• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಿವಮೊಗ್ಗ ಅಬಕಾರಿ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ: 5.50 ಲಕ್ಷ ರೂ. ಮೌಲ್ಯದ ಗಾಂಜಾ ವಶ

By ಶಿವಮೊಗ್ಗ ಪ್ರತಿನಿಧಿ
|

ಶಿವಮೊಗ್ಗ, ಸೆಪ್ಟೆಂಬರ್ 22: ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಕಣ್ಣೂರು ಜಮೀನಿನ ಸುತ್ತಮುತ್ತಲಿನ ಸ್ಥಳದಲ್ಲಿ ಅಕ್ರಮವಾಗಿ ಗಾಂಜಾ ಬೆಳೆಯುತ್ತಿದ್ದವರನ್ನು ಅಬಕಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಣ್ಣೂರು ಗ್ರಾಮದ ಗಂಗಾಧರಪ್ಪ ಬಿನ್ ಈಶ್ವರಪ್ಪ, ಪರಶುರಾಮಪ್ಪ ಬಿನ್ ಈಶ್ವರಪ್ಪ ಹಾಗೂ ಹುಚ್ಚರಾಯಪ್ಪ ಬಿನ್ ಈಶ್ವರಪ್ಪ ಅವರು ನಾಲ್ಕರಿಂದ ಆರು ಅಡಿ ಎತ್ತರವಿರುವ ಹೂವು, ಕಾಯಿಗಳಿಂದ ಕೂಡಿದ್ದ ಫಲ ಭರಿತ ಘಾಟು ವಾಸನೆಯುಳ್ಳ ಗಾಂಜಾ ಗಿಡಗಳನ್ನು ಬೆಳೆದಿದ್ದು, ಇವುಗಳನ್ನು ಬೇರು ಸಮೇತ ಕಿತ್ತು ವಶಕ್ಕೆ ಪಡೆಯಲಾಗಿದೆ.

44 ಲಕ್ಷ ರೂ. ಮೌಲ್ಯದ ಗಾಂಜಾ ವಶಪಡಿಸಿಕೊಂಡ ರಾಮನಗರ ಪೊಲೀಸರು

ಗಾಂಜಾ ಬೆಳೆಯ ಅಂದಾಜು ಮೌಲ್ಯ 5,50,000 ರುಪಾಯಿಗಳಾಗಿರುತ್ತವೆ ಎಂದು ಅಂದಾಜಿಸಲಾಗಿದ್ದು, ಪೊಲೀಸ್ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ದಾಳಿ ಕಾರ್ಯವನ್ನು ಅಬಕಾರಿ ಜಂಟಿ ಆಯುಕ್ತರ ನಿರ್ದೇಶನದ ಮೇರೆಗೆ ಕ್ಯಾಪ್ಟನ್ ಅಜಿತ್ ಕುಮಾರ್ ಅಬಕಾರಿ ಉಪ ಆಯುಕ್ತರು ಶಿವಮೊಗ್ಗ ಅವರ ನೇತೃತ್ವದಲ್ಲಿ ಜಿಲ್ಲಾ ತಂಡದ ಅಬಕಾರಿ ನಿರೀಕ್ಷಕ ಹನುಮಂತಪ್ಪ, ಅಬಕಾರಿ ಉಪ ನಿರೀಕ್ಷಕ ಜಾನ್ ಪಿ.ಜೆ, ಸೊರಬ ವಲಯದ ಅಬಕಾರಿ ನಿರೀಕ್ಷಕ ಅಣ್ಣಪ್ಪ, ಸಿಬ್ಬಂದಿಗಳು ಚಂದ್ರಪ್ಪ, ರಾಜಮ್ಮ, ರವೀಂದ್ರ ಪಾಟೀಲ್, ಗುರುಮೂರ್ತಿ, ಮುದಾಸಿರ್ ಹಾಗೂ ಸೊರಬ, ಸಾಗರ, ಶಿವಮೊಗ್ಗ ವಲಯಗಳ ಒಟ್ಟು 30 ಅಧಿಕಾರಿ ಸಿಬ್ಬಂದಿಗಳು ಇದ್ದರು.

English summary
Excise Police have seized marijuana in the Kannur farm near Soraba Taluk in Shivamogga district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X