ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜನರ ದುಡ್ಡಲ್ಲಿ ಶಿವಮೊಗ್ಗ ದಸರಾ; ಪಾಲಿಕೆ ಸದಸ್ಯರು, ಅಧಿಕಾರಿಗಳಿಗೆ ಮಾತ್ರ ಕಾರ್ಯಕ್ರಮ?

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಅಕ್ಟೋಬರ್ 8: ಮೈಸೂರು ಬಳಿಕ ವೈಭವದ ದಸರಾ ನಡೆಯುವುದು ಶಿವಮೊಗ್ಗದಲ್ಲೇ. ನಾಡಹಬ್ಬವನ್ನು ಅದ್ಧೂರಿಯಾಗಿ ಆಚರಿಸುವುದರಿಂದ ಮಲೆನಾಡ ದಸರಾ ರಾಜ್ಯಮಟ್ಟದಲ್ಲಿ ಪ್ರಖ್ಯಾತಿ ಪಡೆಯುತ್ತಿದೆ. ಕೊರೊನಾ ಇದ್ದರೂ ಈ ಭಾರಿ ಎರಡು ಕೋಟಿ ರೂ. ವೆಚ್ಚದಲ್ಲಿ ದಸರಾ ಮಾಡಲು ನಿರ್ಧರಿಸಲಾಗಿದೆ. ಆದರೆ ಜನರ ತೆರಿಗೆ ಹಣದಲ್ಲಿ ನಡೆಯುತ್ತಿರುವ ನಾಡಹಬ್ಬದ ಬಗ್ಗೆ, ಜನರಿಗೇ ಮಾಹಿತಿ ಕೊಡದೆ ಹಬ್ಬದ ಸಡಗರ ಕಳೆಗುಂದಿದೆ.

ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಶಿವಮೊಗ್ಗದಲ್ಲಿ ದಸರಾ ಆಚರಣೆ ನಡೆಯುತ್ತದೆ. ಒಂಭತ್ತು ದಿನ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಮಹಿಳೆಯರು, ಮಕ್ಕಳು ಸೇರಿದಂತೆ ವಿವಿಧ ವರ್ಗದ ಜನರಿಗೆ ಆಸಕ್ತಿ ಮೂಡಿಸುವ ಕಾರ್ಯಕ್ರಮಗಳು ಆಯೋಜಿಸಲಾಗಿದೆ. ಆದರೆ ಇದ್ಯಾವುದರ ಬಗ್ಗೆಯೂ ಜನರಿಗೆ ಮಾಹಿತಿ ಇಲ್ಲವಾಗಿದೆ.

ನೋಡಬನ್ನಿ ಮಂಗಳೂರು ದಸರಾ ವೈಭವ: ಕುದ್ರೋಳಿ ಕ್ಷೇತ್ರದಲ್ಲಿ ಚಾಲನೆನೋಡಬನ್ನಿ ಮಂಗಳೂರು ದಸರಾ ವೈಭವ: ಕುದ್ರೋಳಿ ಕ್ಷೇತ್ರದಲ್ಲಿ ಚಾಲನೆ

 ಸುದ್ದಿಗೋಷ್ಠಿಯು ಇಲ್ಲ, ಆಮಂತ್ರಣ ಪತ್ರಿಕೆಯೂ ಇಲ್ಲ

ಸುದ್ದಿಗೋಷ್ಠಿಯು ಇಲ್ಲ, ಆಮಂತ್ರಣ ಪತ್ರಿಕೆಯೂ ಇಲ್ಲ

ಪ್ರತಿ ವರ್ಷ ದಸರಾ ಆಚರಣೆಗೂ ಮುನ್ನ ಮೇಯರ್, ಉಪಮೇಯರ್, ಕಮಿಷನರ್, ಪಾಲಿಕೆ ಸದಸ್ಯರು ಸುದ್ದಿಗೋಷ್ಠಿ ನಡೆಸುತ್ತಿದ್ದರು. ಪೂರ್ಣ ಮಾಹಿತಿ ಒದಗಿಸುತ್ತಿದ್ದರು. ಆದರೆ ಈ ಭಾರಿ ಇವೆಲ್ಲಕ್ಕೂ ಬ್ರೇಕ್ ಬಿದ್ದಿದೆ. ಆಮಂತ್ರಣ ಪತ್ರಿಕೆಯನ್ನೂ ಒದಗಿಸದೆ ನಾಡಹಬ್ಬ ಆಚರಣೆ ಮಾಡಲಾಗುತ್ತಿದೆ. ಇದರಿಂದಾಗಿ ಜನರಿಗೆ ಯಾವುದೇ ಮಾಹಿತಿ ಇಲ್ಲದೆ ದಸರಾ ನಡೆಯುತ್ತಿದೆ.

 ಜನರ ಹಣದ ಆಚರಣೆಯಲ್ಲಿ, ಜನರೇ ಇಲ್ಲ

ಜನರ ಹಣದ ಆಚರಣೆಯಲ್ಲಿ, ಜನರೇ ಇಲ್ಲ

ಪ್ರತಿ ಬಾರಿಯಂತೆ ಈ ಬಾರಿಯೂ ಎರಡು ಕೋಟಿ ರೂ. ವೆಚ್ಚದಲ್ಲಿ ಶಿವಮೊಗ್ಗ ದಸರಾ ಆಚರಣೆಗೆ ನಿರ್ಧರಿಸಲಾಗಿದೆ. ಜನರ ತೆರಿಗೆ ಹಣದಲ್ಲಿ ಈ ಹಬ್ಬ ಮಾಡಲಾಗುತ್ತಿದೆ. ಆದರೆ ಜನರ ಸಹಭಾಗಿತ್ವವೇ ಇಲ್ಲವಾಗಿದೆ. ಮಹಿಳಾ ದಸರಾ, ಚಲನಚಿತ್ರೋತ್ಸವ ಸೇರಿದಂತೆ ಬಹುತೇಕ ಯಾವುದೆ ಕಾರ್ಯಕ್ರಮದಲ್ಲೂ ಜನ ಕಾಣಿಸುವುದಿಲ್ಲ. ಪ್ರಚಾರವನ್ನೇ ಮಾಡದೆ, ಜನರಿಗೆ ಮಾಹಿತಿಯನ್ನೇ ಒದಗಿಸದೆ ಆಚರಣೆ ಮಾಡಲಾಗುತ್ತಿದೆ.

ಎಲ್ಲಕ್ಕೂ ಕೋವಿಡ್ ಕಾರಣ

ಎಲ್ಲಕ್ಕೂ ಕೋವಿಡ್ ಕಾರಣ

ಕೊರೊನಾ ಪ್ರಕರಣಗಳು ಸಂಪೂರ್ಣ ತಗ್ಗಿಲ್ಲ. ಈಗಲೂ ಹಲವರು ಕೋವಿಡ್‌ಗೆ ತುತ್ತಾಗುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ವಾರಕ್ಕೊಬ್ಬರಾದರೂ ಕೋವಿಡ್‌ಗೆ ಬಲಿಯಾಗುತ್ತಿದ್ದಾರೆ. ಇದೇ ಕಾರಣಕ್ಕೆ ಅದ್ಧೂರಿ ದಸರಾಗೆ ಬ್ರೇಕ್ ಹಾಕಲಾಗಿದೆ ಎಂದು ಪಾಲಿಕೆ ಸಬೂಬು ಹೇಳುತ್ತಿದೆ. ಚಲನಚಿತ್ರೋತ್ಸವದ ಉದ್ಘಾಟನೆ ವೇಳೆಯೂ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ ಇದನ್ನೆ ಹೇಳಿದ್ದಾರೆ. "ಕೋವಿಡ್ ಕಾರಣದಿಂದಾಗಿ ಹೆಚ್ಚು ಜನರನ್ನು ಸೇರಿಸಲು ಆಗಿಲ್ಲ. ಜನ ಸೇರಿ ಒಂದು ವೇಳೆ ಹೆಚ್ಚು ಕಡಿಮೆಯಾದರೆ ಪಾಲಿಕೆಯನ್ನೇ ಹೊಣೆ ಮಾಡಲಾಗುತ್ತದೆ,'' ಎಂದಿದ್ದಾರೆ.

 ಯಾಕಾಗಿ ನಡೆಯುತ್ತಿದೆ ಕಾರ್ಯಕ್ರಮ?

ಯಾಕಾಗಿ ನಡೆಯುತ್ತಿದೆ ಕಾರ್ಯಕ್ರಮ?

"ಈ ಬಾರಿ ಶಿವಮೊಗ್ಗ ದಸರಾದಲ್ಲಿ ಮಹಿಳಾ ದಸರಾ, ಆಹಾರ ದಸರಾ, ಸಾಂಸ್ಕೃತಿಕ ಕಾರ್ಯಕ್ರಮಗಳು, ಚಲನಚಿತ್ರೋತ್ಸವ, ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಆದರೆ ಜನರು ಪಾಲ್ಗೊಳ್ಳುವಂತಿಲ್ಲ. ಹೆಚ್ಚು ಜನರನ್ನು ಸೇರುವಂತಿಲ್ಲ ಎಂಬ ಸ್ವಯಂ ನಿಬಂಧನೆಗೆ ಪಾಲಿಕೆ ಒಳಗಾಗಿದೆ. ಹಾಗಿದ್ದಾಗ ಇಷ್ಟೊಂದು ಕಾರ್ಯಕ್ರಮಗಳನ್ನು ನಡೆಸುತ್ತಿರುವುದೇಕೆ? ಕೋಟಿ ಕೋಟಿ ಖರ್ಚು ಮಾಡುತ್ತಿರುವುದೇಕೆ?," ಅನ್ನುವುದು ಜನರ ಪ್ರಶ್ನೆ.

ಈ ಬಾರಿ ಶಿವಮೊಗ್ಗ ದಸರಾ ಅತಿಥಿಗಳು, ಮಹಾನಗರ ಪಾಲಿಕೆ ಸದಸ್ಯರು, ಅಧಿಕಾರಿಗಳು, ಇವರ ಪರಿಚಿತರು, ಬೆಂಬಲಿಗರಿಗೆ ಸೀಮಿತವಾಗಿದೆ. ಬಹುತೇಕ ಕಾರ್ಯಕ್ರಮಗಳು, ಆಟೋಟ ಸ್ಪರ್ಧೆಯಲ್ಲಿ ಇವರಷ್ಟೆ ಕಾಣಸಿಗುತ್ತಾರೆ. ಕೋವಿಡ್ ನೆಪದಲ್ಲಿ ಜನರ ಹಣದಲ್ಲಿ ಜನರೇ ಇಲ್ಲದೆ ನಾಡಹಬ್ಬ ಆಚರಿಸುತ್ತಿರುವುದು ಜನರ ಬೇಸರಕ್ಕೂ ಕಾರಣವಾಗಿದೆ.

English summary
Shivamogga Dasara Festival is being celebrated by Shivamogga City Corporation, But people have been accused of not informed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X