ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗದಲ್ಲಿ ಸ್ಫೋಟ; ಘಟನಾ ಸ್ಥಳಕ್ಕೆ ಸಚಿವ ಈಶ್ವರಪ್ಪ ಭೇಟಿ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಜನವರಿ 22: "ಈ ಸ್ಫೋಟಕ್ಕೆ ಕಾರಣವೇನು? ಎಂಬ ಬಗ್ಗೆ ತನಿಖಾ ತಂಡವೇ ಸ್ಪಷ್ಟತೆ ನೀಡಲಿದೆ. ಶೃಂಗೇರಿಯ ತನಕ ಶಬ್ಧ ಕೇಳಿದೆ ಎಂದು ಜನರು ಹೇಳುತ್ತಿದ್ದಾರೆ" ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದರು.

ಶಿವಮೊಗ್ಗ ತಾಲೂಕಿನ ಹುಣಸೋಡು ಗ್ರಾಮದ ಬಳಿಯ ಗುರುವಾರ ರಾತ್ರಿ ಭಾರೀ ಸ್ಪೋಟ ಸಂಭವಿಸಿದೆ. ಶುಕ್ರವಾರ ಬೆಳಗ್ಗೆ ಘಟನಾ ಸ್ಥಳಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಸ್. ಈಶ್ವರಪ್ಪ ಭೇಟಿ ನೀಡಿದರು.

ಶಿವಮೊಗ್ಗ; ಸ್ಫೋಟ ನಡೆದ ಪ್ರದೇಶದಲ್ಲಿವೆ ಸುಮಾರು 50 ಕ್ರಷರ್ ಶಿವಮೊಗ್ಗ; ಸ್ಫೋಟ ನಡೆದ ಪ್ರದೇಶದಲ್ಲಿವೆ ಸುಮಾರು 50 ಕ್ರಷರ್

"ಹುಣಸೋಡಿನ ನಡೆದ ಸ್ಫೋಟ ಶಿವಮೊಗ್ಗ ಜನರನ್ನು ತಲ್ಲಣಗೊಳಿಸಿದ್ದು ಈ ಸ್ಫೋಟಕ್ಕೂ ಹಾಗೂ ನಿಗೂಢ ಶಬ್ಧಕ್ಕೂ ಸಂಬಂಧವಿದೆಯಾ? ಎಂಬುದರ ಬಗ್ಗೆ ತನಿಖಾ ತಂಡ ಸ್ಪಷ್ಟತೆ ನೀಡಲಿದೆ" ಎಂದು ಈಶ್ವರಪ್ಪ ಸ್ಪಷ್ಟಪಡಿಸಿದರು.

ಶಿವಮೊಗ್ಗದಲ್ಲಿ ಸ್ಫೋಟ; ಉನ್ನತ ಮಟ್ಟದ ತನಿಖೆಗೆ ಸಿಎಂ ಆದೇಶ ಶಿವಮೊಗ್ಗದಲ್ಲಿ ಸ್ಫೋಟ; ಉನ್ನತ ಮಟ್ಟದ ತನಿಖೆಗೆ ಸಿಎಂ ಆದೇಶ

Shivamogga Blast : Minister KS Eshwarappa Reaction to Stone Quarry Blast Near Hunasodu Village

"ಅಕ್ರಮ ಗಣಿಗಾರಿಕೆ ಎಲ್ಲಾ ಕಡೆ ಇದೆ. ಅಕ್ರಮ ಗಣಿಗಾರಿಕೆ ವಿರುದ್ಧ ನಾವು ಕ್ರಮ ತೆಗೆದುಕೊಂಡಿದ್ದೆವು, ಇನ್ನೂ ಮುಂದೆಯೂ ಕ್ರಮ ಕೈಗೊಳ್ಳಲಿದ್ದೇವೆ. ಆದರೆ, ಸ್ಫೋಟಕ್ಕೆ ಕಾರಣವೇನು? ಇದು ತಿಳಿಬೇಕಿದೆ" ಎಂದರು.

ಶಿವಮೊಗ್ಗ ಸ್ಫೋಟ; ಸಿಗರೇಟು ಸೇದುತ್ತಿದ್ದ ಕಾರ್ಮಿಕರು! ಶಿವಮೊಗ್ಗ ಸ್ಫೋಟ; ಸಿಗರೇಟು ಸೇದುತ್ತಿದ್ದ ಕಾರ್ಮಿಕರು!

"ನಿನ್ನೆ ನಾನು ಊರಿನಲ್ಲಿ ಇರಲಿಲ್ಲ. ಬೆಂಗಳೂರಿನಿಂದ ಬಂದಿದ್ದೇನೆ. ನಮ್ಮ ಮನೆಯ ಕಿಟಕಿ ತೆಗೆದುಕೊಂಡಿತ್ತು. ಆ ಮೇಲೆ ಅನುಭವಕ್ಕೆ ಬಂದಿದೆ. ಸ್ಫೋಟದಲ್ಲಿ ನಾಲ್ವರು ಬಿಹಾರ ಮೂಲದ ಕಾರ್ಮಿಕರು ಸಾವನ್ನಪ್ಪಿರುವುದು ತಿಳಿದುಬಂದಿದೆ" ಎಂದು ತಿಳಿಸಿದರು.

ಭೂಕಂಪ ಎಂದು ತಿಳಿದ ಜನರು; ಗುರುವಾರ ರಾತ್ರಿ 10.30ರ ಸುಮಾರಿಗೆ ಶಿವಮೊಗ್ಗ ತಾಲೂಕಿನ ಹುಣಸೋಡು ಗ್ರಾಮದ ಬಳಿಯ ಕ್ರಷರ್‌ಗೆ ಜಿಲೆಟಿನ್ ಕಡ್ಡಿಗಳನ್ನು ವಾಹನದಲ್ಲಿ ಸಾಗಣೆ ಮಾಡುವಾಗ ಅದು ಸ್ಫೋಟಗೊಂಡಿದೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

ಗುರುವಾರ ರಾತ್ರಿ ಕೇಳಿಬಂದ ಭಾರೀ ಶಬ್ದವನ್ನು ಕೇಳಿದ ಜನರು ಭೂಕಂಪ ಸಂಭವಿಸಿದೆ ಎಂದು ಅಂದುಕೊಂಡಿದ್ದರು. ವಾಟ್ಸಪ್ ಮತ್ತು ಫೇಸ್ ಬುಕ್‌ಗಳಲ್ಲಿ ಭೂಕಂಪವಾಗಿದೆ ಎಂಬ ಸುದ್ದಿಗಳು ಇನ್ನೂ ಹರಿದಾಡುತ್ತಿವೆ.

ಡಿ. ಕೆ. ಶಿವಕುಮಾರ್ ಟ್ವೀಟ್; ಶಿವಮೊಗ್ಗದಲ್ಲಿ ನಡೆದ ಸ್ಫೋಟದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಟ್ವೀಟ್ ಮಾಡಿದ್ದಾರೆ. "ಶಿವಮೊಗ್ಗದ ಹುಣಸೋಡು ಗ್ರಾಮದಲ್ಲಿ ಲಾರಿಯಲ್ಲಿ ತುಂಬಿಟ್ಟಿದ್ದ ಜಿಲೆಟಿನ್ ಕಡ್ಡಿಗಳು ಸ್ಪೋಟಗೊಂಡು 8ಕ್ಕೂ ಅಧಿಕ ಕಾರ್ಮಿಕರು ಮೃತಪಟ್ಟಿರುವ ಸುದ್ದಿ ತಿಳಿದು ಅತೀವ ದುಃಖವಾಗಿದೆ. ಸರ್ಕಾರವು ಘಟನೆಯ ಕುರಿತು ಕೂಲಂಕುಶ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಘೋಷಿಸಬೇಕೆಂದು ಆಗ್ರಹಿಸುತ್ತೇನೆ" ಎಂದು ಹೇಳಿದ್ದಾರೆ.

English summary
Gelatin sticks blast took place at a railway crusher site in Shivamogga. District in-charge minister K. S. Eshwarappa said that this had never happened before in Shivamogga. We are witnessing this for the first time here. Experts are coming from Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X