ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ ಜಿಲ್ಲೆಯಲ್ಲಿ ಶೇ 37ರಷ್ಟು ಮುಂಗಾರು ಮಳೆ ಕೊರತೆ

|
Google Oneindia Kannada News

ತುಮಕೂರು, ಜುಲೈ 21 : ಈ ಬಾರಿಯ ಮುಂಗಾರು ಮಳೆ ಇದುವರೆಗೂ ವಾಡಿಕೆಯಂತೆ ಸುರಿದಿಲ್ಲ. ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯೂ ಮಳೆಯ ಕೊರತೆ ಎದುರಿಸುತ್ತಿದೆ. ಜಿಲ್ಲೆಯಲ್ಲಿ ಶೇ 37ರಷ್ಟು ಮಳೆಯ ಕೊರತೆ ಉಂಟಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಇದುವರೆಗೆ ಶೇ.37ರಷ್ಟು ಮಳೆ ಕೊರತೆ ಉಂಟಾಗಿದೆ. ಇದರಿಂದಾಗಿ ಭತ್ತದ ನಾಟಿ ಕಾರ್ಯಕ್ಕೆ ಹಿನ್ನಡೆ ಉಂಟಾಗಿದೆ. ಜಿಲ್ಲೆಯಲ್ಲಿ ಒಟ್ಟು ವಾರ್ಷಿಕ ಮಳೆ 2,237 ಮಿ. ಮೀ. ಆಗಿದೆ.

ಮನೆಯ ಮೇಲೆ ಕೈತೋಟ ಬೆಳೆಸಿದ ಕೃಷಿ ನಗರದ ಕುಮಾರಯ್ಯ!ಮನೆಯ ಮೇಲೆ ಕೈತೋಟ ಬೆಳೆಸಿದ ಕೃಷಿ ನಗರದ ಕುಮಾರಯ್ಯ!

2019ನೇ ಸಾಲಿನಲ್ಲಿ ಜುಲೈ 19ರ ವರೆಗೆ 675 ಮಿ.ಮೀ. ಮಳೆ ಮಾತ್ರ ಆಗಿದೆ. ಈ ವೇಳೆಗೆ 1071 ಮಿ.ಮೀ. ಮಳೆ ಸುರಿಯಬೇಕಿತ್ತು. ತೀವ್ರ ಬರಗಾಲದಿಂದ ಶಿವಮೊಗ್ಗ ನಗರದಲ್ಲಿಯೇ ಈ ಬಾರಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿತ್ತು.

ಶಿವಮೊಗ್ಗ : ತುಂಗಾ ಜಲಾಶಯದಿಂದ 5 ಸಾವಿರ ಕ್ಯೂಸೆಕ್ ನೀರು ಬಿಡುಗಡೆಶಿವಮೊಗ್ಗ : ತುಂಗಾ ಜಲಾಶಯದಿಂದ 5 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

ವಾಡಿಕೆ ಮಳೆಯ ಕೊರತೆಯಿಂದಾಗಿ ಈ ಸಾಲಿನಲ್ಲಿ ಬಿತ್ತನೆ ಕಾರ್ಯದಲ್ಲಿ ನಿರೀಕ್ಷಿತ ಪ್ರಗತಿ ಸಾಧ್ಯವಾಗಿಲ್ಲ. ಇಲ್ಲಿಯ ವರೆಗೆ 64, 247 ಹೆಕ್ಟರ್‌ನಲ್ಲಿ ಬಿತ್ತನೆ ಕಾರ್ಯ ನಡೆದಿದೆ. 1,59,457 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯದ ಆಗಿರುವ ಗುರಿ ಹೊಂದಲಾಗಿತ್ತು.

ಕರ್ನಾಟಕದಲ್ಲಿ ಕಳೆದ ಒಂದು ದಿನದಲ್ಲಿ ಅತಿ ಹೆಚ್ಚು ಮಳೆಯಾಗಿದ್ದೆಲ್ಲಿ?ಕರ್ನಾಟಕದಲ್ಲಿ ಕಳೆದ ಒಂದು ದಿನದಲ್ಲಿ ಅತಿ ಹೆಚ್ಚು ಮಳೆಯಾಗಿದ್ದೆಲ್ಲಿ?

ವಿವಿಧ ತಾಲೂಕುಗಳ ಮಳೆ ವಿವರ

ವಿವಿಧ ತಾಲೂಕುಗಳ ಮಳೆ ವಿವರ

ಶಿವಮೊಗ್ಗ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಶಿವಮೊಗ್ಗದಲ್ಲಿ 203 ಮಿ.ಮೀ, ಭದ್ರಾವತಿಯಲ್ಲಿ 146 ಮಿ.ಮೀ, ತೀರ್ಥಹಳ್ಳಿಯಲ್ಲಿ 770 ಮಿ.ಮೀ, ಸಾಗರದಲ್ಲಿ 1068 ಮಿ.ಮೀ, ಹೊಸನಗರದಲ್ಲಿ 1003 ಮಿ.ಮೀ, ಶಿಕಾರಿಪುರದಲ್ಲಿ 216 ಮಿ.ಮೀ ಮತ್ತು ಸೊರಬದಲ್ಲಿ 389 ಮಿ.ಮೀ ಮಳೆ ಆಗಿದೆ. ಒಟ್ಟಾರೆ ಜಿಲ್ಲೆಯ ಸರಾಸರಿ ವಾಡಿಕೆ ಮಳೆ 925 ಮಿ.ಮೀ ಆಗಬೇಕಿತ್ತು. ಆದರೆ, 641 ಮಿ.ಮೀ ಮಾತ್ರ ಆಗಿದೆ.

ಭತ್ತ, ಜೋಳದ ಬಿತ್ತನೆ ಕುಂಠಿತ

ಭತ್ತ, ಜೋಳದ ಬಿತ್ತನೆ ಕುಂಠಿತ

ಮಳೆ ಪ್ರಮಾಣ ಇಳಿಕೆಯಾಗಿರುವುದರಿಂದ ಬಿತ್ತನೆಯ ಕಾರ್ಯದಲ್ಲಿ ನಿರೀಕ್ಷಿತ ಪ್ರಗತಿ ಸಾಧ್ಯವಾಗಿಲ್ಲ. ಇಲ್ಲಿಯ ವರೆಗೆ 64,247 ಹೆಕ್ಟರ್ ಬಿತ್ತನೆ ಕಾರ್ಯ ನಡೆದಿದೆ. 1,59,457 ಹೆಕ್ಟರ್ ಬಿತ್ತನೆಯ ಕಾರ್ಯದ ಗುರಿ ಹೊಂದಲಾಗಿತ್ತು. 99,684 ಹೆಕ್ಟರ್ ಭತ್ತ, 55, 100 ಹೆಕ್ಟರ್ ಮುಸುಕಿನ ಜೋಳ ಬಿತ್ತನೆಯ ಗುರಿ ಹೊಂದಿದ್ದು ಭತ್ತದ ಬಿತ್ತನೆ 10,172 ಹೆಕ್ಟರ್ ಹಾಗೂ ಮುಸುಕಿನ ಜೋಳ 52,331 ಹೆಕ್ಟರ್ ಮಾತ್ರ ಆಗಿದೆ.

ಕಿಸಾನ್ ಸಮ್ಮಾನ್ ಯೋಜನೆ

ಕಿಸಾನ್ ಸಮ್ಮಾನ್ ಯೋಜನೆ

ರೈತರಿಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಿಸಾನ್ ಸಮ್ಮಾನ್ ಯೋಜನೆ ರಾಜ್ಯದಲ್ಲಿ ಜಾರಿಗೊಳಿಸಲಾಗಿದೆ. ಈ ಯೋಜನೆಯು ಅರ್ಹ ರೈತ ಫಲಾನುಭವಿ ಕುಟುಂಬಗಳಿಗೆ ಮೂರು ಕಂತುಗಳಲ್ಲಿ ವಾರ್ಷಿಕ 6 ಸಾವಿರ ರೂ.ಗಳನ್ನು ನೀಡಲಾಗುತ್ತದೆ. ಯೋಜನೆಗೆ ಹೆಸರು ನೋಂದಾಯಿಸುವ ಪ್ರಕ್ರಿಯೆ ಜಿಲ್ಲೆಯಲ್ಲಿ ಚಾಲ್ತಿಯಲ್ಲಿದ್ದು ಇಲ್ಲಿಯ ವರೆಗೆ ಶಿವಮೊಗ್ಗದಲ್ಲಿ 21,114, ಭದ್ರಾವತಿಯಲ್ಲಿ 21,617, ತೀರ್ಥಹಳ್ಳಿಯಲ್ಲಿ 15,515, ಸಾಗರದಲ್ಲಿ 19001, ಹೊಸನಗರದಲ್ಲಿ 12,019, ಶಿಕಾರಿಪುರದಲ್ಲಿ 26,936, ಸೊರಬದಲ್ಲಿ 26,852 ರೈತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ.

ರೈತರು ಹೆಸರು ನೋಂದಾಯಿಸಿಕೊಳ್ಳಿ

ರೈತರು ಹೆಸರು ನೋಂದಾಯಿಸಿಕೊಳ್ಳಿ

ಶಿವಮೊಗ್ಗ ಜಿಲ್ಲೆಯ ರೈತರು ಫಸಲ್ ಬಿಮಾ ಯೋಜನೆ ಹಾಗೂ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಗೆ ಹೆಸರು ನೋಂದಾಯಿಸಿಕೊಳ್ಳಲು ಮನವಿ ಮಾಡಲಾಗಿದೆ. ಬೆಳೆ ಸಾಲ ಪಡೆಯಲು ಬೆಳೆ ವಿಮೆ ಕಡ್ಡಾಯವಾಗಿದ್ದು ರೈತರು ಹತ್ತಿರದ ಸೆವಾ ಕೇಂದ್ರಗಳಲ್ಲಿ (ಸಿಎಸ್‍ಸಿ), ಡಿಸಿಸಿ ಮತ್ತು ಇತರೆ ಬ್ಯಾಂಕ್‍ಗಳಲ್ಲಿ ನೋಂದಾಯಿಸಿಕೊಳ್ಳುವಂತೆ ತಿಳಿಸಲಾಗಿದೆ. ಬೆಳೆ ವಿಮೆ ನೋಂದಾಯಿಸಲು ಕೊನೆಯ ದಿನಾಂಕ ಆಗಷ್ಟ್ 14 ಆಗಿರುತ್ತದೆ.

English summary
Till July 15, 2019 Shivamogga district received 37 percent of less monsoon rain. Agriculture activities hit by less rain this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X