ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ : ಮಧು ಬಂಗಾರಪ್ಪ ಆಸ್ತಿ ಐದು ವರ್ಷಗಳಲ್ಲಿ ಡಬ್ಬಲ್

|
Google Oneindia Kannada News

Recommended Video

ಶಿವಮೊಗ್ಗ ಉಪ ಚುನಾವಣೆ : ಮಧು ಬಂಗಾರಪ್ಪ ಆಸ್ತಿ ಐದು ವರ್ಷಗಳಲ್ಲಿ ಡಬ್ಬಲ್ | Oneindia Kannada

ಶಿವಮೊಗ್ಗ, ಅಕ್ಟೋಬರ್ 17: ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಬಂಗಾರಪ್ಪ ಅವರ ಪುತ್ರ ಮಧು ಅವರು ಮಂಗಳವಾರದಂದು ಶಿವಮೊಗ್ಗ ಲೋಕಸಭಾ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದರು. ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಅವರು ನಾಮಪತ್ರದ ಜತೆಗೆ ಸಲ್ಲಿಸಿರುವ ಆಸ್ತಿ ಅಫಿಡವಿಟ್ ವಿವರ ಇಲ್ಲಿದೆ.

ಮೈಸೂರು ದಸರಾ - ವಿಶೇಷ ಪುರವಣಿ

ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ, ಶಿಕಾರಿಪುರದ ಶಾಸಕ ಯಡಿಯೂರಪ್ಪನವರ ರಾಜೀನಾಮೆಯಿಂದ ತೆರವಾಗಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ನವೆಂಬರ್ 3 ರಂದು ಉಪ ಚುನಾವಣೆ ನಡೆಯುತ್ತಿದೆ. ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಯಡಿಯೂರಪ್ಪನವರ ಪುತ್ರ ಬಿ.ವೈ. ರಾಘವೇಂದ್ರ ಸ್ಪರ್ಧಿಸುತ್ತಿದ್ದಾರೆ. ಜೆಡಿಎಸ್ ನಿಂದ ಮಧು ಬಂಗಾರಪ್ಪ, ಜೆಡಿಯುವಿನಿಂದ ಮಹಿಮಾ ಪಟೇಲ್ ಸ್ಪರ್ಧಿಸುತ್ತಿದ್ದಾರೆ. ಈ ಮೂಲಕ ಶಿವಮೊಗ್ಗದಲ್ಲಿ ಮಾಜಿ ಮುಖ್ಯಮಂತ್ರಿಗಳ ಮಕ್ಕಳ ಕದನಕ್ಕೆ ವೇದಿಕೆ ಸಿದ್ಧವಾಗಿದೆ.

ಶಿವಮೊಗ್ಗ : ಮಾಜಿ ಸಂಸದ ಬಿವೈ ರಾಘವೇಂದ್ರ ಆಸ್ತಿ ದ್ವಿಗುಣವಾಗಿದೆ!ಶಿವಮೊಗ್ಗ : ಮಾಜಿ ಸಂಸದ ಬಿವೈ ರಾಘವೇಂದ್ರ ಆಸ್ತಿ ದ್ವಿಗುಣವಾಗಿದೆ!

ಶಿವಮೊಗ್ಗ ಜಿಲ್ಲೆಯಲ್ಲಿ ಎಂಟು ವಿಧಾನಸಭಾ ಕ್ಷೇತ್ರ, ಮೂರು ನಗರಸಭೆ, ಆರು ಪಟ್ಟಣ ಪಂಚಾಯಿತಿ, ಒಂದು ಪುರಸಭೆ, 260ಕ್ಕೂ ಅಧಿಕ ಗ್ರಾಮ ಪಂಚಾಯಿತಿಗಳಲ್ಲಿ ಬಹುತೇಕ ಬಿಜೆಪಿ ತನ್ನ ಪ್ರಾಬಲ್ಯ ಹೊಂದಿದೆ. ಹೀಗಾಗಿ, ಪ್ರಜ್ಞಾವಂತರ ನಾಡಿನಲ್ಲಿ ಮತ್ತೊಮ್ಮೆ ಕಮಲ ಅರಳುವ ಲಕ್ಷಣಗಳಿವೆ ಎಂಬ ವರದಿಗಳಿವೆ. ಆದರೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟದ ಒಮ್ಮತದ ಅಭ್ಯರ್ಥಿಯಾಗಿರುವ ಮಧುಗೆ ಗೆಲುವು ಸುಲಭವಲ್ಲ ಎಂಬುದಂತೂ ನಿಜ.

ರಾಮನಗರ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ 100 ಕೋಟಿ ರೂ. ಆಸ್ತಿ ಒಡತಿರಾಮನಗರ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ 100 ಕೋಟಿ ರೂ. ಆಸ್ತಿ ಒಡತಿ

ಮಧು ಬಂಗಾರಪ್ಪ, ಅವರ ಪತ್ನಿ ಅನಿತಾ ಹಾಗೂ ಪುತ್ರ ಸೂರ್ಯ ಮೂವರೂ ಕೋಟ್ಯಧಿಪತಿಗಳು ಎಂದು ಅಫಿಡವಿಟ್ ನಿಂದ ತಿಳಿದು ಬಂದಿದೆ.

ಮಧು ಕುಟುಂಬದಲ್ಲಿ ಮೂವರು ಕೋಟ್ಯಧಿಪತಿಗಳು

ಮಧು ಕುಟುಂಬದಲ್ಲಿ ಮೂವರು ಕೋಟ್ಯಧಿಪತಿಗಳು

ಮಧು ಬಂಗಾರಪ್ಪ, ಅವರ ಪತ್ನಿ ಅನಿತಾ ಹಾಗೂ ಪುತ್ರ ಸೂರ್ಯ ಮೂವರೂ ಕೋಟ್ಯಧಿಪತಿಗಳು ಎಂದು ಅಫಿಡವಿಟ್ ನಿಂದ ತಿಳಿದು ಬಂದಿದೆ. ಮಧು ಅವರ ಒಟ್ಟು ಆಸ್ತಿ ಮೌಲ್ಯ 47,75,61,000 ರೂ. ಆರು ತಿಂಗಳಲ್ಲಿ 5 ಕೋಟಿ ರೂ. ಮೌಲ್ಯದ ಆಸ್ತಿ ಇಳಿಕೆಯಾಗಿದೆ. ಪತ್ನಿ ಅನಿತಾ ಅವರು 10.02 ಕೋಟಿ ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಪುತ್ರ ಸೂರ್ಯ ಬಳಿ 4.30 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಯಿದೆ.

ಮಧು ಬಂಗಾರಪ್ಪ ಚರಾಸ್ತಿ

ಮಧು ಬಂಗಾರಪ್ಪ ಚರಾಸ್ತಿ

ಮಧು ಅವರ ಬಳಿ 10,35,36,000 ರೂ ಮೌಲ್ಯದ ಚರಾಸ್ತಿ ಇದೆ.
* 81 ಲಕ್ಷ ರು ನಗದು
* ಕೆನರಾ ಬ್ಯಾಂಕ್, ಕೆ ಎಸ್ ಎಫ್, ಅಪೆಕ್ಸ್ ಬ್ಯಾಂಕ್, ಲಿ ಗಾರ್ಡಿಯನ್ ಸೌಹಾರ್ದ ಸಹಕಾರಿ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ವಿಜಯ ಬ್ಯಾಂಕ್ ಗಳಲ್ಲಿ ಠೇವಣಿ
* ಆಕಾಶ್ ಆಡಿಯೋ ಕಂಪನಿ ಷೇರುಗಳು 51,000 ರು,7.52 ಕೋಟಿ ರು ಗೆ ಸಾಲ, 2.25 ಲಕ್ಷ ಮೌಲ್ಯದ ಷೇರು ವೀರಶೈವ ಕೋ ಆಪರೇಟಿವ್ ಬ್ಯಾಂಕ್

ಪತ್ನಿ ಅನಿತಾ -10 ಲಕ್ಷ

* ಕೋಟಕ್ ಬ್ಯಾಂಕ್, ಡಿಸಿಸಿ ಬ್ಯಾಂಕ್ ಆನವಟ್ಟಿ,
* ಅಕಾಶ್ ಆಡಿಯೋ ಕಂಪನಿಯಲ್ಲಿ 51,000 ರು ಷೇರು
* 2.37 ಐಎನ್ ಜಿ ವೈಶ್ಯದಲ್ಲಿ ವಿಮೆ, 12.45 ಲಕ್ಷ ಕೋಟಕ್ ಮಹೀಂದ್ರಾದಲ್ಲಿ ವಿಮೆ, 4.88 ಲಕ್ಷ ಎಕ್ಸೈಡ್ ಲೈಫ್ ವಿಮೆ
* ಪತಿ ಮಧು ಅವರಿಗೆ 8.75 ಕೋಟಿ ರು ಸಾಲ ನೀಡಿಕೆ

ಮಂಡ್ಯ ಜೆಡಿಎಸ್ ಅಭ್ಯರ್ಥಿ: ಶಿವರಾಮೇಗೌಡರ ಪತ್ನಿಯ ಆಸ್ತಿಯೇ ಹೆಚ್ಚುಮಂಡ್ಯ ಜೆಡಿಎಸ್ ಅಭ್ಯರ್ಥಿ: ಶಿವರಾಮೇಗೌಡರ ಪತ್ನಿಯ ಆಸ್ತಿಯೇ ಹೆಚ್ಚು

ಕಾರು, ಆಭರಣ ಇತ್ಯಾದಿ

ಕಾರು, ಆಭರಣ ಇತ್ಯಾದಿ

ಮಧು ಬಂಗಾರಪ್ಪ ಅವರ ಬಳಿ ಇನ್ನೋವಾ ಹಾಗೂ ಫಾರ್ಚೂನರ್ ಕಾರುಗಳಿವೆ. ಇವುಗಳ ಮೌಲ್ಯ 63.60 ಲಕ್ಷ ರೂ.

ಮಧು ಬಂಗಾರಪ್ಪ ಪತ್ನಿಗಿಂತಲೂ ಹೆಚ್ಚಿನ ಚಿನ್ನಾಭರಣ ಹೊಂದಿದ್ದಾರೆ. ಇವರ ಬಳಿ 1.25 ಕೋಟಿ ರೂ. ಮೌಲ್ಯದ ಆಭರಣಗಳಿವೆ. ಅನಿತಾ ಬಳಿ 82.73 ಲಕ್ಷ ರೂ. ಮೌಲ್ಯದ 1 ಕೆಜಿ ಬಂಗಾರ ಹಾಗೂ ವಜ್ರಾಭರಣಗಳಿವೆ.

 ಮಧು ಬಂಗಾರಪ್ಪ ಸ್ಥಿರಾಸ್ತಿ

ಮಧು ಬಂಗಾರಪ್ಪ ಸ್ಥಿರಾಸ್ತಿ

ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮಧು 52.10 ಕೋಟಿ ರೂ. ಆಸ್ತಿ ಘೊಷಣೆ ಮಾಡಿದ್ದರು. 2013ರಲ್ಲಿ 14.08 ಕೋಟಿ ರೂ. ಆಸ್ತಿ ಹಾಗೂ ಪತ್ನಿ ಬಳಿ 3.18 ಕೋಟಿ ರೂ. ಚರಾಸ್ತಿ ಇತ್ತು.

* ಸೊರಬ ತಾಲೂಕಿನ ತಲಗಡ್ಡೆ, ಕೊಡಿಕೊಪ್ಪ, ಕುಬಟೂರು, ಲಕ್ಕವಳ್ಳಿಗಳಲ್ಲಿ ಕೃಷಿ ಜಮೀನು
* ಬೆಂಗಳೂರಿನ ಕುಮಾರಪಾರ್ಕ್ ನಲ್ಲಿ 6 ಕೋಟಿ ರು ಮೌಲ್ಯದ ವಾಣಿಜ್ಯ ಕಟ್ಟಡ. ಆರ್ ಎಂವಿ ಬಡಾವಣೆಯಲ್ಲಿ ಮನೆ, ಶಿವಮೊಗ್ಗದ ಚನ್ನಪ್ಪ ಲೇ ಔಟಿನಲ್ಲಿ ಮನೆ, ಆನವಟ್ಟಿಯಲ್ಲಿ ಮನೆ
ಒಟ್ಟು ಮೌಲ್ಯ: 374025000 ರು ಕುಟುಂಬದ ಸ್ಥಿರಾಸ್ತಿ ಮೌಲ್ಯ 43000000 ರು.

ಯಡಿಯೂರಪ್ಪನವರಿಗೆ ಅಗ್ನಿ ಪರೀಕ್ಷೆ, ಮೈತ್ರಿ ಪಕ್ಷಗಳಿಗೆ ಹುಲಿ 'ಶಿಕಾರಿ'ಯಡಿಯೂರಪ್ಪನವರಿಗೆ ಅಗ್ನಿ ಪರೀಕ್ಷೆ, ಮೈತ್ರಿ ಪಕ್ಷಗಳಿಗೆ ಹುಲಿ 'ಶಿಕಾರಿ'

English summary
The total value of the assets of the family of Madhu Bangarappa, JD(S) candidate from Shivamogga, has nearly doubled in the past five years. He has declared the value of assets to be ₹62.07 crore, up from ₹32.68 crore he had declared in the 2013 Assembly elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X