• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಉಗ್ರ ಸಂಘಟನೆ ಜೊತೆ ನಂಟು, ಶಿವಮೊಗ್ಗದಲ್ಲಿ ಇಬ್ಬರು ಶಂಕಿತರ ಅರೆಸ್ಟ್

|
Google Oneindia Kannada News

ಶಿವಮೊಗ್ಗ, ಸೆಪ್ಟೆಂಬರ್ 20: ನಿಷೇಧಿತ ಉಗ್ರ ಸಂಘಟನೆಯ ನಂಟು ಹೊಂದಿರುವ ಆರೋಪದಲ್ಲಿ ಇಬ್ಬರು ಶಂಕಿತರ ಶಿವಮೊಗ್ಗ ಪೊಲೀಸ್ ವಿಶೇಷ ತಂಡವು ಕಾರ್ಯಾಚರಣೆ ಇಬ್ಬರನ್ನು ಬಂಧಿಸಿದೆ.

ತೀರ್ಥಹಳ್ಳಿ ತಾಲೂಕು ಸೊಪ್ಪುಗುಡ್ಡೆಯ ಶಾರೀಕ್‌ನ ಸಹಚರರಾದ ಮಂಗಳೂರಿನ ಮಾಜ್ ಮುನೀರ್ ಅಹಮದ್ (22) ಮತ್ತು ಶಿವಮೊಗ್ಗ ಸಿದ್ದೇಶ್ವರ ನಗರದ ಸಯ್ಯದ್ ಯಾಸೀನ್ ಅಲಿಯಾಸ್ ಬೈಲ್ (21) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಮಾಜ್‌ ಮುನೀರ್‌ ಮಂಗಳೂರಿನಲ್ಲಿ ಎಂಟೆಕ್‌ ಮಾಡುತ್ತಿದ್ದ ಎನ್ನಲಾಗಿದ್ದು, ಲಾಕ್‌ಡೌನ್‌ ವೇಳೆ ಫುಡ್ ಡಿಲಿವೆರಿ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ತೀರ್ಥಹಳ್ಳಿ; ಸ್ಮಶಾನಕ್ಕೆ ರಸ್ತೆ ಇಲ್ಲ, ಮಳೆಯಲ್ಲೇ ಶವದ ಸಂಸ್ಕಾರ ತೀರ್ಥಹಳ್ಳಿ; ಸ್ಮಶಾನಕ್ಕೆ ರಸ್ತೆ ಇಲ್ಲ, ಮಳೆಯಲ್ಲೇ ಶವದ ಸಂಸ್ಕಾರ

ಸ್ವಾತಂತ್ರ್ಯ ದಿನಾಚರಣೆ ದಿನ ಪ್ರೇಮಸಿಂಗ್ ಎಂಬಾತನಿಗೆ ಚಾಕು ಇರಿತ ಪ್ರಕರಣದ ಹಿನ್ನೆಲೆಯಲ್ಲಿ ಜಬೀವುಲ್ಲಾ ಎಂಬಾತನನ್ನು ಬಂಧಿಸಲಾಗಿತ್ತು. ಈ ವೇಳೆ ಮೊಬೈಲ್ ಪರಿಶೀಲನೆ ನಡೆಸಿದಾಗ ಉಗ್ರ ಸಂಘಟನೆಗಳ ಜತೆ ನಿರಂತರ ಸಂಪರ್ಕ ಹೊಂದಿರುವ ಮಾಹಿತಿ ಹೊರಬಿದ್ದಿದೆ. ಜಬೀವುಲ್ಲಾ ಮಾಹಿತಿ ಆಧಾರದ ಮೇಲೆ ಯಾಸಿನ್‌ ಎಂಬಾತನನ್ನು ಈ ಹಿಂದಿಯೇ ಬಂಧಿಸಲಾಗಿತ್ತು.

ಇನ್ನು ಈ ಆರೋಪಿ ಮಹಮ್ಮದ್ ಮುನಿರ್ ಅಹ್ಮದ್, ಮಂಗಳೂರು ನಗರದ ಬಿಜೈ ಮತ್ತು ಕೋರ್ಟ್ ರಸ್ತೆಯಲ್ಲಿ ಲಷ್ಕರ್ ಇ ತೋಯ್ಬಾ ಉಘ್ರ ಸಂಘಟನೆಗೆ ಜಿಂದಾಬಾದ್ ಎಂದು ಬರೆದಿದ್ದ ಪ್ರಕರಣದಲ್ಲಿ ಬಂಧಿತರಾಗಿದ್ದರು.

ನಿಷೇಧಿತ ಸಂಘಟನೆ ನಂಟು

ನಿಷೇಧಿತ ಭಯೋತ್ಪಾದಕ ಸಂಘಟನೆ ಜೊತೆಗೆ ನಂಟು ಹೊಂದಿರುವ ಆರೋಪದಲ್ಲಿ ಈಗಾಗಲೇ ಯಾಸಿನ್ ಎಂಬಾತನನ್ನು ಬಂಧಿಸಲಾಗಿದೆ. ಇದೀಗ ಮಾಜ್‌ ಮುನೀರ್‌ನನ್ನು ಬಂಧಿಸಲಾಗಿದೆ. ಸೆಪ್ಟೆಂಬರ್‌ 19ರಂದು ಇವರನ್ನು ಬಂಧಿಸಿ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಬಂಧಿತರ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಮತ್ತೊಬ್ಬ ಆರೋಪಿ ಶಾರೀಕ್‌ಗಾಗಿ ಹುಡುಕಾಟ ನಡೆಯುತ್ತಿದೆ.

ನ್ಯಾಯಾಲಯಕ್ಕೆ ಹಾಜರು

ಬಂಧಿತರನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸೆಪ್ಟೆಂಬರ್ 29ರವರೆಗೆ ಶಂಕಿತರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಪೊಲೀಸರು ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Shivamogga : 2 people arrested for suspected links with ISIS

ಐಸಿಸ್‌ ಉಗ್ರ ಸಂಘಟನೆ ಜೊತೆ ನಂಟು ಹೊಂದಿದ್ದ ಆರೋಪದ ಮೇಲೆ ಇಬ್ಬರ ಬಂಧನವಾಗಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಮತ್ತು ಕರಾವಳಿಯಲ್ಲಿ ಒಬ್ಬೊಬ್ಬನನ್ನು ಬಂಧಿಸಲಾಗಿದೆ. ತೀರ್ಥಹಳ್ಳಿ ಭಾಗದಲ್ಲಿ ಇಂಥವರು ಇನ್ನೂ ಇದ್ದಾರೆನ್ನುವುದು ಆತಂಕದ ವಿಚಾರವಾಗಿದೆ. ಇವರ ಹಿಂದೆ ಯಾರಿದ್ದಾರೆ ಎನ್ನುವುದರ ಬಗ್ಗೆ ಸಮಗ್ರ ತನಿಖೆಯಾಗಬೇಕಿದೆ. ಒಬ್ಬ ಆರೋಪಿ ಈ ಹಿಂದೆಯೂ ಉಗ್ರ ಸಂಘಟನೆ ಜತೆ ನಂಟು ಹೊಂದಿದ್ದ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

English summary
Two suspected terrorist in touch with ISIS held in Shivamogga. court on Tuesday remanded them in police custody till September 29.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X