• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೈಕ್ ರೈಡಿಂಗ್ ಮೂಲಕ ದೇಶ ಸುತ್ತಿ ಸೈ ಎನಿಸಿಕೊಂಡ ಮಲೆನಾಡ ಬೆಡಗಿ

|

ಶಿವಮೊಗ್ಗ, ಮೇ 8: ಹೆಣ್ಣೊಬ್ಬಳು ಬೈಕ್ ಓಡಿಸಿಕೊಂಡು ಹೋಗುತ್ತಾಳೆಂದರೆ ಸಾಕು, ಜನರು ಅವಳನ್ನು ನೋಡುವ ರೀತಿಯೇ ಬೇರೆಯಾಗಿರುತ್ತದೆ.ಯಾರ್ರೀ ಆ ಬೈಕ್ ಓಡಿಸುತ್ತಾರೆ, ಅವಳೆಲ್ಲೋ ಗಂಡುಬೀರಿ ಇರಬೇಕು ಎಂದು ಮನಸ್ಸಲ್ಲೇ ಮಂಡಿಗೆ ತಿಂದು ಪಕ್ಕದವರಿಗೂ ತಿನ್ನಿಸುತ್ತಾರೆ.

ಆದರೆ ಇಲ್ಲೊಬ್ಬ ಹೆಣ್ಣುಮಗಳಿಗೆ ಬೈಕ್ ಓಡಿಸುವುದೆಂದರೆ ಆತ್ಮಬಲ ಮತ್ತು ಆತ್ಮಸ್ಥೈರ್ಯದ ಸಂಕೇತ. ಅವಳು ರೈಡ್ ಮಾಡುತ್ತಿದ್ದರೆ ಅಕ್ಕ- ಪಕ್ಕದಲ್ಲಿ ಹೈಸ್ಪೀಡ್‌ನಲ್ಲಿರುವ ಕಾರು ಚಾಲಕರು, ಬೈಕ್ ರೈಡರ್‌ಗಳು ತಮ್ಮ ಕಾರಿನ ಗಾಜು ಇಳಿಸಿ, ಯಾರ್ರೀ ಇದು? ಅಂತ ಅಚ್ಚರಿಯಿಂದ ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಾರೆ.

ವಾರದ ಸಾಧಕಿ: ಹಿಮಾಲಯದ ಮೇಲೆ ಕನ್ನಡಧ್ವಜ ಹಾರಿಸಿದ ರೂಪಾ ಸತೀಶ್

ಇಂದಿನ ಯುವತಿಯರಲ್ಲಿ ವಾಹನ ಚಾಲನೆಯ ಕ್ರೇಜ್ ವಿಶೇಷವೇನಲ್ಲ. ಆದರೆ ಈಗ ದೈತ್ಯ ಬೈಕ್‌ಗಳನ್ನು ಓಡಿಸುವ ಕ್ರೇಜ್ ಶುರುವಾಗಿದೆ. ತಮ್ಮ ದೇಹದ ಭಾರಕ್ಕಿಂತಲೂ ಏಳೆಂಟು ಪಟ್ಟು ಅಧಿಕ ಭಾರವಿರುವ ದೈತ್ಯ ಮೋಟಾರ್‌ ಬೈಕ್‌ಗಳನ್ನು ಲೀಲಾಜಾಲವಾಗಿ ಚಾಲನೆ ಮಾಡುತ್ತಾರೆಂದರೆ ಅದು ಅವರ ಧೈರ್ಯ ಮತ್ತು ಮಾನಸಿಕ ಸ್ಥೈರ್ಯದ ಪ್ರತೀಕ.

ಇಂತಹ ಬೈಕ್ ರೈಡಿಂಗ್ ನಲ್ಲೇ ಏನಾದರೊಂದು ಸಾಧನೆ ಮಾಡಬೇಕೆಂದು 27ರ ಹರೆಯದ ಐಟಿ ಉದ್ಯೋಗಿ, ಮಲೆನಾಡಿನ ಕುವರಿ ರಮ್ಯಾ ಮುಂದಾಗಿದ್ದಾಳೆ. ಹೌದು, ಶಿವಮೊಗ್ಗದ ನಿವಾಸಿ ರಮ್ಯಾ 14ನೇ ವಯಸ್ಸಿನಲ್ಲಿರುವಾಗ ಅಪ್ಪನ ಆರೋಗ್ಯದಲ್ಲಿ ಏರುಪೇರಾಗಿ ಯಾವ ವಾಹನವೂ ಸಿಗಲಿಲ್ಲ.

ವಾರದ ಸಾಧಕಿ: ಸಿಸ್ಕೋ ನಿರ್ದೇಶಕಿ ಪಲ್ಲವಿ ಅರೋರ ಸಂದರ್ಶನ

ಆದರೆ ಪಕ್ಕದ ಮನೆಯವರ ಬೈಕ್ ಮಾತ್ರ ಅವಳನ್ನು ಯಾವಾಗಲೂ ಸೆಳೆಯುತ್ತಿತ್ತು. ಆದರೆ ರೈಡ್ ಬರಬೇಕಲ್ಲ, ಅಂದೇ ತಾನು ಬೈಕ್ ಕಲಿಯಲೇಬೇಕೆಂದು ಮನಸ್ಸು ಮಾಡಿ ಈಗ ಅನೇಕ ದೇಶ -ವಿದೇಶ ಟ್ರಿಪ್ ಗಳನ್ನು ನಡೆಸಿ ಸಾಧನೆಗೈದಿದ್ದಾಳೆ.

 ನನಗೆ ರೈಡಿಂಗ್ ಕಷ್ಟವೆನಿಸಲಿಲ್ಲ

ನನಗೆ ರೈಡಿಂಗ್ ಕಷ್ಟವೆನಿಸಲಿಲ್ಲ

ರಮ್ಯಾ ಕಾಲೇಜು ಓದುವಾಗಲೇ ಬೈಕ್ ರೈಡಿಂಗ್ ಕಲಿತು, ಪಿಯುಸಿ ಓದುವಾಗಲೇ ಬೈಕ್ ರೈಡಿಂಗ್ ಮಾಡಿಕೊಂಡು ಬರುತ್ತಿದದ್ದನ್ನು ನೆನಪಿಸಿಕೊಳ್ಳುತ್ತಾರೆ. "ತಮ್ಮ ಕಾಲೇಜಿನಲ್ಲಿ ಎಲ್ಲರೂ ಗಂಡುಬೀರಿ ಎಂದು ರೇಗಿಸುತ್ತಿದ್ದರು. ಯಾವುದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ. ನಾನು ಮೂಲತಃ ಎನ್ ಸಿಸಿ ವಿದ್ಯಾರ್ಥಿ, ನನಗೆ ರೈಡಿಂಗ್ ಕಷ್ಟವೆನಿಸಲಿಲ್ಲ. ನಂತರ ನನ್ನ ಎಂಬಿಎ ವಿದ್ಯಾಭ್ಯಾಸಕ್ಕಾಗಿ ಧಾರವಾಡಕ್ಕೆ ಬಂದಾಗ ಸ್ನೇಹಿತರೊಂದಿಗೆ ಬೈಕ್ ರೈಡಿಂಗ್ ಮಾಡಲು ಶುರು ಮಾಡಿದೆ. ಕವಾಸಾಕಿ ನಿಂಜಾ, ರಾಯಲ್ ಎನ್‌ಫೀಲ್ಡ್‌ನಂಥ ಭಾರಿ ಗಾತ್ರದ ಮೋಟಾರ್‌ಬೈಕ್‌ಗಳನ್ನು ರೈಡ್ ಮಾಡುವುದು ಈಗಿನ ಯುವತಿಯರಿಗೆ ದೊಡ್ಡ ಸಂಗತಿ ಏನಲ್ಲ" ಅಂತಾರೆ.

 ಭಯ ಆಗುತ್ತೆ ಅಂದ್ರೆ ಕಷ್ಟ

ಭಯ ಆಗುತ್ತೆ ಅಂದ್ರೆ ಕಷ್ಟ

"ಸೀರೆ ಉಟ್ಕೊಂಡು ಸೈಕಲ್ ಓಡಿಸುತ್ತಿದ್ದ ಮಹಿಳೆಯರು ಈಗ ಚೂಡಿದಾರ್, ಸಲ್ವಾರ್, ಜೀನ್ಸ್ ಪ್ಯಾಂಟ್ ಹಾಕಿ ಬುಲೆಟ್ ಓಡಿಸುತ್ತಿದ್ದಾರೆ. ಯಾರು ಏನಂತಾರೋ ಎಂಬ ಅಂಜಿಕೆ ಬಿಟ್ಟು ಹೆವಿ ಬೈಕ್‌ಗಳನ್ನು ಓಡಿಸಬಹುದು. ಅದನ್ನು ಮ್ಯಾನೇಜ್ ಮಾಡೋದು ಕಷ್ಟ ಎಂದು ಹಿಂಜರಿಯದಿರಿ. ಭಾರೀ ಗಾತ್ರದ ಬೈಕ್‌ಗಳನ್ನು ಓಡಿಸುವುದರಿಂದ ಬ್ಯಾಲೆನ್ಸಿಂಗ್ ಕೂಡ ಚೆನ್ನಾಗಿ ಅಭ್ಯಾಸವಾಗುತ್ತದೆ. ಮಹಿಳೆಯರು ಭಾರೀ ಗಾತ್ರದ ಬೈಕ್ ಓಡಿಸುವ ವಿಚಾರದಲ್ಲಿ ಅಯ್ಯೋ ಅಂದ್ರೆ ಆಗೋದಿಲ್ಲ. ಮುಟ್ಟೋಕೂ ಭಯ ಆಗುತ್ತೆ ಅಂದ್ರೆ ಕಷ್ಟ. ಮೋಟಾರ್ ಬೈಕ್ ಚಾಲನೆ ಮಾಡುವುದರ ಬಗ್ಗೆ ಅವರಿಗೆ ಪ್ರೀತಿ ಇರಬೇಕು. ಜತೆಗೆ ಬೈಕ್ ಮೇಲೆ ಟೂರ್ ಹೋಗುವುದರ ಬಗೆಗೂ ಆಸಕ್ತಿ ಇರಬೇಕು. ಪುರುಷರಂತೆ ನಾನೂ ಬೈಕ್ ಓಡಿಸಬಲ್ಲೆ ಎಂಬ ಸ್ಥೈರ್ಯ ಇರಬೇಕು ಎನ್ನುತ್ತಾರೆ" ರಮ್ಯಾ.

ಮೌಂಟ್ ವಿನ್ಸನ್ ಮೇಲೆ ತ್ರಿವರ್ಣ ಧ್ವಜ, ಅರುಣಿಮಾ ಬರೆದ ಹೊಸ ದಾಖಲೆ

 ಅರಿವು ಮೂಡಿಸುವ ಕೆಲಸ

ಅರಿವು ಮೂಡಿಸುವ ಕೆಲಸ

ಇನ್ನು ಇದುವರೆಗೂ 500ಕ್ಕೂ ಹೆಚ್ಚು ರೈಡ್ ಗಳನ್ನು ಹಾಗೂ ದೇಶ - ವಿದೇಶಗಳನ್ನು ತನ್ನ ರಾಯಲ್ ಎನ್ ಫೀಲ್ಡ್ ಬೈಕ್ ನಲ್ಲೇ ಸುತ್ತಿರುವ ಈಕೆಗೆ ಈ ಬೈಕ್ ರೈಡಿಂಗ್ ನಲ್ಲಿಯೇ ಮಹಿಳೆಯರನ್ನು ಕರೆತರಬೇಕೆಂಬ ಹೆಬ್ಬಯಕೆ. ಅಲ್ಲದೇ ಸಾಮಾಜಿಕ ಕಳಕಳಿ ವಿಷಯವನ್ನಿಟ್ಟಿಕೊಂಡು ಇಡೀ ಭಾರತದಾದ್ಯಂತ ಸಂಚರಿಸಿ ಅರಿವು ಮೂಡಿಸುವ ಪಣವನ್ನು ಮುಂದಿನ ದಿನಗಳಲ್ಲಿ ಮಾಡಬೇಕೆಂಬ ಹಂಬಲವಿದೆ. ಕಾಲೇಜು ದಿನಗಳಿಂದಲೇ ಬೈಕ್ ಗೀಳು ಹತ್ತಿಸಿಕೊಂಡಿರುವ ರಮ್ಯಾ ತಮ್ಮ ಹದಿನೈದು ವರ್ಷಗಳಿಂದ ಬೈಕ್ ಓಡಿಸುತ್ತಿದ್ದಾರೆ.

 ಚಾಲಕನ ನೈಪುಣ್ಯ ಅವಲಂಬಿಸಿದೆ

ಚಾಲಕನ ನೈಪುಣ್ಯ ಅವಲಂಬಿಸಿದೆ

ವಾಹನ ಚಾಲನೆ ಮಾಡುವುದೆಂದರೆ ಅದು ದೈಹಿಕ ಸಾಮರ್ಥ್ಯಕ್ಕಿಂತಲೂ ಚಾಲಕನ ನೈಪುಣ್ಯವನ್ನು ಅವಲಂಬಿಸಿದೆ ಎನ್ನುತ್ತಾರೆ ಹರ್ಲೆ ಡೇವಿಡ್ಸನ್ ರೋಡ್ ಕಿಂಗ್ ಓಡಿಸುವ ಅಂಬಿಕಾ ಶರ್ಮಾ. ಅಂಬಿಕಾ ಶರ್ಮಾ ಅವರು ರಮ್ಯಾ ಸ್ನೇಹಿತೆ. ಅವರ ತೂಕ 65 ಕೆಜಿ. ಆದರೆ ಅವರು ಓಡಿಸುತ್ತಿರುವ ಕ್ಲಾಸಿಕ್ 350 ಸಿಸಿ ರಾಯಲ್ ಎನ್‌ಫೀಲ್ಡ್ ಬುಲೆಟ್‌ನ ತೂಕ 180 ಕೆಜಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bike riding skill is not only for Boys. Now women also came to this field.27 old year girl Ramya did the international trip and attended the competition. She is basically from Shivamogga district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more