ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾತ್ರೋರಾತ್ರಿ ಧರ್ಮಸ್ಥಳದ ಬಗ್ಗೆ ಬಂತು ಅಶುಭ ಸುದ್ದಿ!

|
Google Oneindia Kannada News

ಶಿವಮೊಗ್ಗ, ಮಾರ್ಚ್‌ 27: ರಾತ್ರಿ ಊಟ ಮಾಡಿ ಮಲಗಿದ್ದ ಜನಕ್ಕೆ ಇದ್ದಕ್ಕಿದ್ದಂತೆ ಒಂದು ಆಫಾತಕಾರಿ ಸುದ್ದಿ ಬಂದು, ಧರ್ಮಸ್ಥಳದ ಮಂಜುನಾಥನ ಬಗ್ಗೆ ಬಂದ ಸುದ್ದಿಯಿಂದ ಜನ ನಿದ್ದೆಯಿಂದ ಮೇಲೆ ಎದ್ದರು. ನೆಮ್ಮದಿಯಾಗಿ ಮಲಗಿದ್ದ ಜನರು ಕೊಂಚ ಭಯಕೊಂಡರು.

Recommended Video

Weekend with Ramesh Season 4: ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಯೋಜನೆ ಬಗ್ಗೆ ನೀವು ತಿಳಿಯಲೇಬೇಕು

ಧರ್ಮಸ್ಥಳ ದೇವಲಯದ ಮಂಜುನಾಥ ಸ್ವಾಮಿಯ ನಂದ ದೀಪಾ ನಂದಿ ಹೋಗಿದೆ. ಹೀಗಾಗಿ,‌‌ ಎಲ್ಲರೂ ತಮ್ಮ ಮನೆಯ ಮುಂದೆ ದೀಪ ಹಚ್ಚಿ ಇಡಬೇಕು ಎನ್ನುವ ಸುದ್ದಿ ಇದ್ದಾಗಿತ್ತು. ದೇವಸ್ಥಾನದಲ್ಲಿ ಅಶುಭ ಘಟನೆ ನಡೆದಿದ್ದು, ಎಲ್ಲ ಭಕ್ತರು ದೀಪ ಹಚ್ಚಬೇಕು ಎಂದು ತಿಳಿಸಲಾಗಿತ್ತು. ದೇವಲಯದ ಆಡಳಿತ ಮಂಡಳಿಯವರೇ ಈ ರೀತಿ ಹೇಳಿದ್ದಾರೆ ಎಂದು ಸುದ್ದಿ ಹಬ್ಬಿಸಲಾಗಿತ್ತು.

ಧರ್ಮಸ್ಥಳದಲ್ಲಿ ದೇವರ ದರ್ಶನ ಸಮಯ ಬದಲಾವಣೆಧರ್ಮಸ್ಥಳದಲ್ಲಿ ದೇವರ ದರ್ಶನ ಸಮಯ ಬದಲಾವಣೆ

ಶಿವಮೊಗ್ಗ, ಶಿಕಾರಿಪುರ, ಭದ್ರಾವತಿ, ಹಾವೇರಿ, ಚನ್ನಗಿರಿ ಹೀಗೆ ಅನೇಕ ಭಾಗಗಳಲ್ಲಿ, ನೂರಾರು ಹಳ್ಳಿಗಳಲ್ಲಿ ಈ ಆಚರಣೆಯನ್ನು ನಿನ್ನೆ ರಾತ್ರಿ ಮಾಡಿದರು. ಊರಿಗೆ ಊರೆ ದೀಪ ಹಚ್ಚಿ ತಮ್ಮ ತಮ್ಮ ಮನೆ ಮುಂದೆ ಇಟ್ಟರು.

ಏನಿದು ಸುದ್ದಿ, ಎಲ್ಲಿಂದ ಬಂತು?

ಏನಿದು ಸುದ್ದಿ, ಎಲ್ಲಿಂದ ಬಂತು?

ಶ್ರೀಕ್ಷೇತ್ರ ಧರ್ಮಸ್ಥಳದ ದೇವಾಲಯದಲ್ಲಿ ಶ್ರೀಮಂಜುನಾಥ‌ನ ನಂದ ದೀಪ ಇದ್ದಕ್ಕಿದ್ದಂತೆ ‌ನಂದಿ ಹೋಗಿದೆ.‌ ದೇವಾಲಯದ ದೀಪ ಈ ಹಿಂದೆ ಎಂದೂ ನಂದಿ ಹೋಗಿರಲಿಲ್ಲ. ಹೀಗಾಗಿ, ಇದು ಅಶುಭ ಸೂಚನೆಯಾಗಿದೆ. ಎಲ್ಲ ಭಕ್ತರು ತಮ್ಮ ಮನೆ ಮುಂದೆ ದೀಪ ಹಚ್ಚಿ ಇಡಬೇಕು ಎನ್ನುವ ಸುದ್ದಿ ಫೋನ್ ಕರೆಗಳ ಮೂಲಕ, ವಾರ್ಟ್ಸ್ ಅಪ್ ಸಂದೇಶಗಳ‌ ಮೂಲಕ ಹರಿದಾಡಿದೆ.

ನಿದ್ದೆಯಿಂದ‌ ಎದ್ದ ಊರಿನ ಜನ

ನಿದ್ದೆಯಿಂದ‌ ಎದ್ದ ಊರಿನ ಜನ

ನಿನ್ನೆ ರಾತ್ರಿ ಈ ಸುದ್ದಿ‌ಹರಿಹಾಡಿತ್ತು. 11 ಗಂಟೆ ಸುಮಾರಿಗೆ ಭದ್ರಾವತಿ ತಾಲೂಕಿನ ಮಂಗೋಟೆ ಗ್ರಾಮಕ್ಕೂ ಬಂತು. ತಮಗೆ ಬಂದ ಫೋನ್ ಕರೆಯಿಂದ ಜನ ಭಯದಿಂದಲೇ ಎದ್ದರು. ಹೊರೆಗೆ ಬಂದರೆ, ಬೇರೆಯವರು ಅವರ ಮನೆ ಮುಂದೆ ದೀಪ ಹಚ್ಚಿ ಇಡುವುದನ್ನು ನೋಡಿ ತಾವೂ ಸಹ ಹಾಗೇಯೇ ಮಾಡಿದರು.

ಬಾಗಿಲು ತಟ್ಟಿದ ಮಹಿಳೆಯರು

ಬಾಗಿಲು ತಟ್ಟಿದ ಮಹಿಳೆಯರು

ಸುದ್ದಿ‌‌ ತಿಳಿದ‌ ತಕ್ಷಣ ಹಳ್ಳಿಯ ಹೆಂಗಸರು ಅಕ್ಕ ಪಕ್ಕದ ಮನೆಯವರನ್ನು ಎಬ್ಬಿಸಿದರು.‌ ಬಾಗಿಲು ತೆರೆಯುವವರೆಗೆ ಜೋರಾಗಿ ತಟ್ಟಿದರು. ಹೊರಗೆ ಬಂದವರಿಗೆ ಸುದ್ದಿ ತಿಳಿಸಿ, ಅವರಿಗೂ ದೀಪ‌ ಹಚ್ಚಿ ಇಡುವಂತೆ ಹೇಳಿದರು. ನೋಡು ನೋಡುತ್ತಾ ಇಡೀ‌ ಊರೆ ದೀಪಾವಳಿ ಹಬ್ಬ‌ ಆಚರಿಸುವ ರೀತಿ ಬದಲಾಯ್ತು.

ಮನೆಯ ಸದಸ್ಯರ ಸಂಖ್ಯೆಯಷ್ಟು ದೀಪ

ಮನೆಯ ಸದಸ್ಯರ ಸಂಖ್ಯೆಯಷ್ಟು ದೀಪ

ಮೊನ್ನೆಯಿಂದ ಇಂತಹ ಸುದ್ದಿ ರಾಜ್ಯದ ಬೇರೆ ಬೇರೆ ಕಡೆ ಹರಿದಾಡುತ್ತಿದೆ. ಮನೆ ಮುಂದೆ ದೀಪ ಇಡಬೇಕು ಎನ್ನುವುದು ಮಾತ್ರವಲ್ಲದೆ, ಗೋದಿ ಹಿಟ್ಟಿನಲ್ಲಿ ಮಾಡಿದ ದೀಪದಲ್ಲಿ ಕುಟುಂಬದ ಸದಸ್ಯರ ಸಂಖ್ಯೆಯಷ್ಟು ದೀಪ ಹಚ್ಚಿ ದೇವರ ಮೆನೆಯಲ್ಲಿ ಇಡುತ್ತಿದ್ದಾರೆ. ಮೇಲ್ನೋಟಕ್ಕನೇ ಈ ಸುದ್ದಿ ಸುಳ್ಳು ಇರಬೇಕು ಎನ್ನುವುದು ತಿಳಿಯುತ್ತದೆ. ಆದರೂ, ಅನೇಕ ಹಳ್ಳಿಗಳಲ್ಲಿ ಇದರ ಆಚರಣೆ ನಡೆಯಿತು.

English summary
A news about Dharmasthala temple viral last night. That People were worried.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X