ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಸಕ ಕಿಮ್ಮನೆ ರತ್ನಾಕರಗೆ ಶಿವಮೊಗ್ಗ ಕೋರ್ಟ್‌ನಿಂದ ಸಮನ್ಸ್

By ನಮ್ಮ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ನವೆಂಬರ್ 5 : ತೀರ್ಥಹಳ್ಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಕಿಮ್ಮನೆ ರತ್ನಾಕರ ಅವರಿಗೆ ಶಿವಮೊಗ್ಗ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಸಮನ್ಸ್ ಜಾರಿ ಮಾಡಿದ್ದು, ಡಿ.22ರಂದು ಕೋರ್ಟ್‌ಗೆ ಹಾಜರಾಗುವಂತೆ ಸೂಚಿಸಿದೆ.

ಶಿವಮೊಗ್ಗ 4ನೇ ಸಿವಿಲ್ ನ್ಯಾಯಾಲಯ ಶನಿವಾರ ಕಿಮ್ಮನೆ ರತ್ನಾಕರ ಅವರಿಗೆ ಸಮನ್ಸ್ ಜಾರಿ ಮಾಡಿದೆ. ಕಿಮ್ಮನೆ ರತ್ನಾಕರ ಅವರು ಜುಲೈನಲ್ಲಿ ಪತ್ರಿಕಾಗೋಷ್ಠಿ ನಡೆಸಿದಾಗ ತಮ್ಮ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದರು ಎಂದು ವಕೀಲ ಕೆ.ಪಿ.ಶ್ರೀಪಾಲ್ ದೂರು ದಾಖಲು ಮಾಡಿದ್ದರು.

ಸಾಮಾಜಿಕ ತಾಣದಲ್ಲಿ ಸಚಿವ ಕಿಮ್ಮನೆ ರತ್ನಾಕರ್ ವಿದಾಯ ಭಾಷಣಸಾಮಾಜಿಕ ತಾಣದಲ್ಲಿ ಸಚಿವ ಕಿಮ್ಮನೆ ರತ್ನಾಕರ್ ವಿದಾಯ ಭಾಷಣ

Shivamogga court summons to Kimmane Rathnakar

ಈ ದೂರಿನ ಅನ್ವಯ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ನಿರ್ಮಲಾ ಅವರು ಸಮನ್ಸ್ ಜಾರಿ ಮಾಡಿದ್ದಾರೆ. ಡಿ.22ರಂದು ವಿಚಾರಣೆಗೆ ಹಾಜರಾಗಬೇಕು ಎಂದು ಸಮನ್ಸ್‌ನಲ್ಲಿ ಸೂಚಿಸಲಾಗಿದೆ.

ದಿ ವೈರ್ ವಿರುದ್ಧ ಅಮಿತ್ ಶಾ ಪುತ್ರನಿಂದ ಮಾನನಷ್ಟ ಮೊಕದ್ದಮೆದಿ ವೈರ್ ವಿರುದ್ಧ ಅಮಿತ್ ಶಾ ಪುತ್ರನಿಂದ ಮಾನನಷ್ಟ ಮೊಕದ್ದಮೆ

ಸಾಮಾಜಿಕ ಹೋರಾಟಗಾರ ಮತ್ತು ವಕೀಲ ಕೆ.ಪಿ.ಶ್ರೀಪಾಲ್ ಅವರು ಸದರಿ ಪ್ರಕರಣದಲ್ಲಿ ಐಪಿಸಿ ಸಕ್ಷನ್ 499& 500 ಅಡಿಯಲ್ಲಿ ಕಿಮ್ಮನೆ ರತ್ನಾಕರ ಅವರಿಗೆ ಶಿಕ್ಷೆ ವಿಧಿಸಬೇಕು ಎಂದು ಮನವಿ ಮಾಡಿದ್ದಾರೆ.

ಯತೀಂದ್ರನ ಮೇಲೆ ಆರೋಪ ಹೊರಿಸಿದರೆ ತಕ್ಕ ಶಾಸ್ತಿ ಮಾಡ್ತೀನಿ: ಸಿಎಂಯತೀಂದ್ರನ ಮೇಲೆ ಆರೋಪ ಹೊರಿಸಿದರೆ ತಕ್ಕ ಶಾಸ್ತಿ ಮಾಡ್ತೀನಿ: ಸಿಎಂ

English summary
Shivamogga District & Sessions court issued summons to Former minister and Thirthahalli Congress MLA Kimmane Rathnakar in defamation case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X