ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭದ್ರಾವತಿಯಲ್ಲಿ ಯುವಕನ ಮೇಲೆ ಹಲ್ಲೆ, ಕೋಮು ಗಲಾಟೆಯಲ್ಲ, ವೈಯಕ್ತಿಕ ದ್ವೇಷ!

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಆಗಸ್ಟ್‌ 16: ಮನೆ ಮುಂದಿನ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ. ಈ ನಡುವೆ ಅಂದರ್ ಬಾಹರ್ ವಿಡಿಯೋ ವೈರಲ್ ಆಗಿದ್ದು, ಹಲ್ಲೆಗೆ ಇದುವೆ ಪ್ರಮುಖ ಕಾರಣವಿರಬಹುದು ಎಂದು ಶಂಕಿಸಲಾಗಿದೆ.

ಭದ್ರಾವತಿ ನೆಹರು ನಗರ ನಿವಾಸಿ ಸುನಿಲ್ (28) ಎಂಬಾತನ ಮೇಲೆ ಹಲ್ಲೆಯಾಗಿದ್ದು, ಮುಬಾರಕ್ ಅಲಿಯಾಸ್ ಡಿಚ್ಚಿ (26) ಎಂಬಾತ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಭದ್ರಾವತಿ ಹೊಸ ಸೇತುವೆ ಜಲಾವೃತ, ಸಂಚಾರ ಸ್ಥಗಿತ, 120 ಮಂದಿ ಸ್ಥಳಾಂತರ ಭದ್ರಾವತಿ ಹೊಸ ಸೇತುವೆ ಜಲಾವೃತ, ಸಂಚಾರ ಸ್ಥಗಿತ, 120 ಮಂದಿ ಸ್ಥಳಾಂತರ

ಕೆಲಸಕ್ಕೆ ಹೋಗಲು ಸುನಿಲ್ ತನ್ನ ಮನೆ ಮುಂದಿನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಮುಬಾರಕ್ ಅಲಿಯಾಸ್ ಡಿಚ್ಚಿ, ಸುನಿಲನನ್ನು ಅಡ್ಡಗಟ್ಟಿದ್ದಾನೆ. ಎಡಗೈ, ಭುಜ ಮತ್ತು ತಲೆಗೆ ಕೈಯಿಂದ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

Savarkar poster clash: Assault on Youth in Bhadravati is not communal riots- Police

ಹಲ್ಲೆ ಬೆನ್ನಿಗೆ ವಿಡಿಯೋ ವೈರಲ್

ಹಲ್ಲೆ ನಡೆದ ಬೆನ್ನಿಗೆ ವಿಡಿಯೋ ವೈರಲ್ ಆಗಿದೆ. ಯುವಕರ ಗುಂಪೊಂದು ಜೂಜಾಟ ಆಡುತ್ತಿರುವುದನ್ನು ವ್ಯಕ್ತಿಯೊಬ್ಬರು ಸೆರೆ ಹಿಡಿದಿದ್ದಾರೆ. ಜೂಜಾಟದಲ್ಲಿ ತೊಡಗಿಕೊಂಡವರಲ್ಲಿ ಸುನಿಲ್ ಕೂಡ ಇರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಇನ್ನು, ಆ ವಿಡಿಯೋ ರೆಕಾರ್ಡ್ ಮಾಡಿದ್ದು ಮುಬಾರಕ್ ಅಲಿಯಾಸ್ ಡಿಚ್ಚಿ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

Savarkar poster clash: Assault on Youth in Bhadravati is not communal riots- Police

ಸುನಿಲ್ ಹೇಳಿಕೆ ಏನು?

ಇತ್ತ ಹಲ್ಲೆ ಬೆನ್ನಿಗೆ ಸುನಿಲ್ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ. 'ವಿಕಲಾಂಗ ವ್ಯಕ್ತಿಯೊಬ್ಬರ ಜೊತೆಗೆ ಮುಬಾರಕ್ ಜಗಳವಾಡುತ್ತಿದ್ದ. ನಿನ್ನೆ ಇದನ್ನು ನಾನು ಬಿಡಿಸಿದ್ದೆ. ಹಾಗಾಗಿ ಇವತ್ತು ನನ್ನನ್ನು ಅಡ್ಡಗಟ್ಟಿ ಹಲ್ಲೆ ಮಾಡಿದ್ದಾನೆ' ಎಂದು ಹೇಳಿಕೆ ನೀಡಿದ್ದಾನೆ. ಶಿವಮೊಗ್ಗದಲ್ಲಿ ಬಿಗುವಿನ ವಾತಾವರಣದ ಬೆನ್ನಿಗೆ ಭದ್ರಾವತಿಯಲ್ಲಿಯು ನಿಷೆಧಾಜ್ಞೆ ಜಾರಿಗೊಳಿಸಲಾಗಿತ್ತು. ಈಗ ಸುನಿಲ್ ಮೇಲೆ ಮುಬಾರಕ್ ಹಲ್ಲೆ ನಡೆಸಿರುವುದು ಕೆಲಕಾಲ ಗೊಂದಲ ಮೂಡಿಸಿತ್ತು.

Recommended Video

ಇಷ್ಟೊಂದು ತಲ್ಲೀರಾಗಿ ರಾಷ್ಟ್ರಗೀತೆಯನ್ನು ಹೇಳೋಕೆ ಯಾರಿಗಾದ್ರೂ ಸಾಧ್ಯಾನಾ? | *Viral | OneIndia Kannada

English summary
Savarkar poster clash: Assault on Youth in Bhadravati is not communal riots, its personal Enmity. confirmed by Police on Tuesday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X