ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೈಜ ಭಾರತೀಯರು ನಕಲಿ ರೈತ ಹೋರಾಟ ಬೆಂಬಲಿಸಬಾರದು; ಈಶ್ವರಪ್ಪ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಫೆಬ್ರವರಿ 09; "ಕೃಷಿ ಕಾಯ್ದೆ ರೈತರ ಒಳಿತಿಗಾಗಿ ಇದೆ. ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರು ನಿಜವಾದ ರೈತರಲ್ಲ. ನೈಜ ಭಾರತೀಯರು ನಕಲಿ ರೈತರ ಹೋರಾಟಕ್ಕೆ ಬೆಂಬಲಿಸಬಾರದು" ಎಂದು ಗ್ರಾಮೀಣಾಭಿವೃದ್ಧಿ ಮತ್ತು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದರು.

ಮಂಗಳವಾರ ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಈಶ್ವರಪ್ಪ, "ರೈತರ ಹೆಸರಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ವಿದೇಶಿ ವ್ಯಕ್ತಿಗಳ ಕೈವಾಡ ಇರುವುದು ಬಹಿರಂಗವಾಗುತ್ತಿದೆ. ಪ್ರತಿಭಟನೆಯನ್ನು ವಿದೇಶಿಯರು ಹೈಜಾಕ್ ಮಾಡಿರುವುದು ಬಹಿರಂಗವಾಗಿದೆ" ಎಂದರು.

ಕಾಂಗ್ರೆಸ್ ರಕ್ತದಲ್ಲಿ ಕೃಷಿ ಮಾಡುತ್ತಿದೆ: ಕೃಷಿ ಸಚಿವರ ಆರೋಪಕಾಂಗ್ರೆಸ್ ರಕ್ತದಲ್ಲಿ ಕೃಷಿ ಮಾಡುತ್ತಿದೆ: ಕೃಷಿ ಸಚಿವರ ಆರೋಪ

"ಪ್ರಧಾನಿ ಆಗಿದ್ದ ವೇಳೆ ಮನಮೋಹನ್ ಸಿಂಗ್ ಅವರು ಕೃಷಿ ಕಾಯ್ದೆ ಕುರಿತು ಪ್ರಸ್ತಾಪ ಮಾಡಿದ್ದರು. ಮಾಜಿ ಪ್ರಧಾನಿ ಹೆಚ್‍. ಡಿ. ದೇವೇಗೌಡ ಅವರು ಈ ಕುರಿತು ಪ್ರಸ್ತಾಪ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಸದನದಲ್ಲಿ ಕೃಷಿ ಕಾಯ್ದೆ ಕುರಿತು ವಿವರವಾಗಿ ಪ್ರಸ್ತಾಪಿಸಿದ್ದಾರೆ" ಎಂದು ತಿಳಿಸಿದರು.

ಭಾರತದ ವಿವಾದಾತ್ಮಕ ಕೃಷಿ ಕಾಯ್ದೆಗಳಿಗೆ ಅಮೆರಿಕ ಬೆಂಬಲಭಾರತದ ವಿವಾದಾತ್ಮಕ ಕೃಷಿ ಕಾಯ್ದೆಗಳಿಗೆ ಅಮೆರಿಕ ಬೆಂಬಲ

 Real Indians Will Not Support Fake Farmers Protest Says Eshwarappa

ಸುಮ್ಮನಿದ್ದ ವಿಪಕ್ಷಗಳು; "ಸಂಸತ್‌ನಲ್ಲಿ ಮಸೂದೆ ಪಾಸ್ ಮಾಡುವ ಸಂದರ್ಭದಲ್ಲಿ ವಿಪಕ್ಷಗಳು ಸುಮ್ಮನಿದ್ದವು. ಈಗ ವಿಧ್ವಂಸಕ ಕೃತ್ಯ ನಡೆಸುತ್ತಿರುವ ವಿದ್ರೋಹಿಗಳ ಪ್ರತಿಭಟನೆ ಪರವಾಗಿ ವಹಿಸಿಕೊಂಡು ಮಾತನಾಡುತ್ತಿದ್ದಾರೆ. ರಾಜಕೀಯ ಬಣ್ಣ ಬಳಸಿ ವಿಪಕ್ಷಗಳು ಸುಮ್ಮನಿರುವುದು ಒಳ್ಳೆಯದಲ್ಲ" ಎಂದರು.

ಕೃಷಿ ಕ್ಷೇತ್ರ, ರೈತ ಕಲ್ಯಾಣಕ್ಕಾಗಿ ಬಜೆಟ್ ಘೋಷಿಸಿದ 9 ಕ್ರಮಗಳು ಕೃಷಿ ಕ್ಷೇತ್ರ, ರೈತ ಕಲ್ಯಾಣಕ್ಕಾಗಿ ಬಜೆಟ್ ಘೋಷಿಸಿದ 9 ಕ್ರಮಗಳು

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ನೀತಿಗಳನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ದೆಹಲಿಯಲ್ಲಿ ಪ್ರತಿಭಟನೆ ಮುಂದುವರೆದಿದೆ. ಜನವರಿ 26ರಂದು ರೈತರು ಟ್ರಾಕ್ಟರ್ ಪರೇಡ್ ನಡೆಸುವಾಗ ದೆಹಲಿಯಲ್ಲಿ ಹಿಂಸಾಚಾರ ನಡೆದಿತ್ತು.

ರೈತರ ಪ್ರತಿಭಟನೆಗೆ ವಿದೇಶದಿಂದ ಹಣ ಬರುತ್ತಿದೆ. ಹೋರಾಟ ಮಾಡುತ್ತಿರುವುದು ರೈತರಲ್ಲ ಎಂಬುದು ಸೇರಿದಂತೆ ಹಲವಾರು ಆರೋಪಗಳನ್ನು ಮಾಡಲಾಗುತ್ತಿದೆ. ಕರ್ನಾಟಕ ರೈತ ಸಂಘ ಸಹ ಹೋರಾಟಕ್ಕೆ ಬೆಂಬಲ ನೀಡಿದೆ.

English summary
Rural development and Panchayat Raj minister of Karnataka K. S. Eshwarappa said that real Indians will not support fake farmers protest in Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X