ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ-ಬೆಂಗಳೂರು ಇಂಟರ್‌ ಸಿಟಿ ರೈಲಿನ ವೇಳಾಪಟ್ಟಿ ಬದಲು

|
Google Oneindia Kannada News

ಶಿವಮೊಗ್ಗ, ಮೇ 02 : ತಾಳಗುಪ್ಪ-ಶಿವಮೊಗ್ಗ-ಬೆಂಗಳೂರು ಇಂಟರ್‌ ಸಿಟಿ ರೈಲಿನ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದೆ. ಜೂನ್ 6, 2019ರ ತನಕ ನೂತನ ವೇಳಾಪಟ್ಟಿ ಜಾರಿಯಲ್ಲಿರುತ್ತದೆ.

ಮೇ 1ರಿಂದಲೇ ಜಾರಿಗೆ ಬರುವಂತೆ ರೈಲಿನ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದೆ. ಶಿವಮೊಗ್ಗ-ಬೆಂಗಳೂರು ರೈಲ್ವೆ ಮಾರ್ಗದ ದುರಸ್ತಿ ಹಿನ್ನಲೆಯಲ್ಲಿ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದೆ.

ಮಂಗಳೂರು - ಮೈಸೂರು ರೈಲ್ವೆ ಹಳಿ ವಿದ್ಯುದೀಕರಣಮಂಗಳೂರು - ಮೈಸೂರು ರೈಲ್ವೆ ಹಳಿ ವಿದ್ಯುದೀಕರಣ

ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು ಪ್ರತಿದಿನ ಬೆಳಗ್ಗೆ 6.40ಕ್ಕೆ ಹೊರಡುತ್ತಿತ್ತು. ನೂತನ ವೇಳಾಪಟ್ಟಿಯಂತೆ 20652 ನಂಬರ್‌ನ ರೈಲು 7.40ಕ್ಕೆ ಶಿವಮೊಗ್ಗದಿಂದ ಹೊರಡಲಿದೆ.

ಬೆಂಗಳೂರು-ಮಂಗಳೂರು ನಡುವೆ ಹೊಸ ಎಕ್ಸ್‌ಪ್ರೆಸ್ ರೈಲುಬೆಂಗಳೂರು-ಮಂಗಳೂರು ನಡುವೆ ಹೊಸ ಎಕ್ಸ್‌ಪ್ರೆಸ್ ರೈಲು

train

ತಾಳಗುಪ್ಪ-ಶಿವಮೊಗ್ಗ-ಬೆಂಗಳೂರು ಇಂಟರ್‌ ಸಿಟಿ ರೈಲಿನ ವೇಳಾಪಟ್ಟಿಯಲ್ಲಿ ಶಿವಮೊಗ್ಗದಿಂದ ರೈಲು ಹೊರಡುವ ಸಮಯವನ್ನು ಮಾತ್ರ ಬದಲಾವಣೆ ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ಹೇಳಿದೆ.

ಬೆಂಗಳೂರು-ಶಿವಮೊಗ್ಗ ಇಂಟರ್ ಸಿಟಿ ರೈಲು ತಾಳಗುಪ್ಪದ ತನಕ ವಿಸ್ತರಣೆಬೆಂಗಳೂರು-ಶಿವಮೊಗ್ಗ ಇಂಟರ್ ಸಿಟಿ ರೈಲು ತಾಳಗುಪ್ಪದ ತನಕ ವಿಸ್ತರಣೆ

ತಾಳಗುಪ್ಪದಿಂದ ರೈಲು ಹೊರಡುವ ಸಮಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಹಿಂದಿನ ಸಮಯದಂತೆಯೇ ತಾಳಗುಪ್ಪದಿಂದ ಹೊರಡುವ ರೈಲು ಶಿವಮೊಗ್ಗದಲ್ಲಿ ಬಂದು ನಿಲ್ಲಲಿದೆ. ರೈಲು ತಡವಾಗಿ ಹೊರಡುವುದರಿಂದ ಬೆಂಗಳೂರು ತಲುಪುವುದು ತಡವಾಗಲಿದೆ.

ಮೊದಲು ಇಂಟರ್‌ ಸಿಟಿ ರೈಲು ಶಿವಮೊಗ್ಗ-ಬೆಂಗಳೂರು ನಡುವೆ ಮಾತ್ರ ಸಂಚಾರ ನಡೆಸುತ್ತಿತ್ತು. ಬಳಿಕ ಜನರ ಬೇಡಿಕೆಯಂತೆ ಅದನ್ನು ಸಾಗರದ ತಾಳಗುಪ್ಪದ ತನಕ ವಿಸ್ತರಣೆ ಮಾಡಲಾಯಿತು.

English summary
Shivamogga Bengaluru Intercity Express train schedule changed from May 1, 2019. New schedule will into effect till June 6.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X