• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಟ ಶಿವರಾಜ್ ಕುಮಾರ್ ಮೇಲೆ ಎಫ್ ಐಆರ್

By Mahesh
|

ಶಿವಮೊಗ್ಗ, ಏ.16: ಶಿವಮೊಗ್ಗ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರ ಪತಿ, ಕನ್ನಡದ ಖ್ಯಾತ ನಟ ಶಿವರಾಜ್ ಕುಮಾರ್ ವಿರುದ್ಧ ಶಿವಮೊಗ್ಗದ ವಿನೋಬನಗರ ಠಾಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿದೆ.

ಶಿವರಾಜ್ ಕುಮಾರ್ ಅವರ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಐಪಿಸಿ ಸೆಕ್ಷನ್ 143, 188, 149 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಚುನಾವಣೆ ನೀತಿ ಸಂಹಿತೆ ಪ್ರಕಾರ, ಕ್ಷೇತ್ರದ ಮತದಾರರಲ್ಲದವರು ಬುಧವಾರ ಲೋಕಸಭಾ ಕ್ಷೇತ್ರವನ್ನ ತೊರೆಯಬೇಕಾಗುತ್ತದೆ.

ಆದರೆ, ಶಿವರಾಜ್​ಕುಮಾರ್​ ಶಿವಮೊಗ್ಗ ಕ್ಷೇತ್ರದ ಮತದಾರರಲ್ಲದಿದ್ದರೂ ಪತ್ನಿ ಗೀತಾ ಜೊತೆ ಶಿವಮೊಗ್ಗದ ನವಿಲೆ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ಮಾಡಿದ್ದರು. ಚುನಾವಣಾಧಿಕಾರಿ ಮುರಳಿಧರ್​, ಮಂಜುನಾಥ್​​ ಈ ಕುರಿತು ದೂರು ನೀಡಿದ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

ಶಿವರಾಜ್ ಕುಮಾರ್ ಅವ್ಪರ ಜತೆ ಜೆಡಿಎಸ್ ಜಿಲ್ಲಾಧ್ಯಕ್ಷ ಶ್ರೀಕಾಂತ್ ಮತ್ತಿತ್ತರರು ಚುನಾವಣಾ ಪ್ರಚಾರ ನಡೆಸಿದ್ದರು. ಹೀಗಾಗಿ, ಅಭ್ಯರ್ಥಿ ಗೀತಾ, ಶಿವರಾಜ್ ಕುಮಾರ್, ಶ್ರೀಕಾಂತ್ ಇನ್ನಿತರರ ಮೇಲೆ ಸಂಚಾರಿ ದಳದ ಚುನಾವಣಾಧಿಕಾರಿ ಮುರಳೀಧರ್ ದೂರು ದಾಖಲಿಸಿಕೊಂಡರು.

ಸ್ಟಾರ್ ಪ್ರಚಾರಕರ ಪಟ್ಟಿಯಲ್ಲೂ ಶಿವರಾಜ್ ಕುಮಾರ್ ಅವರ ಹೆಸರಿರಲಿಲ್ಲ. ಆದರೆ, ಶಿವರಾಜ್ ಅವರು ಜನಪ್ರಿಯ ನಟರಾಗಿರುವುದರಿಂದ ಬುಧವಾರದಂದು ಪ್ರಚಾರ ಕಾರ್ಯದಲ್ಲಿ ತೊಡಗದಂತೆ ಚುನಾವಣಾಧಿಕಾರಿಗಳು ನಿರ್ದೇಶನ ನೀಡಿದ್ದರು. ಅದರೆ, ಕುಂಸಿ, ಕೊಮ್ಮನಾಳು ಗ್ರಾಮದಲ್ಲಿ ಮನೆ ಮನೆ ಪ್ರಚಾರ ಮಾಡಬೇಕಾಗಿದ್ದ ಶಿವರಾಜ್ ಕೊನೆಗೆ ನವಿಲೆ ಗ್ರಾಮಕ್ಕೆ ತೆರಳಿದ ಸುದ್ದಿ ತಿಳಿದ ಅಧಿಕಾರಿಗಳು ಅಲ್ಲಿಗೆ ತಲುಪಿ ಪರಿಸ್ಥಿತಿ ಅವಲೋಕಿಸಿ ದೂರು ದಾಖಲಿಸಿಕೊಂಡರು.

ಜೆಡಿಎಸ್ ಅಕ್ರಮ: ಇತ್ತೀಚೆಗೆ ಹೊಸಂಗಡಿ, ಕೆರೆಕಟ್ಟೆ ಚೆಕ್ ಪೋಸ್ಟ್ ನಲ್ಲಿ ಬೈಂದೂರು ವಿಧಾನಸಭಾ ವ್ಯಾಪ್ತಿಯ ಸ್ಟ್ಯಾಟಿಕ್ ಸರ್ವೆಲೆನ್ಸ್ ಟೀಂ 01 ರ ಮುಖ್ಯಸ್ಥ ರಘುರಾಮ ಶೆಟ್ಟಿ ಮತ್ತು ತಂಡದವರು, ಪ್ಲೈಯಿಂಗ್ ಸ್ಕ್ವಾಡ್ ನ ಚಂದ್ರ ಶೇಖರ ಮೂರ್ತಿ, ರುಕ್ಕನ ಗೌಡ, ಅಮಾಸೆಬೈಲು ಪೊಲೀಸ್ ಠಾಣಾ ಸಿಬ್ಬಂದಿಗಳು ತಪಾಸಣೆ ನಡೆಸುತ್ತಿರುವಾಗ, ಸಿದ್ಧಾಪುರ ಕಡೆಯಿಂದ ಹೊಸಂಗಡಿ ಕಡೆಗೆ ಹೋಗುತಿದ್ದ ಜನತಾದಳದ ಚನಾವಣಾ ಪ್ರಚಾರದ ವಾಹನಗಳಾದ ಕೆಎ 20 ಜಡ್ 4666 ವೋಕ್ಸ್ ವ್ಯಾಗನ್ ಕಾರು ಹಾಗೂ ಕೆಎ 51 ಎನ್ 5688 ಸ್ಕಾರ್ಪಿಯೋ ವಾಹನಗಳನ್ನು ತಪಾಸಣೆಗೊಳಿಸಿದಾಗ ಜೆ.ಡಿ.ಎಸ್ ಪಕ್ಷದ ಚುನಾವಣಾ ಪ್ರಚಾರದ ಪರವಾನಿಗೆ ಪಡೆದ ವಾಹನ ಸಂಖ್ಯೆ ಕೆಎ 20 ಜಡ್ 4666ರ ಚಾಲಕನಾದ ಎಂ.ಮನ್ಸೂರ್ ಇಬ್ರಾಹಿಂ ಇವರ ಬಳಿ ರೂಪಾಯಿ 75000/-(ರೂ 1000 ಮುಖ ಬೆಲೆಯ 75 ನೋಟುಗಳು) ನಗದು ಯಾವುದೇ ದಾಖಲೆಗಳಿಲ್ಲದೆ ಪತ್ತೆಯಾಗಿತ್ತು. ಇದಾದ ಬಳಿಕ ಇನ್ನಷ್ಟು ಅಕ್ರಮ ಹಣ ಸಾಗಾಟದ ವರದಿ ಬಂದಿತ್ತು.

English summary
Shimoga : A FIR filed against ShivarajKumar in Vinoba Nagar police station, Shimoga. Shivaraj is husband of JDS candidate booked for violating model code of conduct. Shiarajkumar along with district JDS leader Srikanth found campaigning for Geetha Shivarajkumar in Navile village last day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X