ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗದಲ್ಲಿ ಮಾಜಿ ಸಿಎಂ ಪುತ್ರರ ನಡುವೆ ಕದನ: ಗೆಲುವು ಯಾರಿಗೆ?

|
Google Oneindia Kannada News

Recommended Video

Lok Sabha Elections 2019: ಶಿವಮೊಗ್ಗದಲ್ಲಿ ಬಿ ವೈ ರಾಘವೇಂದ್ರ ಹಾಗು ಮಧು ಬಂಗಾರಪ್ಪ ನಡುವೆ ಕದನ | ಯಾರಿಗೆ ಗೆಲುವು

ಶಿವಮೊಗ್ಗ, ಏಪ್ರಿಲ್ 19: ರಾಜ್ಯದ 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಮುಗಿದಿದ್ದು, ಜಿದ್ದಾ-ಜಿದ್ದಿನ ಕಣವಾಗಿದ್ದ ಮಂಡ್ಯದಿಂದ ಮಾಧ್ಯಮಗಳ ಮತ್ತು ಜನರ ದೃಷ್ಟಿ ಹರಿದು ಉತ್ತರದ ಜಿಲ್ಲೆಗಳ ನೆಟ್ಟಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಶಿವಮೊಗ್ಗ ಸೇರಿ 14 ಕ್ಷೇತ್ರಗಳ ಮತದಾನ ಏಪ್ರಿಲ್ 23 ರಂದು ನಡೆಯಲಿದ್ದು, ಎರಡನೇ ಹಂತದ ಮತದಾನ ನಡೆಯುವಲ್ಲಿ ಶಿವಮೊಗ್ಗ ಕ್ಷೇತ್ರವು ಅತ್ಯಂತ ಮಹತ್ವದ್ದೆನಿಸಿದೆ.

ಬಿ.ವೈ.ರಾಘವೇಂದ್ರ ಸೋಲಿಸಲು ಒಂದಾದ ಮೂವರು ನಾಯಕರು!ಬಿ.ವೈ.ರಾಘವೇಂದ್ರ ಸೋಲಿಸಲು ಒಂದಾದ ಮೂವರು ನಾಯಕರು!

ಶಿವಮೊಗ್ಗದಲ್ಲಿ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಮಕ್ಕಳು ಕಣದಲ್ಲಿದ್ದಾರೆ. ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರೆ, ಎಸ್.ಬಂಗಾರಪ್ಪ ಅವರ ಪುತ್ರ ಮಧು ಬಂಗಾರಪ್ಪ ಅವರು ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್‌ನಿಂದ ಕಣಕ್ಕೆ ಇಳಿದಿದ್ದಾರೆ.

ಈ ಇಬ್ಬರೂ ಅಭ್ಯರ್ಥಿಗಳು ನಾಲ್ಕು ತಿಂಗಳ ಹಿಂದೆ ನಡೆದ ಉಪಚುನಾವಣೆಯಲ್ಲಿ ಪರಸ್ಪರ ಎದುರಾಗಿದ್ದರು, ಆಗ ಬಿ.ವೈ.ರಾಘವೇಂದ್ರ ಅವರು 52,೦೦೦ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈಗ ಮತ್ತೊಮ್ಮೆ ಈ ಇಬ್ಬರು ಎದುರು ಬದುರಾಗುತ್ತಿದ್ದಾರೆ.

ರಾಘವೇಂದ್ರಗೆ ಮೋದಿ ಬಲ, ಮಧುಗೆ ಮೈತ್ರಿ ಬಲ

ರಾಘವೇಂದ್ರಗೆ ಮೋದಿ ಬಲ, ಮಧುಗೆ ಮೈತ್ರಿ ಬಲ

ಮಧು ಬಂಗಾರಪ್ಪ ಅವರಿಗೆ ಮೈತ್ರಿಯ ಬಲವಿದ್ದರೆ, ರಾಘವೇಂದ್ರ ಅವರಿಗೆ ಮೋದಿ ಹೆಸರಿನ ಬಲವಿದೆ. ಅಷ್ಟೆ ಅಲ್ಲದೆ, ಶಿವಮೊಗ್ಗ ಕ್ಷೇತ್ರಕ್ಕೆ ಯಡಿಯೂರಪ್ಪ ಅವರು ಹಾಗೂ ಸ್ವತಃ ತಾವು ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಲವೂ ರಾಘವೇಂದ್ರ ಅವರಿಗಿದ್ದು ಮೇಲ್ನೋಟಕ್ಕೆ ಅವರು ಪ್ರಬಲ ಅಭ್ಯರ್ಥಿಯಂತೆ ಕಾಣುತ್ತಾರೆ.

ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪರಿಚಯಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪರಿಚಯ

ಕಳೆದೆರಡು ಚುನಾವಣೆಯಲ್ಲಿ ಸೋತಿರುವ ಮಧು

ಕಳೆದೆರಡು ಚುನಾವಣೆಯಲ್ಲಿ ಸೋತಿರುವ ಮಧು

ಮಧು ಬಂಗಾರಪ್ಪ ಅವರಿಗೆ ಕಾಂಗ್ರೆಸ್‌ ಬೆಂಬಲ ಹೆಚ್ಚಿನ ಶಕ್ತಿ ತುಂಬಿದೆ. ಅಲ್ಲದೆ ಕಳೆದ ಎರಡು ಚುನಾವಣೆಗಳಲ್ಲಿ ಸೋತಿರುವ ಅವರಿಗೆ ಅನುಕಂಪದ ಅಲೆಯೂ ಸಾಥ್ ನೀಡುವ ವಿಶ್ವಾಸವಿದೆ. ಕಳೆದ ಉಪ ಚುನಾವಣೆಯಲ್ಲಿ ಅತ್ಯಲ್ಪ ಅವಧಿಯಲ್ಲಿ ಅವರು ಗಳಿಸಿದ ಮತಗಳು ಮಧು ಬಂಗಾರಪ್ಪ ಅವರ ವಿಶ್ವಾಸವನ್ನು ಹೆಚ್ಚಿಸಿವೆ.

ಶಿವಮೊಗ್ಗದಲ್ಲಿ 16 ಲಕ್ಷ ಮತದಾರರು, ಏ.23ಕ್ಕೆ ಮತದಾನ ಶಿವಮೊಗ್ಗದಲ್ಲಿ 16 ಲಕ್ಷ ಮತದಾರರು, ಏ.23ಕ್ಕೆ ಮತದಾನ

ಬಿಜೆಪಿಗೆ ಆಡಳಿತ ವಿರೋಧಿ ಅಲೆ?

ಬಿಜೆಪಿಗೆ ಆಡಳಿತ ವಿರೋಧಿ ಅಲೆ?

ರಾಘವೇಂದ್ರ ಅವರು ಎರಡು ಬಾರಿ ಶಿವಮೊಗ್ಗ ಕ್ಷೇತ್ರದ ಸಂಸದರಾಗಿದ್ದಾರೆ. ಈ ಉಪಚುನಾವಣೆಯಲ್ಲಿ ಗೆಲುವು ಸಾಧಿಸುವ ಮುನ್ನಾ ಅವರ ಯಡಿಯೂರಪ್ಪ ಅವರು ಶಿವಮೊಗ್ಗದ ಸಂಸದರಾಗಿದ್ದರು. ಸತತ ಹತ್ತು ವರ್ಷ ಅವರದ್ದೇ ಕುಟುಂಬದ ಆಡಳಿತ ಕಂಡಿರುವ ಶಿವಮೊಗ್ಗದ ಜನತೆ ಆಡಳಿತ ವಿರೋಧಿ ಧೋರಣೆ ತಳೆದಲ್ಲಿ ರಾಘವೇಂದ್ರ ಅವರಿಗೆ ಹಾನಿ ಆಗುವ ಸಾಧ್ಯತೆ ಇದೆ.

2013ರ ನಂತರ ಚುನಾವಣೆ ಗೆದ್ದಿಲ್ಲ

2013ರ ನಂತರ ಚುನಾವಣೆ ಗೆದ್ದಿಲ್ಲ

ಮಧು ಬಂಗಾರಪ್ಪ ಅವರು ಶಿವಮೊಗ್ಗದ ವಿಫಲ ರಾಜಕಾರಣಿ ಎಂದೇ ಪರಿಚಿತರು. ಖ್ಯಾತಿ ಹೊಂದಿದ್ದರೂ ಸಹ ಅವರು ಚುನಾವಣೆಯಲ್ಲಿ ಸಪಲರಾಗಲು ಸಾಧ್ಯವಾಗುತ್ತಿಲ್ಲ. 2013ರ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆ ಆಗಿದ್ದರಾದರೂ ಆ ನಂತರ ನಡೆದ ಎರಡು ಚುನಾವಣೆಗಳಲ್ಲಿ ಅವರು ಸೋಲನ್ನು ಅನುಭವಿಸಿದ್ದಾರೆ.

'ಈ ಚುನಾವಣೆಯಲ್ಲಿ ರಾಘವೇಂದ್ರ ಅವರನ್ನು ಎಕ್ಸ್ ಪೋರ್ಟ್ ಮಾಡುತ್ತೇವೆ''ಈ ಚುನಾವಣೆಯಲ್ಲಿ ರಾಘವೇಂದ್ರ ಅವರನ್ನು ಎಕ್ಸ್ ಪೋರ್ಟ್ ಮಾಡುತ್ತೇವೆ'

ಅಭಿವೃದ್ಧಿ ಚರ್ಚೆ ಆಗುತ್ತಿಲ್ಲ

ಅಭಿವೃದ್ಧಿ ಚರ್ಚೆ ಆಗುತ್ತಿಲ್ಲ

ರಾಘವೇಂದ್ರ ಅವರು ಮೋದಿ ಅವರ ನಾಮಬಲವನ್ನು ಪ್ರಚಾರ ಸಭೆಗಳಲ್ಲಿ ಮುಂದುಮಾಡುತ್ತಿದ್ದಾರೆ. ಸ್ವತಃ ಯಡಿಯೂರಪ್ಪ ಅವರು ಹಲವು ಅಭಿವೃದ್ಧಿ ಕಾರ್ಯಗಳನ್ನು ಕ್ಷೇತ್ರಕ್ಕೆ ಮಾಡಿದ್ದಾರೆ. ರಾಘವೇಂದ್ರ ಅವರೂ ಸಹ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ ಆದರೆ ಆ ಬಗ್ಗೆಯೂ ಪ್ರಚಾರದಲ್ಲಿ ಉಲ್ಲೇಖಗಳಾಗುತ್ತಿದೆ. ಅಲ್ಲದೆ ಮೈತ್ರಿ ಸರ್ಕಾರದ ವಿರುದ್ಧ ಜನಾಭಿಪ್ರಾಯ ಮೂಡಿಸಲು ಸಹ ಯತ್ನಿಸುತ್ತಿದ್ದಾರೆ.

ಮಧು ಬಂಗಾರಪ್ಪಗೆ ದಿಗ್ಗಜರ ನರವು

ಮಧು ಬಂಗಾರಪ್ಪಗೆ ದಿಗ್ಗಜರ ನರವು

ಮಧು ಬಂಗಾರಪ್ಪ ಅವರು ಶಿವಮೊಗ್ಗ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಎಬ್ಬಿಸುವ ಯತ್ನವನ್ನು ತಮ್ಮ ಪ್ರಚಾರ ತಂತ್ರವಾಗಿ ಬಳಸುತ್ತಿದ್ದಾರೆ. ಅಲ್ಲದೆ, ಕುಮಾರಸ್ವಾಮಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ದೇವೇಗೌಡ ಅವರಂತಹ ದಿಗ್ಗಜರ ನೆರವನ್ನು ಪಡೆದು ಜನರನ್ನು ಸೆಳೆಯುವ ಹಾಗೂ ಚುನಾವಣಾ ತಂತ್ರವನ್ನು ರೂಪಿಸುವ ಯತ್ನವನ್ನು ಮಾಡುತ್ತಿದ್ದಾರೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪರಿಚಯಶಿವಮೊಗ್ಗ ಲೋಕಸಭಾ ಕ್ಷೇತ್ರದ ಪರಿಚಯ

ಜಿದ್ದಾ-ಜಿದ್ದಿನ ಕ್ಷೇತ್ರ ಶಿವಮೊಗ್ಗ

ಜಿದ್ದಾ-ಜಿದ್ದಿನ ಕ್ಷೇತ್ರ ಶಿವಮೊಗ್ಗ

ಶಿವಮೊಗ್ಗ ಕ್ಷೇತ್ರವು ಬಹು ಜಿದ್ದಾ-ಜಿದ್ದಿನ ಕ್ಷೇತ್ರವಾಗಿದ್ದು, ಬಿಜೆಪಿಯ ರಾಘವೇಂದ್ರ ಮತ್ತು ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರಿಗೆ ಸಮಾನ ಗೆಲ್ಲುವ ಅವಕಾಶಗಳಿವೆ. ಏಪ್ರಿಲ್ 23ಕ್ಕೆ ಇಲ್ಲಿ ಚುನಾವಣೆ ನಡೆಯಲಿದ್ದು ಮೇ 23ಕ್ಕೆ ಫಲಿತಾಂಶ ಬರಲಿದೆ.

English summary
Close fight between BJP's BY Raghavendra and coalition candidate Madhu Bangarappa in Shivamogga lok sabha constituency. Both were contesting against each other for second time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X