ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿಮ್ಮದು ಪರಿಸರ ಸ್ನೇಹಿ ಮನೆಯೇ? : ಪ್ರಶಸ್ತಿಗೆ ಅರ್ಜಿ ಹಾಕಿ

|
Google Oneindia Kannada News

ಶಿವಮೊಗ್ಗ, ಜೂನ್ 17 : ಶಿವಮೊಗ್ಗ ಜಿಲ್ಲಾಡಳಿತ 'ಪರಿಸರ ಸ್ನೇಹಿ ಕುಟುಂಬ' ಎಂಬ ಪ್ರಶಸ್ತಿಯನ್ನು ಘೋಷಣೆ ಮಾಡಿದೆ. ಜನರು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮೂಲಕ ಪ್ರಶಸ್ತಿಯನ್ನು ಪಡೆಯಬಹುದಾಗಿದೆ. ಸ್ವತಃ ಜಿಲ್ಲಾಧಿಕಾರಿಗಳೇ ಮನೆಗೆ ಬಂದು ಪ್ರಶಸ್ತಿ ನೀಡಲಿದ್ದಾರೆ.

ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ಈ ಕುರಿತು ಮಾಹಿತಿ ನೀಡಿದರು. 'ವಿಶ್ವ ಪರಿಸರ ದಿನದ ಅಂಗವಾಗಿ ಮಾಸಿಕ ಕಾರ್ಯಕ್ರಮದ ಮೂಲಕ ಪರಿಸರ ಸ್ನೇಹಿ ಕುಟುಂಬ ಪ್ರಶಸ್ತಿ ನೀಡಲಾಗುತ್ತದೆ' ಎಂದು ಹೇಳಿದರು.

ಮಂಗಳೂರನ್ನು ಹಸಿರಾಗಿಸುವ ಹಾದಿಯಲ್ಲಿ ಜೀತ್ ಮಿಲನ್‌ಮಂಗಳೂರನ್ನು ಹಸಿರಾಗಿಸುವ ಹಾದಿಯಲ್ಲಿ ಜೀತ್ ಮಿಲನ್‌

ಮೊದಲ ಹಂತದಲ್ಲಿ ಶಿವಮೊಗ್ಗ ನಗರದಲ್ಲಿ ಈ ಕಾರ್ಯಕ್ರಮವನ್ನು ಜಾರಿಗೆ ತರಲಾಗುತ್ತದೆ. ಸ್ವಚ್ಛ ಹಾಗೂ ಪ್ಲಾಸ್ಟಿಕ್ ಬಳಕೆ ಮಿತಿಯಲ್ಲಿರುವ ಮನೆಗಳನ್ನು ಕೆಲವು ನಿಯಮಗಳ ಅನ್ವಯ ಆಯ್ಕೆಮಾಡಿ ಪರಿಶೀಲನೆ ನಡೆಸಿ, ಪ್ರಶಸ್ತಿ ನೀಡಲಾಗುತ್ತದೆ.

ಮತ್ತೊಂದು ಮಹತ್ವದ ನಿರ್ಧಾರ ಘೋಷಿಸಿದ ಉಡುಪಿ ಜಿಲ್ಲಾಧಿಕಾರಿಮತ್ತೊಂದು ಮಹತ್ವದ ನಿರ್ಧಾರ ಘೋಷಿಸಿದ ಉಡುಪಿ ಜಿಲ್ಲಾಧಿಕಾರಿ

Shivamogga district administration announces environment awards

ಈ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವ ಜನರು ಮೊದಲು ದೂರವಾಣಿ ಕರೆ ಮಾಡಿ ತಮ್ಮ ಹೆಸರು, ವಿಳಾಸವನ್ನು ನಮೂದು ಮಾಡಿಕೊಳ್ಳಬೇಕು. ಕರೆ ಮಾಡಬೇಕಾದ ಸಂಖ್ಯೆ 8277163546, 9945387650.

ಚಿಕ್ಕಮಗಳೂರಿನಲ್ಲಿ ಗಿಡ ನೆಟ್ಟು ನಿಶ್ಚಿತಾರ್ಥ ಮಾಡಿಕೊಂಡ ಜೋಡಿಚಿಕ್ಕಮಗಳೂರಿನಲ್ಲಿ ಗಿಡ ನೆಟ್ಟು ನಿಶ್ಚಿತಾರ್ಥ ಮಾಡಿಕೊಂಡ ಜೋಡಿ

ನೋಂದಣಿ ಮಾಡಿಕೊಂಡ ಮನೆಗೆ ಮೊದಲು ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತದೆ. ಪ್ರಶಸ್ತಿಗೆ ಆಯ್ಕೆಯಾದರೆ ಸ್ವತಃ ಜಿಲ್ಲಾಧಿಕಾರಿಗಳೇ ಮನೆಗೆ ಆಗಮಿಸಿ ಪ್ರಶಸ್ತಿಯನ್ನು ನೀಡಲಿದ್ದಾರೆ.

ಷರತ್ತಗಳು

* ಮನೆ ಶಿವಮೊಗ್ಗ ನಗರ ಪ್ರದೇಶದಲ್ಲಿರಬೇಕು
* ಮನೆಯಲ್ಲಿ ಹಸಿ-ಒಣ ಕಸ ಪ್ರತ್ಯೇಕವಾಗಿ ಸಂಗ್ರಹಿಸಬೇಕು, ವಿಲೇವಾರಿ ಮಾಡಬೇಕು
* ಹಾಕು, ತರಕಾರಿ, ದಿನನಿತ್ಯದ ಸಾಮಾಗ್ರಿ ತರಲು ಪ್ರತ್ಯೇಕ ಬಟ್ಟೆ ಚೀಲ ಬಳಸುತ್ತಿರಬೇಕು
* ಕಿಚನ್ ಗಾರ್ಡ್‌ನ್ ಇರುವ ಮನೆಯನ್ನು ಪ್ರತ್ಯೇಕವಾಗಿ ಪರಿಗಣಿಸಲಾಗುತ್ತದೆ
* ಸ್ವಂತ ಸ್ಥಳ, ಮನೆಯ ಆವರಣದಲ್ಲಿ ಗಿಡ, ಮರ ಬೆಳೆಸಿದ್ದನ್ನು ಪರಿಗಣಿಸಲಾಗತ್ತದೆ
* ಮಳೆ ನೀರು ಕೊಯ್ಲು ವ್ಯವಸ್ಥೆ ಇದ್ದರೆ ವಿಶೇಷವಾಗಿ ಗುರುತಿಸಲಾಗುತ್ತದೆ
* ಸೋಲಾರ್ ವಿದ್ಯುತ್ ವ್ಯವಸ್ಥೆ ಆಳವಡಿಸಿಕೊಂಡಿದ್ದರೆ ಆದ್ಯತೆ
* ಸ್ವಚ್ಚತೆಯ ಬಗ್ಗೆ ಕುಟುಂಬ ಸದಸ್ಯರಿಗೆ ಇರುವ ಜ್ಞಾನವನ್ನು ಪರಿಗಣಿಸಲಾಗುತ್ತದೆ

English summary
Shivamogga district administration announced environment awards for the family who segregate waste and use less plastic. People can participate in contest Deputy Commissioner K.A.Dayanand will come to house to distribute award.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X