ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗː ಮಾಚೇನಹಳ್ಳಿ ಎಸ್‌ಬಿಎಂ ಬ್ಯಾಂಕ್‌ ದರೋಡೆ

|
Google Oneindia Kannada News

ಶಿವಮೊಗ್ಗ, ಸೆ. 22 : ಭಾನುವಾರ ರಾತ್ರಿ ನಡೆದಿರುವ ಬ್ಯಾಂಕ್‌ ದರೋಡೆಗೆ ಶಿವಮೊಗ್ಗ ಮತ್ತು ಭದ್ರಾವತಿ ನಗರಗಳು ಬೆಚ್ಚಿಬಿದ್ದಿವೆ.

ಶಿವಮೊಗ್ಗ ಹೊರವಲಯದ ಮಾಚೇನಹಳ್ಳಿ ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು ಶಾಖೆಗೆ ಭಾನುವಾರ ರಾತ್ರಿ ನುಗ್ಗಿದ ದರೋಡೆಕೋರರು 36.6 ಲಕ್ಷ ರೂ. ನಗದು ಮತ್ತು 6.5 ಕೆಜಿ ಚಿನ್ನ ದೋಚಿದ್ದಾರೆ.(ಕಣ್ಕಟ್ಟು ವಿದ್ಯೆ; ಬ್ಯಾಂಕ್ ನಲ್ಲಿ ಮೂರು ಲಕ್ಷ ಮಂಗಮಾಯ)

ಶಿವಮೊಗ್ಗ ಮತ್ತು ಭದ್ರಾವತಿ ನಡುವಿನ ಮಾಚೇನಹಳ್ಳಿ ಬ್ಯಾಂಕ್‌ ನಲ್ಲಿ ಕಳ್ಳತನ ನಡೆದಿದೆ. ಬ್ಯಾಂಕ್‌ ಗೋಡೆಗೆ ಕನ್ನ ಕೊರೆದು ಒಳಪ್ರವೇಶಿಸಿದ ಕಳ್ಳರು ಸಿಸಿ ಟಿವಿ ಕೇಬಲ್‌ ಕಿತ್ತು ಹಾಕಿದ್ದಾರೆ. ನಂತರ ಬ್ಯಾಂಕ್‌ ಲಾಕರ್‌ನಲ್ಲಿದ್ದ ಎಲ್ಲ ವಸ್ತುಗಳನ್ನು ದರೋಡೆ ಮಾಡಿ ಪರಾರಿಯಾಗಿದ್ದಾರೆ.(ಬೆಂಗಳೂರು ಗಾಂಧಿನಗರದಲ್ಲಿ ಭದ್ರಾವತಿ ವಂಚಕಿಯರು)

ಬ್ಯಾಂಕ್‌ ಒಳಗೆ ನುಗ್ಗಿದ ದರೋಡೆಕೋರರು ಲಾಕರ್‌ಗಳನ್ನು ಕನ್ನ ಕೊರೆದ ಜಾಗದ ಮೂಲಕವೇ ಹೊರಗೆ ಎಳೆದು ತಂದಿದ್ದಾರೆ. ನಂತರ ಎಲ್ಲ ಲಾಕರ್‌ಗಳ ಬೀಗ ಮುರಿದು ಚಿನ್ನಾಭರಣ ಮತ್ತು ನಗದು ದೋಚಿದ್ದಾರೆ.

ಸಿಸಿಟಿವಿ ಸಂಪರ್ಕ ಸಂಪೂರ್ಣ ಧ್ವಂಸ ಮಾಡಿರುವುದರಿಂದ ಎಷ್ಟು ಜನರ ತಂಡ ಕೃತ್ಯ ಎಸಗಿದೆ ಎಂಬುದು ಗೊತ್ತಾಗಿಲ್ಲ. ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳಕ್ಕೆ ಎಸ್‌ಪಿ ಕೌಶಲೇಂದ್ರ ಕುಮಾರ್‌ ಭೇಟಿ ನೀಡಿ ಪರಿಶೀಲಿಸಿದ್ದು ಗ್ರಾಹಕರು ಯಾವುದೇ ಆತಂಕ ಪಡುವ ಕೆಲಸವಿಲ್ಲ. ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಮಾಚೇನಹಳ್ಳಿ ಎಸ್‌ಬಿಎಂ ಬ್ಯಾಂಕ್‌

ಮಾಚೇನಹಳ್ಳಿ ಎಸ್‌ಬಿಎಂ ಬ್ಯಾಂಕ್‌

ಭಾನುವಾರ ರಾತ್ರಿ ದರೋಡೆಗೊಳಗಾಗಿರುವ ಮಾಚೇನಹಳ್ಳಿ ಸ್ಟೇಟ್‌ ಬ್ಯಾಂಕ್‌ ಆಫ್ ಮೈಸೂರು ಶಾಖೆ.

ಕನ್ನ ಕೊರೆದ ದರೋಡೆಕೋರರರು

ಕನ್ನ ಕೊರೆದ ದರೋಡೆಕೋರರರು

ಶಿವಮೊಗ್ಗ ಮತ್ತು ಭದ್ರಾವತಿ ನಡುವಿನ ಮಾಚೇನಹಳ್ಳಿ ಬ್ಯಾಂಕ್‌ನ ಗೋಡೆ ಕನ್ನ ಕೊರೆದ ದೃಶ್ಯ.

ಕೃತಕ ದ್ವಾರ ನಿರ್ಮಾಣ

ಕೃತಕ ದ್ವಾರ ನಿರ್ಮಾಣ

ಭಾನುವಾರ ಮಧ್ಯರಾತ್ರಿ ಮಾಚೇನಹಳ್ಳಿ ಎಸ್‌ಬಿಎಂ ಶಾಖೆ ಒಳಪ್ರವೇಶಿಸಲು ಕಳ್ಳರು ಮಾಡಿಕೊಂಡ ಕೃತಕ ದಾರಿ

ಎಸ್‌ಪಿ ಕೌಶಲೇಂದ್ರ ಕುಮಾರ್‌ ಭೇಟಿ

ಎಸ್‌ಪಿ ಕೌಶಲೇಂದ್ರ ಕುಮಾರ್‌ ಭೇಟಿ

ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ ಶಿವಮೊಗ್ಗ ಎಸ್‌ಪಿ ಕೌಶಲೇಂದ್ರ ಕುಮಾರ್‌

ಪೊಲೀಸ್‌ ಪರಿಶೀಲನೆ

ಪೊಲೀಸ್‌ ಪರಿಶೀಲನೆ

ದರೋಡೆಗೊಳಗಾಗಿರುವ ಬ್ಯಾಂಕ್‌ ಪರಿಶೀಲಿಸುತ್ತಿರುವ ಪೊಲೀಸ್‌ ಸಿಬ್ಬಂದಿ.

ಬ್ಯಾಂಕ್‌ ಎದುರು ಸೇರಿದ್ದ ಜನರು

ಬ್ಯಾಂಕ್‌ ಎದುರು ಸೇರಿದ್ದ ಜನರು

ಬ್ಯಾಂಕ್‌ ದರೋಡೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸ್ಥಳೀಯರು.

English summary
Shocking bank heist in Shimoga. Miscreants make away with Rs 36.7 lakh in cash and 6.5 kgs of gold from Machenahalli state bank of Mysore branch on Sunday late night. Very soon we catch the robberres, said Koushalendra kumar Simoga SP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X