ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

19 ಮಂದಿಯನ್ನು ಉಚ್ಛಾಟಿಸಿದ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಆಗಸ್ಟ್.27: ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೆಡ್ಡು ಹೊಡೆದು ಪಕ್ಷೇತರರಾಗಿ ಸ್ಪರ್ಧಿಸಿದ್ದ 19 ಮಂದಿಯನ್ನು ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಜಿಲ್ಲಾ ಕಾಂಗ್ರೆಸ್ ಉಚ್ಛಾಟನೆ ಮಾಡಿದೆ.

ಜಿಲ್ಲಾ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳಾಗಿ ತಮ್ಮ ಪತ್ನಿಯರನ್ನು ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧವೇ ಕಣಕ್ಕಿಳಿಸಿದ್ದ ಡಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ರಂಗನಾಥ, ಜಯನಾಯ್ಕ, ದಕ್ಷಿಣ ಬ್ಲಾಕ್ ಉಪಾಧ್ಯಕ್ಷ ಅಂಥೋಣಿ ಚಿರಂಜೀವಿಯನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷ ಕಾಲ ಉಚ್ಛಾಟಿಸಲಾಗಿದೆ.

ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ: ಸಮಿತಿ ಪಟ್ಟಿಯಲ್ಲಿ ಯಾರು ಯಾರಿದ್ದಾರೆ?ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ: ಸಮಿತಿ ಪಟ್ಟಿಯಲ್ಲಿ ಯಾರು ಯಾರಿದ್ದಾರೆ?

ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಇಚ್ಛಿಸಿ ಅರ್ಜಿ ಸಲ್ಲಿಸಿ ಟಿಕೆಟ್ ಸಿಗದೇ ಪಕ್ಷೇತರರಾಗಿ ಕಣಕ್ಕಿಳಿದಿರುವವರನ್ನು ಪಕ್ಷದ ಜಿಲ್ಲಾಧ್ಯಕ್ಷ ತೀ.ನಾ.ಶ್ರೀನಿವಾಸ್‌ ಉಚ್ಛಾಟಿಸಿ ಆದೇಶಿಸಿದ್ದಾರೆ.

Shimoga District Congress has expelled 19 people

ಉಚ್ಛಾಟಿತರ ವಿವರ
ಸಿ.ಡಿ.ನಳಿನಾಕ್ಷಿ, ಬಿ.ರುಬಿಯಾ(ವಾರ್ಡ್ ನಂ.1) ಎಚ್.ಎಸ್.ಕುಮಾರಸ್ವಾಮಿ( ವಾರ್ಡ್ ನಂ.3) ‌ಜಯಂತಿ ಬಾಯಿ,(ವಾರ್ಡ್ ನಂ.6) ಎಂ.ವಿ.ಸುಜಾತ,( ವಾರ್ಡ್ ನಂ.7) ಜಬೀನ್ ತಾಜ್ (ವಾರ್ಡ್ ನಂ12) ರೇಖಾ.ಎ.ಎಸ್(ವಾರ್ಡ್ ನಂ.20) ಜಯಕುಮಾರ್(ವಾರ್ಡ್ ನಂ24) ನೂರ್‌ಜಾನ್‌, ಎ.ಪ್ಲೋರಿನಾ(ವಾರ್ಡ್ 25) ಲಕ್ಷ್ಮೀಬಾಯಿ, ಕೆ.ಪಿ.ಮಂಜುಳಬಾಯಿ(ವಾರ್ಡ್ 26) ಎಂ.ಪಿ.ಸುವರ್ಣ(ವಾರ್ಡ್ ನಂ27) ಎ.ಶಂಕರ್(ವಾರ್ಡ್ ನಂ.28) ಶಮೀಮಾ ಬಾನು(ವಾರ್ಡ್ ನಂ.29) ಸಾಹೀರಾ ಬಾನು(ವಾರ್ಡ್ ನಂ.35) ಇವರನ್ನು ಉಚ್ಛಾಟಿಸಲಾಗಿದೆ.

English summary
Shimoga District Congress has expelled 19 people who have contested independently. They was expelled on charges of anti-party activities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X