ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗದ ಪಿಜಿ ಮಾಲೀಕರಿಗೆ ಡಿಸಿ ಶಿವಕುಮಾರ್ ಎಚ್ಚರಿಕೆ

|
Google Oneindia Kannada News

ಶಿವಮೊಗ್ಗ, ಮೇ 22: ಶಿವಮೊಗ್ಗದ ಪಿಜಿ ಮಾಲೀಕರಿಗೆ ಡಿಸಿ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ. ಬಾಡಿಗೆ ಹಣ ಪಡೆಯದಂತೆ ಪಿಜಿ ಮಾಲೀಕರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

Recommended Video

ಶಿವಮೊಗ್ಗದ ಸೊರಬದಲ್ಲಿ ಮದುವೆಯಲ್ಲಿ ಭಾಗಿಯಾಗಿದ್ದ ಕೊರೊನ ಸೋಂಕಿತೆ | Kumar bangarappa | Shimoga

ಲಾಕ್‌ಡೌನ್‌ ಕಾರಣ ಲಗೇಜ್ ಇಟ್ಟು ಊರಿಗೆ ಹೋದವರಿಗೆ ಪಿಜಿಗಳಿಗೆ ಹಣ ಪಡೆಯುವ ಹಾಗಿಲ್ಲ ಎಂದು ಡಿಸಿ ಶಿವಕುಮಾರ್ ತಿಳಿಸಿದ್ದಾರೆ. ಲಗೇಜ್ ಇಟ್ಟು ಊರುಗಳಿಗೆ ತೆರಳಿದ ಪಿಜಿಗಳಿಂದ ಮಾಲೀಕರು ಒತ್ತಾಯ ಪೂರಕವಾಗಿ ಹಣ ಪಡೆಯುವ ಎಂಬ ಮಾಹಿತಿ ಮೇರೆಗೆ ಜಿಲ್ಲಾಧಿಕಾರಿ ಈ ಆದೇಶ ನೀಡಿದ್ದಾರೆ.

ಶಿವಮೊಗ್ಗ ಪೊಲೀಸ್ ಠಾಣೆಗಳಿಗೆ ಸ್ಯಾನಿಟೈಸರ್ ಸಿಂಪಡಣೆಶಿವಮೊಗ್ಗ ಪೊಲೀಸ್ ಠಾಣೆಗಳಿಗೆ ಸ್ಯಾನಿಟೈಸರ್ ಸಿಂಪಡಣೆ

ಲಾಕ್‌ಡೌನ್ ಘೋಷಣೆಯಾದಾಗ ಪಿಜಿಯಲ್ಲಿ ಇದ್ದ ಅನೇಕರು ತಮ್ಮ ತಮ್ಮ ಊರುಗಳಿಗೆ ಹೋಗಿದ್ದಾರೆ. ಕೊರೊನಾ ವೈರಸ್‌ ಹಬ್ಬುತ್ತಿರುವ ಹಿನ್ನಲೆ ಪಿಜಿಯಲ್ಲಿ ಇರುವುದು ಸೂಕ್ತವಲ್ಲ ಎನ್ನುವ ಕಾರಣಕ್ಕೆ ಬಹುತೇಕರು ಮನೆ ಸೇರಿದ್ದರು. ಎರಡ್ಮೂರು ತಿಂಗಳು ಮನೆಯಲ್ಲಿಯೇ ಇದ್ದರೂ, ಕೆಲವು ಪಿಜಿ ಮಾಲೀಕರು ಹಣ ನೀಡಬೇಕು ಎಂದು ಒತ್ತಾಯ ಮಾಡಿದ್ದರು.

Shimoga DC Sivakumar Warns PG Owners Not to Take Money From Those Who Went Home Without Carrying Luggages

ಲಗೇಜುಗಳು ಇಲ್ಲಿಯೇ ಇವೆ, ಹೀಗಾಗಿ ಬಾಡಿಗೆ ಹಣ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಆದರೆ, ಈ ರೀತಿ ಪಿಜಿಗಳು ಹಣ ಪಡೆಯುವ ಹಾಗಿಲ್ಲ ಎಂದು ಡಿಸಿ ಶಿವಕುಮಾರ್ ಎಂದಿದ್ದಾರೆ. ಒಂದು ವೇಳೆ ಈ ಕುರಿತು ದೂರುಗಳು ಬಂದರೆ ಪಿಜಿ ಮಾಲೀಕರ ವಿರುದ್ಧ‌ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಪಿಜಿಗಳಲ್ಲಿ ಹೆಚ್ಚಾಗಿ ವಿದ್ಯಾರ್ಥಿಗಳೇ ಇದ್ದು, ವಿದ್ಯಾರ್ಥಿಗಳಿಗೆ ತೊಂದರೆ ಆಗದೆ ಇರುವ ಹಾಗೆ ಈ ರೀತಿ ಆದೇಶ ಹೊರಡಿಸಲಾಗಿದೆ.

English summary
Shimoga district collector K B Sivakumar warns PG owners not to take money from those who went home without carrying luggages. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X