ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಈ ಚುನಾವಣೆಯಲ್ಲಿ ರಾಘವೇಂದ್ರ ಅವರನ್ನು ಎಕ್ಸ್ ಪೋರ್ಟ್ ಮಾಡುತ್ತೇವೆ'

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಏಪ್ರಿಲ್ 10: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಅವರು ಜೆಡಿಎಸ್ ಕುಟುಂಬ ರಾಜಕಾರಣ ಮಾಡುತ್ತಿದೆ ಎನ್ನುತ್ತಿದ್ದಾರೆ . ಆದರೆ ಯಡಿಯೂರಪ್ಪ ಕುಟುಂಬ ರಾಜಕಾರಣ ಮಾಡುತ್ತಿಲ್ಲವೇ ಎಂದು ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಪ್ರಶ್ನಿಸಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಶಿವಮೊಗ್ಗದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನ ಈ ಬಾರಿ ದೇಶವನ್ನು ಬಿಜೆಪಿ ಮುಕ್ತ ಮಾಡಲು ತೀರ್ಮಾನ ಮಾಡಿದ್ದಾರೆ. ಬಿಜೆಪಿಯವರು ಚುನಾವಣೆಯ ಪ್ರಣಾಳಿಕೆಯಲ್ಲಿ ಮತ್ತೆ ರಾಮನ ಜಪ ಮಾಡಲು ಆರಂಭಿಸಿದ್ದಾರೆ. ದೇಶದ ಆರ್ಥಿಕ ಸ್ಥಿತಿ ಹದಗೆಡಿಸಿರುವುದೇ ಬಿಜೆಪಿ ಸಾಧನೆ ಎಂದು ಹರಿಹಾಯ್ದರು.

 ಬಿಜೆಪಿಗೆ ಸೇರ್ಪಡೆಯಾದ ತೀರ್ಥಹಳ್ಳಿ ಜೆಡಿಎಸ್ ಅಧ್ಯಕ್ಷ ಮದನ್ ಹೇಳಿದ್ದೇನು? ಬಿಜೆಪಿಗೆ ಸೇರ್ಪಡೆಯಾದ ತೀರ್ಥಹಳ್ಳಿ ಜೆಡಿಎಸ್ ಅಧ್ಯಕ್ಷ ಮದನ್ ಹೇಳಿದ್ದೇನು?

ರಾಘವೇಂದ್ರ ಒಮ್ಮೆಯಾದರೂ ಸಂಸತ್ತಿನಲ್ಲಿ ಮಾತನಾಡಿದ್ದಾರಾ ಸ್ಪಷ್ಟಪಡಿಸಲಿ ಎಂದ ಮಧು, ಬಿಜೆಪಿಯನ್ನು ಗೆಲ್ಲಿಸಿದರೆ ಅವರು ಇಡೀ ದೇಶವನ್ನೇ ದಿಕ್ಕಾಪಾಲು ಮಾಡುತ್ತಾರೆ. ಕಾಶ್ಮೀರದಲ್ಲಿ ಯೋಧರು ಹುತಾತ್ಮರಾಗುವುದಕ್ಕೆ ಕಾರಣವೇ ಬಿಜೆಪಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

Raghavendra will be expelled from the polls:Madhu Bangarappa

ಶಿವಮೊಗ್ಗ ಜಿಲ್ಲೆಯಲ್ಲಿ ಯಡಿಯೂರಪ್ಪ ಅವರು ರಾಘವೇಂದ್ರ ಅವರನ್ನು ಹೊರತುಪಡಿಸಿ ಬೇರೆ ಯಾವ ನಾಯಕರನ್ನು ಬೆಳೆಸಿದ್ದಾರೆ ಎಂದು ಬಿಎಸ್ ವೈ ವಿರುದ್ಧ ಕಿಡಿಕಾರಿದ ಮಧು, ಕೇಂದ್ರ‌ ಸರ್ಕಾರ ಐಟಿ ದಾಳಿ ಮೂಲಕ‌ ಮುಖಂಡರನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಶಿವಮೊಗ್ಗದಲ್ಲಿ ಒಬ್ಬರ ಮನೆ ಮೇಲೆ‌ ಐಟಿ ದಾಳಿಯಾಗಿ ಹಣ ಸಿಕ್ಕಿತ್ತು.‌ ಆದರೆ ಆ ಹಣ ಮಧುಬಂಗಾರಪ್ಪ ಅವರಿಗೆ ಸೇರಿದ್ದು ಎಂದು ಬಿಂಬಿಸುವ ಕೆಲಸವಾಗುತ್ತಿದೆ ಎಂದು ಆರೋಪಿಸಿದರು.

ಶಿವಮೊಗ್ಗದ ಜನೆತೆಗೆ ಕೃತಜ್ಞತೆ ತಿಳಿಸಿದ ಮಧು ಬಂಗಾರಪ್ಪ..!

2004 ರಲ್ಲಿ ಬಂಗಾರಪ್ಪ‌ ಅವರು ಬಿಜೆಪಿಗೆ ಬರದಿದ್ದರೆ ಯಡಿಯೂರಪ್ಪ, ಈಶ್ವರಪ್ಪ ಎಂದರೆ ಯಾರೂ ಎಂದು ಜನರಿಗೆ ಗೊತ್ತಾಗುತ್ತಿರಲಿಲ್ಲ. ರಾಘವೇಂದ್ರ ನನಗೆ ಇಂಪೋರ್ಟೆಡ್ ಅಭ್ಯರ್ಥಿ. ಈ ಬಾರಿ ಚುನಾವಣೆಯಲ್ಲಿ ಅವರನ್ನು ಎಕ್ಸ್ ಪೋರ್ಟ್ ಮಾಡುತ್ತೇವೆ ಎಂದು ಮಧು ಬಂಗಾರಪ್ಪ ವ್ಯಂಗ್ಯವಾಡಿದರು.

English summary
Lok Sabha Elections 2019:Madhu Bangarappa Said that this time Raghavendra will be expelled from the polls. Raghavendra is an imported candidate for me.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X