ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗದ ಮಂಜುನಾಥ ಭಂಡಾರಿ ಪರಿಚಯ

|
Google Oneindia Kannada News

ಶಿವಮೊಗ್ಗ, ಮಾ. 20 : ಹಲವಾರು ದಿನಗಳ ಹಗ್ಗಜಗ್ಗಾಟದ ನಂತರ ಕಾಂಗ್ರೆಸ್ ಶಿವಮೊಗ್ಗ ಕ್ಷೇತ್ರಕ್ಕೆ ಘೋಷಿಸಿದ ಅಭ್ಯರ್ಥಿ ಮಂಜುನಾಥ ಭಂಡಾರಿ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಭಂಡಾರಿ ಸ್ಪರ್ಧಿಸುತ್ತಿದ್ದು, ಬಿರುಸಿನಿಂದ ಪ್ರಚಾರ ಕಾರ್ಯವನ್ನು ಕೈಗೊಂಡಿದ್ದಾರೆ.

ಮಂಜುನಾಥ ಭಂಡಾರಿ ಹೆಸರು ಕೇಳಿದ ತಕ್ಷಣ ಶಿವಮೊಗ್ಗದ ಜನರು ಇವರು ಯಾರು? ಎಂದು ಪ್ರಶ್ನಿಸಿದ್ದು ಉಂಟು. ಮಂಜುನಾಥ ಭಂಡಾರಿ ಮೂಲತಃ ಭದ್ರಾವತಿ ತಾಲೂಕು ಹೊಳೆಹೊನ್ನೂರು ಹೋಬಳಿಯ ಅಗಸನಹಳ್ಳಿಯ ನಿವಾಸಿ. ಹಲವಾರು ವರ್ಷಗಳಿಂದ ಪಕ್ಷದ ಚಟುವಟಿಕೆಯಲ್ಲಿ ಸಕ್ರಿಯರಾಗಿರುವ ಇವರು ಮೊದಲ ಬಾರಿ ಚುನಾವಣೆ ಎದುರಿಸುತ್ತಿದ್ದಾರೆ. [ಭಂಡಾರಿ ಪ್ರಚಾರದ ಚಿತ್ರಗಳು]

ಎಐಸಿಸಿ ಸದಸ್ಯರಾಗಿರುವ ಮಂಜುನಾಥ ಭಂಡಾರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ, ಭಾರತೀಯ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಪಕ್ಷದ ಹಲವಾರು ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಚುನಾವಣೆ ಎದುರಿಸಲು ಪಕ್ಷ ಅವರಿಗೆ ಅವಕಾಶ ನೀಡಿದ್ದು, ಬಿಜೆಪಿಯ ಬಿಎಸ್ ಯಡಿಯೂರಪ್ಪ, ಜೆಡಿಎಸ್ ಪಕ್ಷದ ಗೀತಾ ಶಿವರಾಜ್ ಕುಮಾರ್, ಎಎಪಿಯ ಶ್ರೀಧರ ಕಲ್ಲಹಳ್ಳ ಇವರ ಪ್ರತಿಸ್ಪರ್ಧಿಗಳು. ಭಂಡಾರಿ ಕುರಿತ ಸಂಕ್ಷಿಪ್ತ ಪರಿಚಯ

ಹಲವಾರು ಹುದ್ದೆಗಳಲ್ಲಿ ಕಾರ್ಯನಿರ್ವಹಣೆ

ಹಲವಾರು ಹುದ್ದೆಗಳಲ್ಲಿ ಕಾರ್ಯನಿರ್ವಹಣೆ

* ಎಐಸಿಸಿ ಮತ್ತು ಕೆಪಿಸಿಸಿಯ ವಿವಿಧ ಹುದ್ದೆಗಳಗಳಲ್ಲಿ ಮಂಜುನಾಥ್ ಭಂಡಾರಿ ಕಾರ್ಯನಿರ್ವಹಿಸಿದ್ದಾರೆ.
* ರಾಜ್ಯಾಶಾಸ್ತ್ರದಲ್ಲಿ ಎಂಎ ಪದವಿ ಪಡೆದಿರುವ ಇವರು ಮೆಕಾನಿಕಲ್ ಇಂಜಿನಿಯರಿಂಗ್ ಪದವೀಧರರು.
* ರಾಜೀವ್ ವಿಕಾಸ ಕೇಂದ್ರ ಕಾರ್ಯಕ್ರಮದ ರೂವಾರಿ. ಈ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ 600 ಕೋಟಿ ಅನುದಾನ ನೀಡಿತ್ತು.

ಯುವಕರಿಗೆ ಸ್ಫೂರ್ತಿ

ಯುವಕರಿಗೆ ಸ್ಫೂರ್ತಿ

* ಯುವಕರನ್ನು ರಾಜಕೀಯಕ್ಕೆ ಕರೆತರಲು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಾಯಕತ್ವ ಗುಣ ಬೆಳೆಸುವ ಶಿಬಿರ ನಡೆಸಿದ್ದಾರೆ.
* ಅಮೆರಿಕ, ಕ್ಯೂಬಾ, ಇಸ್ರೇಲ್, ಶ್ರೀಲಂಕಾ, ಚೀನಾ ಮುಂತಾದ ಕಡೆ ನಡೆದ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದಲ್ಲಿ ದೇಶದ ಪ್ರತಿನಿಧಿಯಾಗಿ ಭಾಗವಹಿಸಿದ್ದಾರೆ.
* ಕರ್ನಾಟಕ ಸರ್ಕಾರದ ಇಂದಿರಾ ಜ್ಯೋತಿ ಯೋಜನೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಶಿವಮೊಗ್ಗದವರು

ಶಿವಮೊಗ್ಗದವರು

* ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಹೋಬಳಿಯ ಅಗಸನಹಳ್ಳಿಯ ನಿವಾಸಿ.
* 1984ರಿಂದ ಜಿಲ್ಲೆಯಲ್ಲಿ ನಡೆದ ವಿವಿಧ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದ್ದಾರೆ.
* ಉಡುಪಿ, ಶಿವಮೊಗ್ಗ ಮುಂತಾದ ಜಿಲ್ಲೆಗಳ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯರು, ಕೆಲವು ಸಂಘಟನೆಗಳ ಅಧ್ಯಕ್ಷರು.

ಸಾಮಾಜಿಕ ತಾಣಗಳಲ್ಲಿ ಸಕ್ರಿಯ

ಸಾಮಾಜಿಕ ತಾಣಗಳಲ್ಲಿ ಸಕ್ರಿಯ

*ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರು.(@Manju_Bhandary)
*ಫೇಸ್ ಬುಕ್ ಖಾತೆ, ಪೇಜ್ ಮೂಲಕ ಪ್ರಚಾರ ಚಿತ್ರಗಳನ್ನು ಹಾಕುವ ಮೂಲಕ ಸಕ್ರಿಯರಾಗಿದ್ದಾರೆ.(https://www.facebook.com/Bhandary123)

English summary
Elections 2014 : Manjunath Bhandary Congress candidate for Shimoga constituency. Manjunath Bhandary contesting for Lok Sabha Elections 2014 against Former CM BS Yeddyurappa. Bhandary contesting for election for the first time, here is the brief profile.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X