ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗದ ಹೊಸ ಜೈಲಿನಲ್ಲಿ ಸೆನ್ಸರ್ ಸ್ಯಾನಿಟೈಜರ್ ಬೂತ್

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಜುಲೈ 6: ನಗರದ ಮಲಗೊಪ್ಪದಲ್ಲಿರುವ ಶಿವಮೊಗ್ಗ ಹೊಸ ಜೈಲಿನಲ್ಲಿ ಸೆನ್ಸರ್ ಸ್ಯಾನಿಟೈಜರ್ ಬೂತ್ ಅನ್ನು ಅಳವಡಿಸಲಾಗಿದೆ. ಒಳಗೆ ಬರುವವರು ಈ ಬೂತ್ ಮೂಲಕ ಸಾಗಿ ಬರಬೇಕಿದೆ. ಬೂತ್ ಒಳಗೆ ಪ್ರವೇಶಿಸಿದರೆ ಸಂಪೂರ್ಣ ಸ್ಯಾನಿಟೈಜ್ ಆಗುವ ಮೂಲಕ ಕೊರೊನಾ ಸೋಂಕಿನಿಂದ ರಕ್ಷಿಸಿಕೊಳ್ಳಬಹುದಾಗಿದೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ.ಪಿ. ರಂಗನಾಥ್, "ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಈ ಬೂತ್ ಆರಂಭಿಸಿದ್ದು, ಜೈಲ್ ನ ಮುಖ್ಯದ್ವಾರದಲ್ಲಿಯೇ ಇದನ್ನು ಅಳವಡಿಸಲಾಗಿದೆ. 90 ಸಾವಿರ ರೂ.ಗಳ ವೆಚ್ಚದಲ್ಲಿ ಈ ಬೂತ್ ಅಳವಡಿಸಲಾಗಿದೆ. ಇದಕ್ಕೆ ಶುದ್ಧಿ ಬಯೋ ಆರ್ಗ್ಯಾನಿಕ್ ಮೆಡಿಸಿನ್ ಬಳಕೆ ಮಾಡಲಾಗುತ್ತಿದೆ" ಎಂದು ತಿಳಿಸಿದರು.

Sensor Sanitizer Booth Installed In Malagoppa Jail Of Shivamogga

 ಶಿವಮೊಗ್ಗದಲ್ಲಿ ಇಂದಿನಿಂದ ಕಟ್ಟುನಿಟ್ಟಿನ ಕರ್ಫ್ಯೂ ಜಾರಿ ಶಿವಮೊಗ್ಗದಲ್ಲಿ ಇಂದಿನಿಂದ ಕಟ್ಟುನಿಟ್ಟಿನ ಕರ್ಫ್ಯೂ ಜಾರಿ

ಯಾರೇ ಬಂದರೂ ಈ ಬೂತ್ ಒಳಗಿನಿಂದ ಬರುವುದರಿಂದ ಅವರಿಗೆ ಈ ಔಷಧ ಸಿಂಪಡನೆಯಾಗುತ್ತದೆ. ಔಷಧಿಗೆ 12 ಸಾವಿರ ರೂ. ವೆಚ್ಚ ತಗುಲಲಿದ್ದು, 30 ಲೀಟರ್ ನ ಈ ಔಷಧಿಯಲ್ಲಿ ಒಂದು ಲೀಟರ್ ಗೆ 50 ಲೀಟರ್ ನೀರು ಸೇರಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.

English summary
A sensor sanitizer booth has been installed at Shimogga's new jail in Malagoppa
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X