ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಲೆನಾಡಲ್ಲಿ ಭಾರೀ ಮಳೆ: ಅಡಿಕೆ ಕೊಳೆ ನಿರ್ವಹಣೆಗೆ ಮುನ್ನೆಚ್ಚರಿಕಾ ಕ್ರಮ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಜೂನ್.29: ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಸತತವಾಗಿ ಮಳೆ ಬೀಳುತ್ತಿರುವುದರಿಂದ ಅಡಿಕೆಯಲ್ಲಿ ಕೊಳೆ ರೋಗ, ಸುಳಿ ಕೊಳೆ ಮತ್ತು ತಿರಿ ಕೊಳೆ ರೋಗದಂತಹ ಸಮಸ್ಯೆಗಳು ಎದುರಾಗಬಹುದು.

ಜೂನ್ ನಿಂದ ಸೆಪ್ಟೆಂಬರ್‍ ವರೆಗೆ ಈ ರೋಗ ಬಾಧೆ ತೀವ್ರವಾಗಿರುತ್ತದೆ ಎಂದು ಶಿವಮೊಗ್ಗ ನವಿಲೆ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಅಡಿಕೆ ಸಂಶೋಧನಾ ಕೇಂದ್ರ, ಮತ್ತು ಗ್ರಾಮೀಣ ಕೃಷಿ ಹವಾಮಾನ ಮುನ್ಸೂಚನಾ ಘಟಕ ಪ್ರಕಟಿಸಿದೆ.

ಕೇಂದ್ರ ಸರ್ಕಾರದಿಂದ ಅಡಿಕೆ ಬೆಳೆಗಾರರಿಗೆ ಗಂಡಾಂತರ: ಐವನ್ ಡಿಸೋಜಾ
ನಿರಂತರವಾಗಿ ಸುರಿಯುವ ಮಳೆ, ಬಿಸಿಲು ಮತ್ತು ಮೋಡಕವಿದ ವಾತಾವರಣವಿದ್ದು, ಕಡಿಮೆ ಉಷ್ಣಾಂಶ (18-220 ಸೆಂ.) ಹಾಗೂ ಶೇ. 90ಕ್ಕಿಂತ ಹೆಚ್ಚಿನ ತೇವಾಂಶ ಅಡಿಕೆ ಕೊಳೆ ರೋಗಗಳು ಪ್ರಾರಂಭವಾಗಲು ಪೂರಕ ಅಂಶಗಳಾಗಿರುತ್ತವೆ.

Rainfall is continuing in Malenadu and Coastal areas

ಈ ಸಂದರ್ಭದಲ್ಲಿ ಅಡಿಕೆ ಕಾಯಿ ಮತ್ತು ತೊಟ್ಟಿನ ಭಾಗಗಳಲ್ಲಿ ಕೊಳೆ ಬಂದು ನಿಶ್ಯಕ್ತವಾಗಿ ಎಳೆಕಾಯಿಗಳು ಉದುರುವ ಸಂಭವವಿರುತ್ತದೆ. ಸೂಕ್ತ ನಿರ್ವಹಣೆಗೆ ಒಣಗಿದ, ಸತ್ತ ಹಿಂಗಾರಗಳನ್ನು ತೆಗೆದು ನಾಶಪಡಿಸಬೇಕು.

ಉದುರಿದ ಕಾಯಿಗಳನ್ನು ಆರಿಸಿ ಮಣ್ಣಿನಿಂದ ಮುಚ್ಚಬೇಕು, ತೋಟಗಳಲ್ಲಿ ಅಂತರ ಬೆಳೆಗಳ (ಕೋಕೋ, ಜಾಯಿಕಾಯಿ, ಲವಂಗ ಇತ್ಯಾದಿ) ಹೆಚ್ಚುವರಿ ರೆಂಬೆಗಳನ್ನು ಕತ್ತರಿಸಿ ತೆಗೆದು ಗಾಳಿಯಾಡುವಂತೆ ಮಾಡಬೇಕು.

ಬಸಿಗಾಲುವೆಗಳನ್ನು ಸ್ವಚ್ಛಗೊಳಿಸಿ ತೋಟದಲ್ಲಿ ನೀರು ನಿಲ್ಲದಂತೆ ವ್ಯವಸ್ಥೆ ಮಾಡುವುದು ಸೂಕ್ತ. ಸ್ಥಿರೀಕರಿಸಿದ ಶೇ. 1ರ ಬೋರ್ಡೋ ದ್ರಾವಣವನ್ನು 30-45 ದಿನಗಳ ಅಂತರದಲ್ಲಿ ಎರಡು ಬಾರಿ ಗೊಂಚಲುಗಳಿಗೆ ಹವಾಮಾನದ ಮುನ್ಸೂಚನೆಯಂತೆ ಸಿಂಪಡಿಸುವುದು ಅಗತ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

English summary
Rainfall is continuing in Malenadu and Coastal areas. This can be caused by problems such as nut disease. From June to September the disease is severe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X