ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇವೇಗೌಡರ ಸಂಬಂಧಿ ಲಾಕರ್ ನಲ್ಲಿ 6.5.ಕೋಟಿ ಪತ್ತೆ; ಬಂಧನ ಸಾಧ್ಯತೆ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಏಪ್ರಿಲ್ 05:ಶಿವಮೊಗ್ಗದ ಶ್ರುತಿ ಮೋಟಾರ್ಸ್​ ಮಾಲೀಕ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಸಂಬಂಧಿ ಡಿ.ಟಿ.ಪರಮೇಶ್ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ದಾಳಿ ವೇಳೆ ಒಟ್ಟು 6 ಕೋಟಿ 23 ಲಕ್ಷ ಹಣ ಪತ್ತೆಯಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಏಪ್ರಿಲ್ 4 ರಂದು ತಡರಾತ್ರಿ ಸಿಕ್ಕ ಲೆಕ್ಕದ ಪ್ರಕಾರ 6 ಕೋಟಿ 23 ಲಕ್ಷ ಹಣ ಪತ್ತೆಯಾಗಿದ್ದು, ಡಿ.ಪಿ.ಪರಮೇಶ್​ರನ್ನು ಸತತ ವಿಚಾರಣೆಗೆ ಒಳಪಡಿಸಲಾಗಿದೆ. ಅವರನ್ನು ಇದೀಗ ಬಂಧಿಸುವ ಸಾಧ್ಯತೆ ಇದೆ.

ಕಟಪಾಡಿ-ಶಿರ್ವ ರಸ್ತೆ ಬಳಿ ಕಾರಿನಲ್ಲಿ ಸಾಗಿಸುತ್ತಿದ್ದ ದಾಖಲೆ ರಹಿತ ನಗದು ವಶಕಟಪಾಡಿ-ಶಿರ್ವ ರಸ್ತೆ ಬಳಿ ಕಾರಿನಲ್ಲಿ ಸಾಗಿಸುತ್ತಿದ್ದ ದಾಖಲೆ ರಹಿತ ನಗದು ವಶ

ಒಂದು ಲಾಕರ್​​​ನಲ್ಲಿ 4 ಕೋಟಿ, ಮತ್ತೊಂದು ಲಾಕರ್​​ನಲ್ಲಿ 2 ಕೋಟಿ ಹಣ ಪತ್ತೆಯಾಗಿದೆ. ಈ ಹಿಂದೆ ಮಾರ್ಚ್​ 28ರಂದು ಶಿವಮೊಗ್ಗದಲ್ಲಿ ಡಿ.ಟಿ.ಪರಮೇಶ್ ರವರ ನಿವಾಸದ ಮೇಲೆ ಹಾಗೂ ಶೃತಿ ಮೋಟಾರ್ಸ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಆದರೆ ಅಂದು ಅಧಿಕಾರಿಗಳಿಗೆ ಏನೂ ಸಿಕ್ಕಿರಲಿಲ್ಲ.

Rs 6 crore 23 lakh has been found in DT Paramesh residence

 ಕಾರ್ಕಳ ಚೆಕ್ ಪೋಸ್ಟ್ ನಲ್ಲಿ ದಾಖಲೆ ರಹಿತ ನಗದು ವಶ ಕಾರ್ಕಳ ಚೆಕ್ ಪೋಸ್ಟ್ ನಲ್ಲಿ ದಾಖಲೆ ರಹಿತ ನಗದು ವಶ

ಈಗ ಎರಡು ಲಾಕರ್​ಗಳ ವಿಳಾಸ ಪತ್ತೆಯಾದ ನಂತರ ಐಟಿ ಅಧಿಕಾರಿಗಳು ತಮ್ಮ ಕಾರ್ಯಾಚರಣೆ ಆರಂಭಿಸಿದ್ದರು. ಲಾಕರ್​ಗಳನ್ನು ಓಪನ್​ ಮಾಡಿದಾಗ 2000 ರೂ.ಹಾಗೂ 500 ಮುಖ ಬೆಲೆಯ ಅಪಾರ ಪ್ರಮಾಣದ ಕಂತೆ ಕಂತೆ ನೋಟುಗಳನ್ನು ಕಂಡು ಐಟಿ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ.

English summary
Lok Sabha Elections 2019:Rs 6 crore 23 lakh has been found in Shivamogga Shruti motors owner DT Paramesh residence.Money was found when IT officials attacked.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X