ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ-ಬೆಂಗಳೂರು ನಡುವೆ ಜನ ಶತಾಬ್ದಿ ರೈಲು ಸಂಚಾರ ಫೆ.3ರಿಂದ ಆರಂಭ

|
Google Oneindia Kannada News

ಶಿವಮೊಗ್ಗ, ಫೆಬ್ರವರಿ 2: ಬಹುನಿರೀಕ್ಷೆಯ ಜನ ಶತಾಬ್ದಿ ರೈಲು ಸಂಚಾರ ಶಿವಮೊಗ್ಗ ಮತ್ತು ಬೆಂಗಳೂರು ನಡುವೆ ನಾಳೆಯಿಂದ (ಫೆ. 3) ಆರಂಭವಾಗಲಿದೆ.

ವಾರದಲ್ಲಿ ನಾಲ್ಕು ದಿನ ಸಂಚರಿಸುವ ರೈಲು, ಶಿವಮೊಗ್ಗ ಟೌನ್‌ನಿಂದ ಯಶವಂತಪುರ ರೈಲು ನಿಲ್ದಾಣದವರೆಗೆ ಸಂಪರ್ಕ ಕಲ್ಪಿಸಲಿದೆ.

ಶಿವಮೊಗ್ಗ-ಬೆಂಗಳೂರು ಜನ ಶತಾಬ್ದಿ ರೈಲಿನ ವೇಳಾಪಟ್ಟಿ, ನಿಲ್ದಾಣಗಳುಶಿವಮೊಗ್ಗ-ಬೆಂಗಳೂರು ಜನ ಶತಾಬ್ದಿ ರೈಲಿನ ವೇಳಾಪಟ್ಟಿ, ನಿಲ್ದಾಣಗಳು

ಭಾನುವಾರ ಸಂಜೆ 6 ಗಂಟೆಗೆ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಜನಶತಾಬ್ದಿ ಓಡಾಟಕ್ಕೆ ಹಸಿರು ನಿಶಾನೆ ತೋರಿಸಲಿದ್ದಾರೆ. ಸಂಜೆ ಶಿವಮೊಗ್ಗದಿಂದ ಬೆಂಗಳೂರಿನ ಯಶವಂಪುರಕ್ಕೆ ತೆರಳಲಿರುವ ರೈಲು, ಸೋಮವಾರದಿಂದ ವಾರದಲ್ಲಿ ನಾಲ್ಕು ದಿನ ಸಂಚರಿಸಲಿದೆ.

ಶಿವಮೊಗ್ಗ ಮತ್ತು ಬೆಂಗಳೂರು ನಡುವೆ ಓಡಾಡುವ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದು, ಈಗಿರುವ ರೈಲು ಸಂಪರ್ಕ ಸಾಲುತ್ತಿರಲಿಲ್ಲ. ಹೀಗಾಗಿ ಪ್ರಯಾಣಿಕರ ದಟ್ಟಣೆಯನ್ನು ತಗ್ಗಿಸಲು, ಅವರಿಗೆ ಅನುಕೂಲಕರವಾದ ಸಮಯದಲ್ಲಿ ವಾರದಲ್ಲಿ ನಾಲ್ಕು ದಿನ ಜನಶತಾಬ್ದಿ ರೈಲು ಸಂಪರ್ಕ ಕಲ್ಪಿಸಲಾಗಿದೆ.

ಮೂರು ದಿನದಿಂದ ವಿಸ್ತರಣೆ

ಮೂರು ದಿನದಿಂದ ವಿಸ್ತರಣೆ

ನೈಋತ್ಯ ರೈಲ್ವೆ ಇಲಾಖೆಯು ಈ ಮೊದಲು ಹೊರಡಿಸಿದ್ದ ಪ್ರಕಟಣೆಯಲ್ಲಿ ಯಶವಂತಪುರ-ಶಿವಮೊಗ್ಗ ಜನಶತಾಬ್ದಿ ರೈಲು ವಾರದಲ್ಲಿ ಮೂರು ದಿನ ಸಂಚರಿಸಲಿದೆ ಎಂದು ತಿಳಿಸಿತ್ತು. ಬಳಿಕ ಅದನ್ನು ಪರಿಷ್ಕರಿಸಿ ವಾರದಲ್ಲಿ ನಾಲ್ಕು ದಿನಗಳವರೆಗೆ ವಿಸ್ತರಿಸಲಾಗಿತ್ತು. ಸೋಮವಾರ, ಬುಧವಾರ ಮತ್ತು ಶುಕ್ರವಾರ ಸಂಚಾರ ನಡೆಸುವ ರೈಲು, ಶನಿವಾರ ಬೆಳಿಗ್ಗೆ ಶಿವಮೊಗ್ಗದಿಂದ ತೆರಳಲಿದೆ. ಭಾನುವಾರ ರಾತ್ರಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೊರಡಲಿದೆ.

ಬೆಂಗಳೂರು ನಗರದ 2 ರೈಲ್ವೆ ಯೋಜನೆಗೆ ಇಲಾಖೆಯ ಒಪ್ಪಿಗೆ ಬೆಂಗಳೂರು ನಗರದ 2 ರೈಲ್ವೆ ಯೋಜನೆಗೆ ಇಲಾಖೆಯ ಒಪ್ಪಿಗೆ

ರೈಲು ಹೊರಡುವ ಸಮಯ

ರೈಲು ಹೊರಡುವ ಸಮಯ

ಜನಶತಾಬ್ದಿ ರೈಲು ಶಿವಮೊಗ್ಗದಿಂದ ಬೆಳಿಗ್ಗೆ 5.15ಕ್ಕೆ ಹೊರಟು ಯಶವಂತಪುರಕ್ಕೆ ಬೆಳಿಗ್ಗೆ 10.10ಕ್ಕೆ ತಲುಪಲಿದೆ. ಯಶವಂತಪುರದಿಂದ ಸಂಜೆ 5.30ಕ್ಕೆ ಹೊರಟು ರಾತ್ರಿ 10.25ಕ್ಕೆ ತಲುಪಲಿದೆ. ಶನಿವಾರ ಸಹ ಬೆಳಿಗ್ಗೆ 5.15ಕ್ಕೆ ಶಿವಮೊಗ್ಗದಿಂದ ಹೊರಡಲಿದ್ದು, ಭಾನುವಾರ ಸಂಜೆ 5.30ಕ್ಕೆ ಹೊರಟು ರಾತ್ರಿ ಶಿವಮೊಗ್ಗ ತಲುಪಲಿದೆ.

ಸೊಲ್ಲಾಪುರ-ಯಶವಂತಪುರ ರೈಲು ಹಾಸನದ ತನಕ ವಿಸ್ತರಣೆ ಸೊಲ್ಲಾಪುರ-ಯಶವಂತಪುರ ರೈಲು ಹಾಸನದ ತನಕ ವಿಸ್ತರಣೆ

ಎಲ್ಲ ಕಡೆಯೂ ನಿಲುಗಡೆಯಿಲ್ಲ...

ಎಲ್ಲ ಕಡೆಯೂ ನಿಲುಗಡೆಯಿಲ್ಲ...

ಜನಶತಾಬ್ದಿ ರೈಲು ಪ್ರಮುಖ ತಾಲ್ಲೂಕು ಕೇಂದ್ರಗಳಲ್ಲಿ ಹಾದುಹೋದರೂ ಎಲ್ಲ ನಿಲ್ದಾಣಗಳಲ್ಲಿಯೂ ನಿಲುಗಡೆ ಇರುವುದಿಲ್ಲ. ಯಶವಂತಪುರದಿಂದ ಹೊರಟ ಬಳಿಕ ರೈಲು ತುಮಕೂರು, ಕಡೂರು ಮತ್ತು ಭದ್ರಾವತಿಗಳಲ್ಲಿ ಮಾತ್ರ ಪ್ರಯಾಣಿಕರು ಹತ್ತಲು ಹಾಗೂ ಇಳಿಯಲು ನಿಲುಗಡೆ ನೀಡಲಿದೆ. ಶಿವಮೊಗ್ಗದಿಂದ ಬರುವಾಗಲೂ ಈ ಮೂರು ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆ ಇದೆ. ಈ ಬಗ್ಗೆ ಈ ಭಾಗದ ಪ್ರಯಾಣಿಕರಲ್ಲಿ ಅಸಮಾಧಾನ ವ್ಯಕ್ತವಾಗಿದೆ. ತಿಪಟೂರು, ಅರಸೀಕೆರೆ, ತರೀಕೆರೆ ಭಾಗದ ಜನರೂ ಹೆಚ್ಚಾಗಿ ಓಡಾಡುತ್ತಿರುತ್ತಾರೆ. ಅವರಿಗೂ ಅನುಕೂಲವಾಗುವಂತೆ ನಿಲುಗಡೆ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ಬೆಂಗಳೂರು-ಮೈಸೂರು ನಡುವೆ ರಾತ್ರಿ ರೈಲು ಸಂಚಾರಕ್ಕೆ ಬೇಡಿಕೆ ಬೆಂಗಳೂರು-ಮೈಸೂರು ನಡುವೆ ರಾತ್ರಿ ರೈಲು ಸಂಚಾರಕ್ಕೆ ಬೇಡಿಕೆ

ಮಲೆನಾಡು-ಕರಾವಳಿಯಲ್ಲಿ ರೈಲು

ಮಲೆನಾಡು-ಕರಾವಳಿಯಲ್ಲಿ ರೈಲು

ಮಂಗಳೂರು, ಶೃಂಗೇರಿ, ತೀರ್ಥಹಳ್ಳಿ, ಶಿವಮೊಗ್ಗ ನಡುವೆ ರೈಲು ಸಂಚಾರ ನಡೆಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಈಗಾಗಲೇ ಈ ಮಾರ್ಗಗಳ ಸರ್ವೆ ಕಾರ್ಯಕ್ಕೆ ಕೇಂದ್ರ ರೈಲ್ವೆ ಸಚಿವರ ಜತೆ ಮಾತುಕತೆ ನಡೆಸಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಇತ್ತೀಚೆಗೆ ತಿಳಿಸಿದ್ದಾರೆ. ಈ ಬಗ್ಗೆ ಕೇಂದ್ರ ಬಜೆಟ್‌ನಲ್ಲಿ ಪ್ರಸ್ತಾಪವಾಗುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದರು. ಆದರೆ, ಶುಕ್ರವಾರ ಮಂಡನೆಯಾದ ಬಜೆಟ್‌ನಲ್ಲಿ ಹೊಸ ರೈಲು ಯೋಜನೆಗಳು ಘೋಷಣೆಯಾಗಿಲ್ಲ.

English summary
New Jan Shatabdi train from Shivamogga to Bengaluru will be flagged tomorrow (Feb 3) at 6 PM by MP BY Raghavendra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X