ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ : ಸುತ್ತಾ ಸೇತುವೆ ನಿರ್ಮಾಣಕ್ಕೆ ಕೂಡಿ ಬರದ ಕಾಲ!

|
Google Oneindia Kannada News

ಶಿವಮೊಗ್ಗ, ಸೆಪ್ಟೆಂಬರ್ 05 : ಕರ್ನಾಟಕದ ವಿದ್ಯುತ್ ಉತ್ಪಾದನೆಗೆ ಪ್ರಮುಖ ಮೂಲವಾಗಿರುವುದು ಲಿಂಗನಮಕ್ಕಿ ಜಲಾಶಯ. ಸಾಗರ ತಾಲೂಕಿನಲ್ಲಿ ಈ ಜಲಾಶಯ ತುಂಬಿದರೆ ಸಂತಸ ಪಡುವವರು ಹೆಚ್ಚು. ಆದರೆ, ಹೊಸನಗರದ ಜನರು ಸಂಕಷ್ಟ ಎದುರಿಸುತ್ತಾರೆ.

1819 ಅಡಿ ಎತ್ತರದ ಲಿಂಗನಮಕ್ಕಿ ಜಲಾಶಯ ಭರ್ತಿಯಾಗಿದೆ. 11 ಗೇಟ್‌ಗಳ ಮೂಲಕ ನೀರನ್ನು ಹೊರಬಿಡಲಾಗುತ್ತಿದೆ. ಜಲಾಶಯ ಭರ್ತಿಯಾದರೆ ಶರಾವತಿ ನದಿಯ ಹಿನ್ನೀರಿನಿಂದ ಹೊಸನಗರ ತಾಲೂಕಿನ ಹಲವು ಗ್ರಾಮಗಳ ಸಂಪರ್ಕ ಕಡಿತಗೊಳ್ಳುತ್ತದೆ.

ಹೊಸನಗರ ಭಾಗದಲ್ಲಿ ಕಂಪಿಸಿದ ಭೂಮಿ, ಆತಂಕಗೊಂಡ ಜನಹೊಸನಗರ ಭಾಗದಲ್ಲಿ ಕಂಪಿಸಿದ ಭೂಮಿ, ಆತಂಕಗೊಂಡ ಜನ

ಹೊಸನಗರ ತಾಲೂಕಿನ ಸುತ್ತಾ ಸೇತುವೆ ಮೇಲೆ ನೀರು ಬರುತ್ತದೆ. ಈಗ ಜಲಾಶಯ ಭರ್ತಿಯಾದ ಹಿನ್ನಲೆಯಲ್ಲಿ ಸೇತುವೆ ಮೇಲೆ 2 ಅಡಿ ನೀರು ನಿಂತಿದ್ದು, ಸುಮಾರು 20 ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಈ ಸೇತುವೆ ಸಹ ಶಿಥಿಲಗೊಂಡಿದ್ದು ಜನರ ಆತಂಕಕ್ಕೆಕಾರಣವಾಗಿದೆ.

ಲಿಂಗನಮಕ್ಕಿ ಭರ್ತಿ; ನೋಡಿ ಜೋಗದ ವೈಭವಲಿಂಗನಮಕ್ಕಿ ಭರ್ತಿ; ನೋಡಿ ಜೋಗದ ವೈಭವ

Sharavathi Water May Submerge Suttha Bridge Hosanagara

ಸುತ್ತಾ ಸೇತುವೆ ಸುತ್ತಾ, ಮಳಲಿ, ಬಾಳೆಕೊಪ್ಪ, ಮಣಸಟ್ಟೆ, ಏರಗಿ, ಟೆಂಕಬೈಲು ಸೇರಿದಂತೆ 20ಕ್ಕೂ ಹೆಚ್ಚು ಗ್ರಾಮಕ್ಕೆ ಸಂಪರ್ಕ ಕಲ್ಪಿಸುತ್ತಿದೆ. ಸುಮಾರು 2 ಸಾವಿರ ಕುಟುಂಬಗಳು ಈ ಗ್ರಾಮಗಳ ವ್ಯಾಪ್ತಿಯಲ್ಲಿ ವಾಸವಾಗಿವೆ.

ಕಲ್ಲೊಡ್ಡು ಯೋಜನೆ ವಿರೋಧಿಸಿ ಸಿಎಂ ವಿರುದ್ಧ ಸ್ವಜಿಲ್ಲೆಯಲ್ಲೇ ಆಕ್ರೋಶಕಲ್ಲೊಡ್ಡು ಯೋಜನೆ ವಿರೋಧಿಸಿ ಸಿಎಂ ವಿರುದ್ಧ ಸ್ವಜಿಲ್ಲೆಯಲ್ಲೇ ಆಕ್ರೋಶ

ಶಿಥಿಲಾವಸ್ಥೆ ತಲುಪಿದ್ದ ಸೇತುವೆ ಮೇಲೆ ಮರಳು, ಕಲ್ಲು ತುಂಬಿದ ಲಾರಿಗಳ ಸಂಚಾರದಿಂದಾಗಿ ಸೇತುವೆಗೆ ಮತ್ತಷ್ಟು ಹಾನಿಯಾಗಿದೆ. ಹೊಸ ಸೇತುವೆ ನಿರ್ಮಾಣ ಮಾಡಬೇಕು ಎಂಬ ಗ್ರಾಮಸ್ಥರ ಕೂಗಿಗೆ ಇನ್ನೂ ಬೆಲೆ ಸಿಕ್ಕಿಲ್ಲ.

Sharavathi Water May Submerge Suttha Bridge Hosanagara

ಸಾಗರ ಕ್ಷೇತ್ರದ ಶಾಸಕರಾಗಿ, ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ಕರ್ನಾಟಕ ರಸ್ತೆ, ಸೇತುವೆ ಅಭಿವೃದ್ಧಿ ನಿಗಮದ ವತಿಯಿಂದ ಸೇತುವೆ ನಿರ್ಮಾಣಕ್ಕಾಗಿ 3 ಕೋಟಿ ರೂ. ಅನುದಾನ ನೀಡಿದ್ದರು. ಆದರೆ, ಮೂರು ವರ್ಷ ಕಳೆದರೂ ಕಾಮಗಾರಿ ಆರಂಭವಾಗಿಲ್ಲ.

ಗುರುವಾರ ಕಾಗೋಡು ತಿಮ್ಮಪ್ಪ ಸುತ್ತಾ ಸೇತುವೆ ಪ್ರದೇಶಕ್ಕೆ ಭೇಟಿ ನೀಡಿದರು. ಕಾಮಗಾರಿ ಆರಂಭವಾಗದ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಸ್ಥಳದಿಂದಲೇ ಅಧಿಕಾರಿಗಳಿಗೆ ಕರೆ ಮಾಡಿದ ಅವರು, ಕಾಮಗಾರಿಗೆ ಕೂಡಲೇ ಟೆಂಡರ್ ಕರೆಯುವಂತೆ ಸೂಚನೆ ನೀಡಿದರು.

English summary
Sharavathi river back water may submerge Suttha bridge at Hosanagara taluk of Shivamogga district. Bridge will connect more than 20 villages.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X