ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ-ಬೆಂಗಳೂರು ಪ್ಯಾಸೆಂಜರ್ ರೈಲು ವೇಳಾಪಟ್ಟಿ ಬದಲು

|
Google Oneindia Kannada News

ಶಿವಮೊಗ್ಗ, ಅಕ್ಟೋಬರ್ 17 : ಬೆಂಗಳೂರು- ಶಿವಮೊಗ್ಗ ಪ್ಯಾಸೆಂಜರ್ ರೈಲಿನ ವೇಳಾಪಟ್ಟಿ ಬದಲಾವಣೆಯಾಗಿದೆ. ರೈಲು ಬೆಂಗಳೂರು ಮತ್ತು ಶಿವಮೊಗ್ಗದಿಂದ ಹೊರಡುವ ರೈಲಿನ ಸಮಯವನ್ನು ಪರಿಷ್ಕರಣೆ ಮಾಡಲಾಗಿದೆ.

ನೈಋತ್ಯ ರೈಲ್ವೆ ಈ ಕುರಿತು ಗುರುವಾರ ಆದೇಶ ಹೊರಡಿಸಿದೆ. ಅಕ್ಟೋಬರ್ 18ರಿಂದ ನೂತನ ವೇಳಾಪಟ್ಟಿ ಜಾರಿಗೆ ಬರಲಿದೆ. ರೈಲು ಬೆಂಗಳೂರು ಮತ್ತು ಶಿವಮೊಗ್ಗದಿಂದ ಹೊರಡುವ ಸಮಯ ಪರಿಷ್ಕರಣೆಯಾದ ಕಾರಣ ಎಲ್ಲಾ ನಿಲ್ದಾಣಗಳಿಗೆ ರೈಲು ತಲುಪುವ ಸಮಯದಲ್ಲಿ ಬದಲಾವಣೆಯಾಗಲಿದೆ.

ಶಿವಮೊಗ್ಗ-ಬೆಂಗಳೂರು ಶತಾಬ್ದಿ ರೈಲು ಸಮಯ ಪರಿಷ್ಕರಣೆ ಶಿವಮೊಗ್ಗ-ಬೆಂಗಳೂರು ಶತಾಬ್ದಿ ರೈಲು ಸಮಯ ಪರಿಷ್ಕರಣೆ

Shivamogga Bengaluru Passenger Train Timings Changed

ಶಿವಮೊಗ್ಗ-ಬೆಂಗಳೂರು ಪ್ಯಾಸೆಂಜರ್ ರೈಲಿನಲ್ಲಿ 9 ಕೋಚ್‌ಗಳಿವೆ. ಇವುಗಳಲ್ಲಿ 7 ಸಾಮಾನ್ಯ ಕೋಚ್, ಎರಡು ಸೆಕೆಂಡ್ ಕ್ಲಾಸ್‌ ಬೋಗಿಗಳು ಇರುತ್ತವೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ದೀಪಾವಳಿ; ಮೈಸೂರು-ವಿಜಯಪುರ ನಡುವೆ ವಿಶೇಷ ರೈಲು ದೀಪಾವಳಿ; ಮೈಸೂರು-ವಿಜಯಪುರ ನಡುವೆ ವಿಶೇಷ ರೈಲು

ವೇಳಾಪಟ್ಟಿ : ರೈಲು ಸಂಖ್ಯೆ 56917 ಬೆಂಗಳೂರು-ಶಿವಮೊಗ್ಗ ಪ್ಯಾಸೆಂಜರ್ ರೈಲು ಬೆಂಗಳೂರಿನ ಮೆಜೆಸ್ಟಿಕ್‌ನಿಂದ ಬೆಳಗ್ಗೆ 6.30ರ ಬದಲಾಗಿ ಬೆಳಗ್ಗೆ 5.30ಕ್ಕೆ ಹೊರಡಲಿದೆ. ಬೆಳಗ್ಗೆ 11 ಗಂಟೆಗೆ ಶಿವಮೊಗ್ಗ ನಗರವನ್ನು ತಲುಪಲಿದೆ.

ಹರಿಹರ-ಕೊಟ್ಟೂರು ರೈಲು ನಿಲ್ದಾಣ, ದರ, ವೇಳಾಪಟ್ಟಿಹರಿಹರ-ಕೊಟ್ಟೂರು ರೈಲು ನಿಲ್ದಾಣ, ದರ, ವೇಳಾಪಟ್ಟಿ

ರೈಲು ಸಂಖ್ಯೆ 56918 ರೈಲು ಶಿವಮೊಗ್ಗ- ಬೆಂಗಳೂರು ರೈಲು ಮಧ್ಯಾಹ್ನ 2 ಗಂಟೆಗೆ ಬದಲಾಗಿ ಮಧ್ಯಾಹ್ನ 12.30ಕ್ಕೆ ಹೊರಡಲಿದೆ ಎಂದು ಪ್ರಕಟಣೆ ಹೇಳಿದೆ. ಬೆಂಗಳೂರಿನ ಮೆಜೆಸ್ಟಿಕ್ ನಿಲ್ದಾಣವನ್ನು ರಾತ್ರಿ 7.30ಕ್ಕೆ ತಲುಪಲಿದೆ.

ಮೆಜೆಸ್ಟಿಕ್-ಶಿವಮೊಗ್ಗ ಮಾರ್ಗ : ಮೆಜೆಸ್ಟಿಕ್‌ನಿಂದ 5.30ಕ್ಕೆ ಹೊರಡುವ ರೈಲು 5.35ಕ್ಕೆ ಮಲ್ಲೇಶ್ವರ, 5.40ಕ್ಕೆ ಯಶವಂತಪುರ, 5.49ಕ್ಕೆ ಚಿಕ್ಕಬಣಾವರ, 6.04ಕ್ಕೆ ದೊಡ್ಡಬೆಲೆ, 6.16ಕ್ಕೆ ನಿಡುವಂದ, 6.29ಕ್ಕೆ ಕ್ಯಾತಸಂದ್ರ, 6.38 ತುಮಕೂರು, 7.04ಕ್ಕೆ ಗುಬ್ಬಿ, 7.45ಕ್ಕೆ ಅಮ್ಮಸಂದ್ರ, 7.52ಕ್ಕೆ ಬಾಣಸಂದ್ರ, 7.57ಕ್ಕೆ ಅರಳಗುಪ್ಪೆ, 8.20ಕ್ಕೆ ತಿಪಟೂರು, 8.35ಕ್ಕೆ ಹೊನ್ನವಳ್ಳಿ ರಸ್ತೆ, 8.55ಕ್ಕೆ ಅರಸೀಕೆರೆ, 9.16ಕ್ಕೆ ಬಾಣಾವರ, 9.27ಕ್ಕೆ ದೇವನೂರು, 9.47ಕ್ಕೆ ಕಡೂರು, 9.58ಕ್ಕೆ ಬೀರೂರು, 10.25ಕ್ಕೆ ತರೀಕೆರೆ, 10.43ಕ್ಕೆ ಭದ್ರಾವತಿ ಮೂಲಕ 11 ಗಂಟೆಗೆ ಶಿವಮೊಗ್ಗ ತಲುಪಲಿದೆ.

ಶಿವಮೊಗ್ಗ-ಬೆಂಗಳೂರು ಮಾರ್ಗ : ಶಿವಮೊಗ್ಗದಿಂದ 12.34ಕ್ಕೆ ಹೊರಡುವ ರೈಲು ಮೆಜೆಸ್ಟಿಕ್‌ಗೆ 7.30ಕ್ಕೆ ತಲುಪಲಿದೆ. ಭದ್ರಾವತಿಗೆ 12.48ಕ್ಕೆ, ತರೀಕೆರೆಗೆ 1.10, ಬೀರೂರು 1.48, ಕಡೂರು 2 ಗಂಟೆ, ದೇವನೂರು 2.10, ಬಾಣವಾರ 2.22, ಅರಸೀಕೆರೆ 2.40, ಹೊನ್ನವಳ್ಳಿ ರಸ್ತೆ 3.01, ತಿಪಟೂರು 3.15, ಅರಳಗುಪ್ಪೆ 3.29, ಬಾಣಸಂದ್ರ 3.34, ಅಮ್ಮಸಂದ್ರ 3.49, ಗುಬ್ಬಿ 4.40, ತುಮಕೂರು 5.05, ಕ್ಯಾತಸಂದ್ರ 5.26, ನಿಡುವಂದ 5.47, ದೊಡ್ಡಬೆಲೆ 5.59, ಚಿಕ್ಕಬಣಾವರ 6.19, ಯಶವಂತಪುರ 6.40, ಮಲ್ಲೇಶ್ವರ 6.52ಕ್ಕೆ ತಲುಪಲಿದೆ.

English summary
Shivamogga-Bengaluru passenger train timings changed. New schedule will come to effect from October 18, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X