• search
  • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಿವಮೊಗ್ಗ: ಮಲೆನಾಡಿನಲ್ಲಿ ಶುಂಠಿ ಬೆಳೆಗೆ ಬಾಧಿಸುತ್ತಿದೆ ಕೊಳೆರೋಗ

By Raghu Shikari
|

ಶಿವಮೊಗ್ಗ, ಆಗಸ್ಟ್ 09: ಶಿವಮೊಗ್ಗ ಜಿಲ್ಲೆಯ ಮಲೆನಾಡಿನಲ್ಲಿ ಅತೀ ಹೆಚ್ಚು ಶುಂಠಿಯನ್ನು ಬೆಳೆಯುವ ರೈತರಿದ್ದು, ಸಾವಿರಾರು ಹೆಕ್ಟೆರ್ ಪ್ರದೇಶದಲ್ಲಿ ಶುಂಠಿ ಬೆಳೆಯನ್ನು ಬೆಳೆದಿದ್ದು, ಆದರೆ ಕೊಳೆರೋಗ ಕಾಡುತ್ತಿರುವುದು ರೈತರಲ್ಲಿ ಆತಂಕ ಹೆಚ್ಚಾಗಿದೆ.

ಶುಂಠಿ ಬೆಳೆ‌ ಈ‌ ಭಾಗದಲ್ಲಿ ‌ಸಾಂಪ್ರದಾಯಕ ಬೆಳೆಯಲ್ಲದಿದ್ದರೂ, ಲಾಭದಾಯಕ‌ ಬೆಳೆ. ಕೇರಳ ಬೆಳೆಗಾರರು ಈ ಭಾಗಕ್ಕೆ ಶುಂಠಿಯನ್ನು ಬೆಳೆಯಲು ಆಗಮಿಸುತ್ತಿದ್ದರು. ಈಗ ಸ್ವತಃ ರೈತರು ತಮ್ಮ ಜಮೀನುಗಳಲ್ಲಿ ಶುಂಠಿಯನ್ನು ಬೆಳೆಯುತ್ತಿದ್ದಾರೆ.

ತುಂಗಾ ನದಿ ಹೊರಹರಿವು ಹೆಚ್ಚಳ‌; ನದಿ ಪಾತ್ರದ ಜನರಿಗೆ ಹೆಚ್ಚಾಯ್ತು ಆತಂಕ!

ಶುಂಠಿ ಬೆಳೆಯು ಅತ್ಯಂತ ಲಾಭದಾಯಕ‌ ಬೆಳೆಯಾಗಿದ್ದು, ಬೆಳೆ ಬೆಳೆಯಲೂ ಅಷ್ಟೆ ಬಂಡವಾಳದ ಅಗತ್ಯವಿದೆ. ಸರಿಸುಮಾರು ಒಂದು ಎಕರೆ ಶುಂಠಿಯನ್ನು ಬೆಳೆಯಲು ಮೂರರಿಂದ ನಾಲ್ಕು ಲಕ್ಷ ಬಂಡವಾಳ ಬೇಕಾಗುತ್ತದೆ.

ಶುಂಠಿ ಬೆಳೆಯೂ ಅತ್ಯಂತ ಸೂಕ್ಷ್ಮ ಬೆಳೆಯಾಗಿದ್ದು ಈ ಬೆಳೆಯನ್ನು ಬೆಳೆಯಲು ಸಾಕಷ್ಟು ತಯಾರಿ ಹಾಗೂ ಅತ್ಯಂತ ಹೆಚ್ಚು ಜಾಗರೂಕತೆ ಅವಶ್ಯಕತೆ ಇದೆ. ಸ್ವಲ್ಪ ಹೆಚ್ಚು ಕಡಿಮೆಯಾದರೂ ಬೆಳೆ ಸರ್ವನಾಶ ಆಗುವುದು ಖಂಡಿತ. ಲಕ್ಷಾಂತರ ರೂ. ಬಂಡವಾಳ ನಷ್ಟ ಆಗುವುದು, ಆದ್ದರಿಂದ ಪ್ರತಿನಿತ್ಯ ಬೆಳೆಯ ಬೆಳವಣಿಗೆಯ ಬಗ್ಗೆ ಗಮನ ನೀಡಬೇಕು.

ಶಿವಮೊಗ್ಗದಲ್ಲಿನ ಮಳೆ ಪ್ರಮಾಣ; ಜಿಲ್ಲೆಯ ಜಲಾಶಯಗಳ ನೀರಿನ ಮಟ್ಟ...

ಶುಂಠಿ ಬೆಳೆಗೆ ಅತ್ಯಂತ ಹೆಚ್ಚು ರಾಸಾಯನಿಕ ಬಳಕೆ ಮಾಡಲಾಗುತ್ತದೆ. ಯಾವ ರೀತಿ ರೋಗಗಳು ಬರುತ್ತದೆಯೋ ಅದಕ್ಕೆ ತಕ್ಕಂತೆ ಔಷಧಗಳನ್ನು ಹೊಡೆಯಲಾಗುತ್ತದೆ. ಎಲ್ಲಾ ಬೆಳೆಗಳಿಂತ ಶುಂಠಿ ಬೆಳೆಗೆ ಅತೀ ಹೆಚ್ಚು ರಾಸಾಯನಿಕ ಔಷಧಗಳನ್ನು ಸಿಂಪಡಿಸಲಾಗುತ್ತದೆ.

ಎಷ್ಟೇ ಆರೈಕೆ ಮಾಡಿದರೂ ಶುಂಠಿ ಬೆಳೆಗೆ ಕೊಳೆರೋಗ ಭಾದಿಸುತ್ತಿದ್ದು, ರೈತರಲ್ಲಿ ಆತಂಕ ಹೆಚ್ಚಾಗಿದೆ. ಲಾಕ್ ಡೌನ್, ಸೀಲ್ ಡೌನ್ ಗಳ ನಡುವೆ ರೈತರ ಬೆಳೆಗೂ ಬೆಲೆ ಡೌನ್ ಆಗಿದ್ದು, ಇದರಿಂದ ರೈತರು ಇನ್ನಷ್ಟು ಕಂಗಲಾಗಿದ್ದಾರೆ.

ಬಾಡುಕೊಳೆ, ಹಸಿರು ಕೊಳೆ, ಕೆಂಪು ಕೊಳೆ ರೋಗಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಸಸಿಯೂ ಬೇರು ಸಮೇತ ಸುಟ್ಟುಹೊಗುತ್ತಿದೆ. ರೈತರು ಕೊರೊನಾ ಸಂಕಷ್ಟದ ನಡುವೆ ಬೆಳೆಯೂ ಈ ರೀತಿ ನಾಶವಾದಾರೆ ಅತ್ಯಂತ ಆತಂಕದ ಸ್ಥಿತಿ ಎದುರಾಗುತ್ತದೆ ಕೃಷಿ ಇಲಾಖೆ ಸೂಕ್ತ ಮಾರ್ಗದರ್ಶನ ಪಡೆದು ರೈತರು ಬೆಳೆಯನ್ನು ರಕ್ಷಿಸಿಕೊಳ್ಳಲು ಮುಂದಾಗಬೇಕಿದೆ.

ಶುಂಠಿ ಬೆಳೆಗಾರರಾದ ರಾಘವೇಂದ್ರ ಮಾತನಾಡಿ, "ಶುಂಠಿ ಬೆಳೆಯೂ ಎಷ್ಟು ಲಾಭದಾಯಕವೋ‌ ಅಷ್ಟೆ ಸೂಕ್ಷ್ಮ ಬೆಳೆಯಾಗಿದ್ದೂ ಸ್ವಲ್ಪ ನಿರ್ಲಕ್ಷ್ಯ ತೊರಿದರು ಇಡೀ ಬೆಳೆಯೇ ನಾಶವಾಗುತ್ತದೆ ಅತೀ ಹೆಚ್ಚು ಬಂಡವಾಳ ಹಾಕುತ್ತೇವೆ ರೈತರ ಶ್ರಮಕ್ಕೆ ತಕ್ಕಂತೆ ಬೆಲೆ ಸಿಕ್ಕರೆ ಸಂತೋಷ " ಎಂದರು.

English summary
Ginger crops have been grown in thousands of hectares in the Malenadu area of ​​Shivamogga district, but the worsening of the disease is causing concern among farmers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X