ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ: ಸೊಮವಾರದವರೆಗೂ 144 ಸೆಕ್ಷನ್ ಮುಂದುವರಿಕೆ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಡಿಸೆಂಬರ್ 5: ಶಿವಮೊಗ್ಗ ನಗರದ ಮೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರದ ಬೆಳಿಗಿನವರೆಗೂ ಇದ್ದ ಕರ್ಫ್ಯೂ, ಮತ್ತೆ ಸೋಮವಾರದವರೆಗೂ ಮುಂದುವರೆದಿದೆ.

ಸೆಕ್ಷನ್ 144 ನ್ನು ತಹಶೀಲ್ದಾರ್ ಎನ್.ಜೆ ನಾಗರಾಜ್ ಮುಂದುವರೆಸುವಂತೆ ಆದೇಶಿಸಿದ್ದಾರೆ. ಅದರಂತೆ ದೊಡ್ಡಪೇಟೆ, ತುಂಗಾನಗರ ಹಾಗೂ ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕರ್ಫ್ಯೂ ಸೋಮವಾರದವರೆಗೆ ಮುಂದುವರೆಯಲಿದೆ.

EXCLUSIVE: ನನ್ನೆದುರೆ ಚಾಕು ತೋರಿಸುತ್ತಿಯಾ? ತಗೊಳ್ಳೊ ಪಿಸ್ತೂಲ್, ನೀನೇ ಶಾಂತಿ ಕಾಪಾಡು!EXCLUSIVE: ನನ್ನೆದುರೆ ಚಾಕು ತೋರಿಸುತ್ತಿಯಾ? ತಗೊಳ್ಳೊ ಪಿಸ್ತೂಲ್, ನೀನೇ ಶಾಂತಿ ಕಾಪಾಡು!

ಶಿವಮೊಗ್ಗ ನಗರದಲ್ಲಿ ಎರಡು ದಿನಗಳ ಹಿಂದೆ ನಡೆದ ಕೋಮುಗಲಭೆಗೆ ಸಂಬಂಧ ಪಟ್ಟಂತೆ ಕೋಟೆ ಮತ್ತು ದೊಡ್ಡಪೇಟೆಯಲ್ಲಿ 10 ಪ್ರಕರಣ ದಾಖಲಾಗಿದ್ದು, ಶಾಂತಿ ನೆಲೆಸಲು ಹಲವಾರು ಕ್ರಮ ಕೈಗೊಳ್ಳಲಾಗಿದೆ ಎಂದು ಐ.ಜಿ ಎಸ್.ರವಿ ತಿಳಿಸಿದ್ದರು.

Shivamogga: Section 144 Continues In 3 Station Limits

ಎರಡು ದಿನಗಳ ಹಿಂದೆ ನಡೆದಿದ್ದ ಕೋಮುಗಲಭೆ ಘಟನೆ ಹಾಗೂ ಶುಕ್ರವಾರ ರಾತ್ರಿ ನಡೆದ ಅಹಿತಕರ ಘಟನೆಯನ್ನು ಅವಲೋಕಿಸಿ, ತಹಶೀಲ್ದಾರ್ ಎನ್.ಜೆ.ನಾಗರಾಜ್ ಶಿವಮೊಗ್ಗ ನಗರದಲ್ಲಿ ಸೆಕ್ಷನ್ 144ನ್ನು ಸೋಮವಾರದ ಬೆಳಿಗ್ಗೆ 10 ಗಂಟೆಯವರೆಗೆ ಅವಲೋಕಿಸಿ ಆದೇಶ ಹೊರಡಿಸಿದ್ದಾರೆ.

ಯಾವುದೇ ತರದ ವದಂತಿಗಳಿಗೆ ಸಾರ್ವಜನಿಕರು ಕಿವಿ ಕೊಡಬಾರದು, ವಾಟ್ಸಪ್ ಮತ್ತು ಸಾಮಾಜಿಕ ಜಾಲತಾಣದ ವಿಷಯಗಳಿಗೆ ಸಾರ್ವಜನಿಕರು ಮನ್ನಣೆ ನೀಡಬಾರದು, ಕೋಮುಗಲಭೆ ಕುರಿತು ಮಾಹಿತಿ ಇದ್ದರೆ ಹತ್ತಿರ ಪೊಲೀಸ್ ಠಾಣೆಗೆ ನೀಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋರಿದ್ದಾರೆ.

English summary
The curfew continued at the three police stations limits in Shivamogga city until Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X