ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ: ಮಲೆನಾಡಿನಲ್ಲಿ ವಿಶಿಷ್ಟವಾದ ಪ್ರಕೃತಿ ವಂದನಾ ಕಾರ್ಯಕ್ರಮ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಸೆಪ್ಟೆಂಬರ್ 1: ಮಲೆನಾಡಿನ, ಮಳೆಕಾಡಿನ ಮರಗಳ ಸಂಖ್ಯೆ ಕ್ಷೀಣಿಸುತ್ತಿರುವ ಈ ಸಂದರ್ಭದಲ್ಲಿ ಪ್ರಕೃತಿ ಸಂಪತ್ತನ್ನು ಉಳಿಸಿ ಬೆಳೆಸುವ ವಿಶಿಷ್ಟ ಕಾರ್ಯಕ್ರಮವನ್ನು ಆಗುಂಬೆ ಹೋಬಳಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮವನ್ನು ವಿಕಾಸ ಟ್ರಸ್ಟ್ ಶಿವಮೊಗ್ಗ, ಪರ್ಯಾವರಣ ಸಂರಕ್ಷಣ ಗತಿವಿಧಿ ಘಟಕ ಆಗುಂಬೆ ಹೋಬಳಿ, ಅರಣ್ಯ ಇಲಾಖೆ, ಆಗುಂಬೆ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ಆಗುಂಬೆ ಹೋಬಳಿಯ ಮನಸ್ಸುಗಾರ್ ನಲ್ಲಿ ಪ್ರಕೃತಿ ವಂದನಾ ಕಾರ್ಯಕ್ರಮ ಆಯೋಜಿಸಿದ್ದರು.

ಚಾರ್ಮಾಡಿ ಘಾಟಿಯಲ್ಲಿ ಲಘು ವಾಹನ ಸಂಚಾರಕ್ಕೆ ಅವಕಾಶಚಾರ್ಮಾಡಿ ಘಾಟಿಯಲ್ಲಿ ಲಘು ವಾಹನ ಸಂಚಾರಕ್ಕೆ ಅವಕಾಶ

ಈ ಸಂದರ್ಭದಲ್ಲಿ ಮಾತನಾಡಿದ ವಲಯ ಅರಣ್ಯಾಧಿಕಾರಿಗಳಾದ ಉಮಾ, ಇತಿಹಾಸದ ಪುಟಗಳನ್ನು ಗಮನಿಸಿದಂತೆ ಪ್ರಕೃತಿಯು ನಾಗರಿಕತೆಯ ಆರಂಭದಿಂದಲೂ ಪ್ರತಿಯೊಂದು ವೃಕ್ಷವು ದೈವಿ ಸ್ವರೂಪವೆಂದು ಆರಾಧಿಸಿ ನಂಬಲಾಗುತ್ತದೆ ಎಂದರು.

Shivamogga: A Unique Nature Salutation Program In Malenadu

ಗಿಡ, ಮರ, ಜಲ, ಭೂಮಿಯ ಸಂರಕ್ಷಣೆಗಾಗಿ, ಪರಿಸರ ಸಂರಕ್ಷಣೆ, ಪ್ರಾಣಿ, ಪಕ್ಷಿಗಳ ರಕ್ಷಣೆ ಹಾಗೂ ಪ್ರಾಚೀನ ಮೌಲ್ಯವನ್ನು ಸಮಾಜಕ್ಕೆ ಸ್ಮರಿಸುವ ದಿಶೆಯಲ್ಲಿ ಈ ಚಿಂತನೆ ಮಾಡಿ ಈ ಕಾರ್ಯಕ್ರಮ ಉತ್ತಮವಾಗಿದೆ ಎಂದು ತಿಳಿಸಿದರು.

ನೈಸರ್ಗಿಕ ಕಾಡನ್ನು ರಕ್ಷಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಹತ್ವದ ಮಹತ್ವದ ಬಗ್ಗೆ ತಿಳಿಸಿದರು. ಇದಕ್ಕೂ ಮೊದಲು ಗಿಡಗಳಿಗೆ ಪವಿತ್ರವಾದ ಗಂಗಾಜಲ ಪ್ರೋಕ್ಷಣೆ ಮಾಡಿ, ಅರಿಶಿನ ಹಚ್ಚಿ, ಪುಷ್ಟ ನಮನ ಸಲ್ಲಿಸಲಾಯಿತು.

Shivamogga: A Unique Nature Salutation Program In Malenadu

ಮುಖ್ಯ ಅತಿಥಿಗಳಾಗಿ ವಿಕಾಸ್ ಟ್ರಸ್ಟ್ ನ ಪಾಂಡುರಂಗ ಪರಾಂಡೆ, ಹಣ್ಣಿನ ಮರಗಳ ವಿನಾಶದಿಂದ ಪ್ರಾಣಿ, ಪಕ್ಷಿಗಳು ರೈತರ ಹೊಲ, ಗದ್ದೆಗಳಿಗೆ ದಾಳಿ ಇಡುತ್ತಿರುವ ಬಗ್ಗೆ ಮನವರಿಕೆಯನ್ನು ಮಾಡಿದರು.‌ ಹೊನ್ನೇತಾಳು ಸಹಕಾರ ಸಂಘದ ಅಧ್ಯಕ್ಷರಾದ ರವೀಶ್ ಅರಣ್ಯ ಇಲಾಖೆ ಹಾಗೂ ರೈತರ ನಡುವೆ ಹೆಚ್ಚಿನ ವಿಶ್ವಾಸ ಬೆಳೆಯಬೇಕು ಎಂದು ತಿಳಿಸಿದರು.

ಹಣ್ಣಿನಮರ, ನೈಸರ್ಗಿಕ ಅರಣ್ಯ ಬೆಳಸಿದ ಟೀಕಪ್ಪ ಗೌಡ ಹಾಗೂ ಅವರ ಧರ್ಮಪತ್ನಿ ಹೇಮಾವತಿ, ಹಾಗೂ ಉಮಾರವರನ್ನು ಸನ್ಮಾನಿಸಲಾಯಿತು. ನಿತ್ಯಾನಂದ ಅಣ್ಣುಗೋಡು, ಅಂಬರೀಶ್ ಮಳಲಿ, ನೇತ್ರಾವತಿ ಚಂದ್ರಹಾಸ್ ಹಾಗೂ ಇತರೆ ಪ್ರಮುಖರು, ಬೆಟ್ಲಂಗಿ ಹಾಗೂ ಮನಸ್ಸುಗಾರ್ ಗ್ರಾಮಸ್ಥರು ಇದ್ದರು.

English summary
A unique program to save and nurture the wealth of nature was held in Agumbe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X