ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ-ಬೆಂಗಳೂರು ಶತಾಬ್ದಿ ರೈಲು 6 ದಿನಕ್ಕೆ ವಿಸ್ತರಣೆ

|
Google Oneindia Kannada News

ಶಿವಮೊಗ್ಗ, ಮಾರ್ಚ್ 05 : ಶಿವಮೊಗ್ಗ-ಬೆಂಗಳೂರು ಜನ ಶತಾಬ್ದಿ ರೈಲನ್ನು 6 ದಿನಗಳಿಗೆ ವಿಸ್ತರಣೆ ಮಾಡಲಾಗಿದೆ. ಪ್ರಸ್ತುತ ವಾರದಲ್ಲಿ ನಾಲ್ಕು ದಿನಗಳ ಕಾಲ ರೈಲು ಉಭಯ ನಗರಗಳ ನಡುವೆ ಸಂಚಾರ ನಡೆಸುತ್ತಿದೆ.

ರೈಲ್ವೆ ಇಲಾಖೆ ಶಿವಮೊಗ್ಗ-ಬೆಂಗಳೂರು ಜನ ಶತಾಬ್ದಿ ರೈಲನ್ನು 6 ದಿನಗಳಿಗೆ ವಿಸ್ತರಣೆ ಮಾಡಲು ಒಪ್ಪಿಗೆ ಕೊಟ್ಟಿದೆ. ಮಾರ್ಚ್ 7,2019 ರಿಂದ ರೈಲು ಮಂಗಳವಾರ ಹೊರತುಪಡಿಸಿ ಉಳಿದ ದಿನ ಸಂಚಾರ ನಡೆಸಲಿದೆ.

ಶಿವಮೊಗ್ಗ-ಬೆಂಗಳೂರು ಜನ ಶತಾಬ್ದಿ ರೈಲಿನ ವೇಳಾಪಟ್ಟಿಶಿವಮೊಗ್ಗ-ಬೆಂಗಳೂರು ಜನ ಶತಾಬ್ದಿ ರೈಲಿನ ವೇಳಾಪಟ್ಟಿ

ಫೆ.3ರಂದು ಶಿವಮೊಗ್ಗ-ಬೆಂಗಳೂರು ನಡುವೆ ಜನ ಶತಾಬ್ದಿ ರೈಲು ಸಂಚಾರವನ್ನು ಆರಂಭಿಸಲಾಗಿತ್ತು. ಮೊದಲು ವಾರದ ಮೂರು ದಿನ ರೈಲು ಸಂಚಾರ ನಡೆಸಲಿದೆ ಎಂದು ಹೇಳಲಾಗಿತ್ತು, ಬಳಿಕ ಅದನ್ನು ನಾಲ್ಕು ದಿನಗಳಿಗೆ ವಿಸ್ತರಣೆ ಮಾಡಲಾಗಿತ್ತು.

ಶಿವಮೊಗ್ಗ-ಬೆಂಗಳೂರು ಜನ ಶತಾಬ್ದಿ ರೈಲು ಸಂಚಾರ ಆರಂಭಶಿವಮೊಗ್ಗ-ಬೆಂಗಳೂರು ಜನ ಶತಾಬ್ದಿ ರೈಲು ಸಂಚಾರ ಆರಂಭ

Shivamogga-Bengaluru Janshatabdi train extended for 6 days

ಶಿವಮೊಗ್ಗ ಟೌನ್‌ ನಿಲ್ದಾಣದಿಂದ ಹೊರಡುವ ರೈಲು ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದ ತನಕ ಸಂಚಾರ ನಡೆಸಲಿದೆ. 14 ಬೋಗಿಯ ರೈಲಿನಲ್ಲಿ 7 ಎಸಿ ಕೋಚ್‌ಗಳಿವೆ.

ವೇಳಾಪಟ್ಟಿ : ಬೆಳಗ್ಗೆ 5.15ಕ್ಕೆ ಶಿವಮೊಗ್ಗದಿಂದ ಹೊರಡುವ ರೈಲು 10.10ಕ್ಕೆ ಯಶವಂತಪುರ ತಲುಪಲಿದೆ. ಯಶವಂತಪುರದಿಂದ ಸಂಜೆ 5.30ಕ್ಕೆ ಹೊರಡುವ ರೈಲು ರಾತ್ರಿ 10.25ಕ್ಕೆ ಶಿವಮೊಗ್ಗಕ್ಕೆ ತಲುಪಲಿದೆ. ಭದ್ರಾವತಿ, ಕಡೂರು ಮತ್ತು ತುಮಕೂರಿನಲ್ಲಿ ನಿಲುಗಡೆಗೊಳ್ಳಲಿದೆ.

English summary
Indian railways extended the Shivamogga-Bengaluru Janshatabdi train for 6 days expect Tuesday. New schedule will come to effect from March 7, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X