಹೆಚ್ಚಿದ ಸೈಬರ್ ಕ್ರೈಂ; 3.31 ಕೋಟಿ ವಂಚನೆ!

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಮಾರ್ಚ್ 22: ಡಿಜಿಟಲ್ ಯುಗದಲ್ಲಿ ಆನ್‌ಲೈನ್ ಬಳಕೆ ಅನಿವಾರ್ಯವಾಗಿದೆ. ಕೋವಿಡ್ ಕಾಲಿಟ್ಟ ಬಳಿಕ ಬಹುತೇಕರು ಮನೆಗಳಲ್ಲೇ ಕುಳಿತು ಆನ್‌ಲೈನ್ ಮೂಲಕ ವ್ಯವಹರಿಸುವುದು ಹೆಚ್ಚಾಗಿದೆ. ಆದರೆ ಅದನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ಕಳ್ಳರು ಜಿಲ್ಲೆಯಲ್ಲಿ ಕಳೆದೊಂದು ವರ್ಷದಲ್ಲಿ ಬರೋಬ್ಬರಿ 3.31 ಕೋಟಿ ರೂ. ವಂಚನೆ ಮಾಡಿದ್ದಾರೆ.

ಹೌದು, 2020ರ ಮಾರ್ಚ್‌ನಿಂದ ಇಲ್ಲಿವರೆಗೆ 133 ಆನ್‌ಲೈನ್ ವಂಚನೆ ದೂರು ಸೈಬರ್ ಠಾಣೆ ಮೆಟ್ಟಿಲೇರಿದ್ದು ಆರ್ಥಿಕ ಸಂಕಷ್ಟದ ನಡುವೆಯೂ ಜನಸಾಮಾನ್ಯರಿಗೆ 3,31,12,305 ರೂ. ವಂಚನೆ ಆಗಿದೆ. ಅದರಲ್ಲೂ ಸೈಬರ್ ಕ್ರೈಂ ಖೆಡ್ಡಾಕ್ಕೆ ಬಿದ್ದವರಲ್ಲಿ ಸುಶಿಕ್ಷಿತರೇ ಹೆಚ್ಚಿನ ಪ್ರಮಾಣದಲ್ಲಿದ್ದಾರೆ ಎಂಬುದು ಅಚ್ಚರಿಗೆ ಕಾರಣವಾಗಿದೆ.

ಕಾರವಾರ; ಸೈಬರ್ ವಂಚಕರ ಸೆರೆ, 24 ಬ್ಯಾಂಕ್ ಖಾತೆ ಪತ್ತೆ! ಕಾರವಾರ; ಸೈಬರ್ ವಂಚಕರ ಸೆರೆ, 24 ಬ್ಯಾಂಕ್ ಖಾತೆ ಪತ್ತೆ!

ಆನ್‌ಲೈನ್ ವಹಿವಾಟು ಕೆಲಸದ ಒತ್ತಡ, ಸಮಯ ಉಳಿತಾಯದ ಜತೆ ಸಾಕಷ್ಟು ಅನುಕೂಲಗಳಿಗೆ ದಾರಿಯಾಗಿವೆ. ಆದರೆ ಅನಾನುಕೂಲತೆಗಳಿಗೂ ಡಿಜಿಟಲ್ ವ್ಯವಹಾರ ಕಾರಣವಾಗಿದೆ. ಭಾರಿ ಬಹುಮಾನ, ಬ್ಯಾಂಕ್ ನೌಕರರರ ಸೋಗು ಹಾಗೂ ಉದ್ಯೋಗ ಕಲ್ಪಿಸುವ ನೆಪದಲ್ಲಿ ಒಂದೇ ವರ್ಷದಲ್ಲಿ ನೂರಾರು ವಂಚನೆ ಪ್ರಕರಣಗಳು ದಾಖಲಾಗಿವೆ.

ಬಿಟ್ ಕಾಯಿನ್ ಬ್ಯಾನ್ ಬಯಿಸಿ ಪ್ರಧಾನಿಗೆ ಪತ್ರ ಬರೆದ ಬೆಂಗಳೂರು ಸೈಬರ್ ತಜ್ಞ ಬಿಟ್ ಕಾಯಿನ್ ಬ್ಯಾನ್ ಬಯಿಸಿ ಪ್ರಧಾನಿಗೆ ಪತ್ರ ಬರೆದ ಬೆಂಗಳೂರು ಸೈಬರ್ ತಜ್ಞ

ಬ್ಯಾಂಕಿಂಗ್, ಚಿನ್ನ ಖರೀದಿ, ಬಹುಮಾ ಬಂದಿದೆ ಎನ್ನುವುದು ಹಳೆಯ ವಿಧಾನಗಳಾದವು. ಈಗ ವಂಚನೆಗೆ ಹೊಸ ಟ್ರೆಂಡ್ ಶುರುವಾಗಿದ್ದು 'ಸೆಕ್ಸ್ ಟಾರ್ಷನ್' ಹೆಸರಲ್ಲಿಯೂ ವಂಚಿಸಲಾಗುತ್ತಿದೆ. ಸುಂದರಿಯರ ಫೋಟೋಗಳನ್ನೇ ಬಂಡವಾಳ ಮಾಡಿಕೊಂಡು ವಂಚನೆಯನ್ನು ಮಾಡುತ್ತಿದ್ದಾರೆ.

ಸೈಬರ್ ಠಾಣೆ ಅಧಿಕಾರಿ ಹೆಸರಲ್ಲಿ ನಕಲಿ ಖಾತೆ; ಹಣಕ್ಕೆ ಬೇಡಿಕೆ! ಸೈಬರ್ ಠಾಣೆ ಅಧಿಕಾರಿ ಹೆಸರಲ್ಲಿ ನಕಲಿ ಖಾತೆ; ಹಣಕ್ಕೆ ಬೇಡಿಕೆ!

ಚಿನ್ನಾಭರಣಕ್ಕಾಗಿ ಲಕ್ಷಾಂತರ ರೂ. ಮೋಸ

ಚಿನ್ನಾಭರಣಕ್ಕಾಗಿ ಲಕ್ಷಾಂತರ ರೂ. ಮೋಸ

ಫೇಸ್ಬುಕ್, ವಾಟ್ಸ್ ಆ್ಯಪ್, ಟ್ವಿಟರ್, ಇನ್ಸ್ಟಾಗ್ರಾಂ ಒಳಗೊಂಡಂತೆ ನೂರಾರು ಅಪ್ಲಿಕೇಶನ್‌ಗಳು ಚಾಲ್ತಿಯಲ್ಲಿದ್ದು ಚಿನ್ನ ಅಥವಾ ಭಾರಿ ಮೊತ್ತದ ಆಮಿಷಕ್ಕೆ ಬಳಕೆದಾರರು ಒಳಗಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯ ಮಾಡಿಕೊಂಡು ಸ್ವವಿವರ ಪಡೆದುಕೊಳ್ಳುವ ವಂಚಕರು ಚಿನ್ನ ಅಥವಾ ಹಣ ವರ್ಗಾವಣೆಗೆ ಕೆಲವೊಂದು ಶುಲ್ಕ ಪಾವತಿಸಬೇಕಾಗುತ್ತದೆ ಎಂದು ನಂಬಿಸಿ ಲಕ್ಷಾಂತರ ರೂ. ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳುತ್ತಿದ್ದಾರೆ. ಹಂತ ಹಂತವಾಗಿ ಹಣಕ್ಕೆ ಬೇಡಿಕೆ ಇಟ್ಟಾಗಲೇ ತಾವು ವಂಚನೆಗೆ ಒಳಗಾಗಿರುವುದು ಗಮನಕ್ಕೆ ಬರುತ್ತಿದೆ. ಆನಂತರವೂ ಮರ್ಯಾದೆಗೆ ಅಂಜಿ ಕೆಲವರು ದೂರು ನೀಡಲು ಹಿಂದೇಟು ಹಾಕಿದ್ದಾರೆ. ಕೆಲವರಷ್ಟೇ ಠಾಣೆಗೆ ತೆರಳಿ ದೂರು ನೀಡಿ ಬರುತ್ತಿದ್ದಾರೆ. ಅದರಲ್ಲೂ ಚಿನ್ನಾಭರಣದ ಆಸೆಗೆ ಲಕ್ಷಾಂತರ ರೂ. ಕಳೆದುಕೊಂಡವರೇ ಹೆಚ್ಚಿದ್ದಾರೆ.

ಆನ್‌ಲೈನ್ ಬ್ಯಾಂಕಿಂಗ್ ಹೆಸರಲ್ಲಿ ವಂಚನೆ

ಆನ್‌ಲೈನ್ ಬ್ಯಾಂಕಿಂಗ್ ಹೆಸರಲ್ಲಿ ವಂಚನೆ

ಎಷ್ಟೇ ಜಾಗೃತರಾಗಿದ್ದರೂ ದಿನದಿಂದ ದಿನಕ್ಕೆ ಆನ್‌ಲೈನ್ ಬ್ಯಾಂಕಿಂಗ್ ವಂಚನೆ ಮಿತಿ ಮೀರುತ್ತಿದೆ. ಬ್ಯಾಂಕ್‌ಗಳು ಆನ್‌ಲೈನ್ ವಹಿವಾಟಿಗಾಗಿ ವಿವಿಧ ಆ್ಯಪ್ ಬಿಡುಗಡೆ ಮಾಡಿವೆ. ಆದರೆ ಬಹಳಷ್ಟು ಅಪ್ಲಿಕೇಶನ್ ಬಗ್ಗೆ ಜನರಿಗೆ ಅರಿವಿನ ಕೊರತೆ ಎದುರಾಗಿದ್ದು ಅದನ್ನೇ ದುರ್ಬಳಕೆ ಮಾಡಿಕೊಳ್ಳುತ್ತಿರುವ ವಂಚಕರು ತಮ್ಮ ಖಾತೆಗೆ ಸುಲಭವಾಗಿ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವು ಪ್ರಕರಣಗಳಲ್ಲಿ ಬ್ಯಾಂಕ್ ಸಿಬ್ಬಂದಿ ಮತ್ತು ಅಧಿಕಾರಿ ಹೆಸರಲ್ಲಿ ಕರೆ ಮಾಡಿ ವಂಚಿಸುತ್ತಿದ್ದಾರೆ. ಅಲ್ಲದೆ, ಗಿಫ್ಟ್, ಲಾಟರಿ, ಲಕ್ಕಿ ಡ್ರಾ ನೆಪದಲ್ಲಿ ಬ್ಯಾಂಕ್ ಖಾತೆ ವಿವರ ಪಡೆಯಲಾಗುತ್ತಿದೆ. ಈ ಮೂಲಕ ಅವರ ಎಟಿಎಂ ಮೇಲಿನ ನಂಬರ್, ಒಟಿಪಿ ಸೇರಿ ಇತರ ವಿವರ ಪಡೆದು ಖಾತೆಯಲ್ಲಿನ ಹಣವನ್ನು ಕ್ಷಣಮಾತ್ರದಲ್ಲೇ ಎಗರಿಸುತ್ತಿದ್ದಾರೆ.

ಮೋಸಕ್ಕೆ ಒಳಗಾದವರಲ್ಲಿ ವಿದ್ಯಾವಂತರೇ ಹೆಚ್ಚು

ಮೋಸಕ್ಕೆ ಒಳಗಾದವರಲ್ಲಿ ವಿದ್ಯಾವಂತರೇ ಹೆಚ್ಚು

ಜನಸಾಮಾನ್ಯರಿಗೆ ಆನ್‌ಲೈನ್ ವಂಚನೆ ಬಗ್ಗೆ ವಿದ್ಯಾವಂತರೇ ಅರಿವು ಮೂಡಿಸಬೇಕಿದೆ. ವಿಪರ್ಯಾಸವೆಂದರೆ ಬಹುತೇಕ ವಂಚನೆ ಪ್ರಕರಣದಲ್ಲಿ ಮೋಸಕ್ಕೊಳಗಾದವರು ಸುಶಿಕ್ಷಿತರೇ ಆಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪರಿಚಿತರಾಗುವವರನ್ನು ನಂಬಿ ಹಣ ಕಳೆದುಕೊಳ್ಳುತ್ತಿದ್ದಾರೆ. ಹಂತ ಹಂತವಾಗಿ ಲಕ್ಷಾಂತರ ರೂ. ಕಳೆದುಕೊಂಡ ಬಳಿಕ ವಂಚನೆಗೆ ಒಳಗಾಗಿರುವುದು ಅರಿವಿಗೆ ಬರುತ್ತದೆ. ಆಗ ಸೈಬರ್ ಠಾಣೆ ಅಥವಾ ಸಮೀಪದ ಪೊಲೀಸ್ ಠಾಣೆಗಳ ಮೆಟ್ಟಿಲೇರಿ ಕಣ್ಣೀರಿಡುವಂತಾಗಿದೆ.

ಈಗ ವಂಚನೆಗೆ ಹೊಸ ಟ್ರೆಂಡ್ ಶುರುವಾಗಿದ್ದು ‘ಸೆಕ್ಸ್ ಟಾರ್ಷನ್' ಹೆಸರಲ್ಲಿಯೂ ವಂಚಿಸಲಾಗುತ್ತಿದೆ. ಸುಂದರಿಯರ ಫೋಟೋಗಳನ್ನೇ ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ. ಫೇಸ್ಬುಕ್ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಸುಂದರಿಯರ ಫೋಟೋಗಳನ್ನು ಹಾಕಿಕೊಂಡು ಫ್ರೆಂಡ್ಸ್ ರಿಕ್ವೆಸ್ಟ್ ಕಳಿಸುವ ಖದೀಮರು, ರಿಕ್ವೆಸ್ಟ್ ಅಕ್ಸೆಪ್ಟ್ ಆಗುತ್ತಿದ್ದಂತೆ ಪರಿಚಯ ಮಾಡಿಕೊಂಡು ಮೊಬೈಲ್ ನಂಬರ್ ಪಡೆದು ವಂಚನೆಗೆ ಬಲೆ ಬೀಸತೊಡಗಿದ್ದಾರೆ ಎನ್ನುತ್ತಾರೆ ಸೈಬರ್ ಠಾಣೆ ಪೊಲೀಸರು.

ವಂಚನೆ ತಡೆಗೆ ಜಾಗೃತಿ ಕೊರತೆ

ವಂಚನೆ ತಡೆಗೆ ಜಾಗೃತಿ ಕೊರತೆ

ಈಗಾಗಲೇ ಉದ್ಯಮಿಗಳು, ಯುವಕರು, ವಿದ್ಯಾರ್ಥಿಗಳು, ಮಾಜಿ ಸೈನಿಕರು, ಶಿಕ್ಷಕರು ಕೂಡ ಸೈಬರ್ ವಂಚನೆಗೆ ಒಳಗಾಗುತ್ತಿದ್ದಾರೆ. ಈ ಬಗ್ಗೆ ಸೈಬರ್ ಠಾಣೆ ಪೊಲೀಸರು ನಿರಂತರವಾಗಿ ಜಾಗೃತಿ ಮೂಡಿಸುತ್ತಿದ್ದರೂ ಡಿಜಿಟಲ್ ವಹಿವಾಟಿನ ನೆಪದಲ್ಲಿ ವಂಚನೆ ಹೆಚ್ಚುತ್ತಲೇ ಇದೆ. ಈ ನಿಟ್ಟಿನಲ್ಲಿ ಸಾರ್ವಜನಿಕರೂ ಹೆಚ್ಚೆತ್ತುಕೊಳ್ಳಬೇಕಿದೆ. ಎಲ್ಲಿವರೆಗೂ ಜನತೆ ಜಾಗೃತರಾಗುವುದಿಲ್ಲವೂ ಅಲ್ಲಿವರೆಗೂ ಆನ್‌ಲೈನ್ ವಂಚನೆಗಳಿಗೆ ಕಡಿವಾಣ ಹಾಕುವುದು ಕಷ್ಟಸಾಧ್ಯ.

"ಶಿವಮೊಗ್ಗ ಜಿಲ್ಲೆಯಲ್ಲಿ ಕೋವಿಡ್ ಅವಧಿಯಲ್ಲೇ ಆನ್‌ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗಿವೆ. ಜನಸಾಮಾನ್ಯರಿಗೆ ಅರಿವು ಮೂಡಿಸಲಾಗುತ್ತಿದೆ. ಆದರೂ ವಂಚನೆಗೆ ಒಳಗಾಗುವುದು ಕಡಿಮೆ ಆಗುತ್ತಿಲ್ಲ. ಡಿಜಿಟಲ್ ವಹಿವಾಟಿನ ಬಗ್ಗೆ ಬ್ಯಾಂಕ್‌ನವರೂ ಜನಸಾಮಾನ್ಯರಿಗೆ ತಿಳಿವಳಿಕೆ ಮೂಡಿಸುವ ಅಗತ್ಯ ಇದೆ. ವಿದ್ಯಾವಂತರೇ ಹೆಚ್ಚಾಗಿ ವಂಚನೆಗೆ ಒಳಗಾಗುತ್ತಿರುವುದು ವಿಪರ್ಯಾಸ ಅನ್ನುತ್ತಾರೆ" ಸೈಬರ್ ಕ್ರೈಂ ಠಾಣೆ ಇನ್ಸ್ ಪೆಕ್ಟರ್ ಕೆ. ಟಿ. ಗುರುರಾಜ್.

ಸೈಬರ್ ವಂಚನೆ ಪ್ರಕರಣಗಳು

ಸೈಬರ್ ವಂಚನೆ ಪ್ರಕರಣಗಳು

ಶಿವಮೊಗ್ಗ ಜಿಲ್ಲೆಯಲ್ಲಿ 2020ರ ಮಾರ್ಚ್‌ನಿಂದ ದಾಖಲಾದ ಸೈಬರ್ ಕ್ರೈಂ ಪ್ರಕರಣಗಳ ಸಂಖ್ಯೆ. ಇದುವರೆಗೂ ಕೇವಲ 14 ಜನರನ್ನು ಮಾತ್ರ ಬಂಧಿಸಲಾಗಿದೆ.

English summary
Shivamogga reported more cyber crime cases in the time of COVID lock down. 133 case reported from 2020 March. 3.31 crore money cheated.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X