ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜನರಿಗೆ ತೆರಿಗೆ ಬರೆ; ಆಸ್ತಿ ತೆರಿಗೆ ಹೆಚ್ಚಿಸಿದ ಮಹಾನಗರ ಪಾಲಿಕೆ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಡಿಸೆಂಬರ್ 20: ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 2020-21ನೇಯ ಸಾಲಿನಿಂದ ಅನ್ವಯವಾಗುವಂತೆ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಏರಿಕೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ.

ಮಹಾನಗರ ಪಾಲಿಕೆ ಆಯುಕ್ತರಾದ ಚಿದಾನಂದ ವಟಾರೆ ಈ ಕುರಿತು ಮಾಹಿತಿ ನೀಡಿದ್ದಾರೆ. "ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 2002ರ ಏಪ್ರಿಲ್ ಮಾಹೆಯಿಂದ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ದತಿ ಅನುಷ್ಠಾನದಲ್ಲಿದೆ" ಎಂದು ಹೇಳಿದ್ದಾರೆ.

ಆದಾಯ ತೆರಿಗೆ ವಂಚನೆ ಕೇಸ್: ಕಾರ್ತಿ ಚಿದಂಬರಂಗೆ ಸಿಹಿ ಸುದ್ದಿ ಆದಾಯ ತೆರಿಗೆ ವಂಚನೆ ಕೇಸ್: ಕಾರ್ತಿ ಚಿದಂಬರಂಗೆ ಸಿಹಿ ಸುದ್ದಿ

ಕರ್ನಾಟಕ ಪೌರ ನಿಗಮಗಳ ಪ್ರಕಾರ ಪ್ರತಿ ಮೂರು ವರ್ಷಗಳಿಗೊಮ್ಮೆ ತೆರಿಗೆಯನ್ನು ಕನಿಷ್ಠ ಶೇ 15 ರಿಂದ 30ರವರೆಗೆ ಹೆಚ್ಚಿಸುವುದು ಪದ್ಧತಿಯಾಗಿದೆ. ಅಂತೆಯೇ ಹಿಂದಿನ ನಾಲ್ಕು ಬ್ಲಾಕ್‌ಗಳ ಅವಧಿಯಲ್ಲಿ ಅಂದರೆ 2008-09, 2011-12, 2014-15 ಮತ್ತು 2017-18ನೇ ಸಾಲುಗಳಲ್ಲಿ ಆಸ್ತಿ ತೆರಿಗೆಯನ್ನು ಹೆಚ್ಚಿಸಲಾಗಿದೆ.

ITR Filing: ನಿಮ್ಮ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಪ್ರಮುಖ ದಿನಾಂಕಗಳುITR Filing: ನಿಮ್ಮ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಪ್ರಮುಖ ದಿನಾಂಕಗಳು

Shivamogga City Corporation Hikes Property Tax

ಈ ಕಾಯ್ದೆ ಅನ್ವಯ 2020-21ನೇ ಸಾಲಿನಿಂದ ಮುಂದಿನ ಮೂರು ವರ್ಷಗಳ ಅವಧಿಗೆ ಆಸ್ತಿ ತೆರಿಗೆಯನ್ನು ಶೇ.15 ರಷ್ಟು ಹೆಚ್ಚಿಸಲಾಗಿದೆ. ಇದರಿಂದಾಗಿ ಕೋವಿಡ್ ಸಂದರ್ಭದಲ್ಲಿ ಜನರಿಗೆ ತೆರಿಗೆ ಬರೆ ಬಿದ್ದಿದೆ.

'ಪಿಎಂ ಕಿಸಾನ್ ಸಮ್ಮಾನ್’ ಹಣಕ್ಕಾಗಿ 'ರೈತ’ರಾದ ತೆರಿಗೆ ಪಾವತಿದಾರರು!'ಪಿಎಂ ಕಿಸಾನ್ ಸಮ್ಮಾನ್’ ಹಣಕ್ಕಾಗಿ 'ರೈತ’ರಾದ ತೆರಿಗೆ ಪಾವತಿದಾರರು!

ಎಷ್ಟು ಏರಿಕೆ? : 2017ರಿಂದ 2020ರ ಮಾರ್ಚ್ ತಿಂಗಳ ತನಕ ವಸತಿ ಉದ್ದೇಶದ ಕಟ್ಟಡಗಳಿಗೆ ಶೇ 20, ವಾಣಿಜ್ಯ ಕಟ್ಟಡಗಳಿಗೆ ಶೇ 25, ಕೈಗಾರಿಕಾ ಉದ್ದೇಶದ ಕಟ್ಟಡಗಳಿಗೆ ಶೇ 28 ಹಾಗೂ ಖಾಲಿ ನಿವೇಶನಗಳಿಗೆ ಶೇ 30ರಷ್ಟು ಆಸ್ತಿ ತೆರಿಗೆ ಇತ್ತು.

2020-21ನೇ ಸಾಲಿನಿಂದ ಆಸ್ತಿ ತೆರಿಗೆಯನ್ನು ಶೇ 15ರಷ್ಟು ಹೆಚ್ಚಿಸಿ ಪರಿಷ್ಕೃತ ತೆರಿಗೆಯನ್ನು ಅನುಷ್ಠಾನಗೊಳಿಸಲಾಗಿದೆ. ಶಿವಮೊಗ್ಗ ನಗರದ ಅಭಿವೃಧ್ಧಿ ಹಾಗೂ ಪಾಲಿಕೆಯ ಸಂಪನ್ಮೂಲ ಕ್ರೋಢೀಕರಣ ದೃಷ್ಟಿಯಿಂದ ಆಸ್ತಿ ತೆರಿಗೆಯ ಮರುಪರಿಷ್ಕರಣೆ ಅವಶ್ಯವಾಗಿದೆ ಎಂದು ಪಾಲಿಕೆ ಹೇಳಿದೆ.

ನಗರದಲ್ಲಿರುವ ಆಸ್ತಿ ಮಾಲೀಕರು ಪರಿಷ್ಕರಿಸಿದ ಆಸ್ತಿ ತೆರಿಗೆಯನ್ನು ಪಾವತಿಸಿ ಪಾಲಿಕೆಯೊಂದಿಗೆ ಸಹಕರಿಸುವಂತೆ ಹಾಗೂ ಈ ಮೂಲಕ ನಗರದ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸುವಂತೆ ಆಯುಕ್ತರು ಜನರಲ್ಲಿ ಮನವಿಯನ್ನು ಮಾಡಿದ್ದಾರೆ.

2020-21ನೇ ಸಾಲಿನ ಆಸ್ತಿ ತೆರಿಗೆಯನ್ನು ಈಗಾಗಲೇ ಪಾವತಿ ಮಾಡಿರುವ ಆಸ್ತಿ ಮಾಲೀಕರು ಪರಿಷ್ಕೃತ ತೆರಿಗೆಯ ಬಾಕಿ ಇರುವ ತೆರಿಗೆಯನ್ನು 2021ರ ಮಾರ್ಚ್ ತಿಂಗಳೊಳಗೆ ಪಾವತಿಸಬಹುದು. ಆಗ ದಂಡರಹಿತವಾಗಿ ಪಾವತಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

English summary
Shivamogga city corporation announced hike of property tax rates by 15 to 30 per cent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X