ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

1 ವರ್ಷದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣ

|
Google Oneindia Kannada News

ಶಿವಮೊಗ್ಗ, ಜನವರಿ 04: "ಸೋಗಾನೆಯಲ್ಲಿ ನಡೆಯುತ್ತಿರುವ ವಿಮಾನ ನಿಲ್ದಾಣ ಕಾಮಗಾರಿಯನ್ನು ಮುಂದಿನ ಒಂದು ವರ್ಷದ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ" ಎಂದು ಉಪಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಇಲಾಖೆ ಸಚಿವ ಗೋವಿಂದ ಎಂ. ಕಾರಜೋಳ ಹೇಳಿದರು.

ಶಿವಮೊಗ್ಗ ಪ್ರವಾಸದಲ್ಲಿರುವ ಸಚಿವರು ಸೋಮವಾರ ಶಿವಮೊಗ್ಗ ಸಮೀಪದ ಸೋಗಾನೆಯ ವಿಮಾನ ನಿಲ್ದಾಣ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದರು. "ಈ ವಿಮಾನ ನಿಲ್ದಾಣದಲ್ಲಿ ಲಘು ಮತ್ತು ಸಾಮಾನ್ಯ ವಿಮಾನಗಳು ಹಗಲಿರುಳು ಏರಿಳಿಯುವ ವ್ಯವಸ್ಥೆ ಕಲ್ಪಿಸಲಾಗುವುದು" ಎಂದರು.

ಹುಬ್ಬಳ್ಳಿ, ಕಲಬುರಗಿಯಿಂದ ತಿರುಪತಿಗೆ ವಿಮಾನ; ವೇಳಾಪಟ್ಟಿ ಹುಬ್ಬಳ್ಳಿ, ಕಲಬುರಗಿಯಿಂದ ತಿರುಪತಿಗೆ ವಿಮಾನ; ವೇಳಾಪಟ್ಟಿ

"770 ಎಕರೆ ಪ್ರದೇಶದಲ್ಲಿ ಸುಮಾರು 384ಕೋಟಿ ರೂ. ಗಳ ವೆಚ್ಚದಲ್ಲಿ 3.2 ಕಿ. ಮೀ ರನ್‍ ವೇ, ಸುಸಜ್ಜಿತ ಟರ್ಮಿನಲ್ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನಿರ್ಮಾಣಗೊಳ್ಳುತ್ತಿರುವ ಸುಸಜ್ಜಿತ ನಿಲ್ದಾಣ ಕಾರ್ಯಕ್ಕೆ ಕಳೆದ ಮೂರು ತಿಂಗಳ ಹಿಂದೆ ಚಾಲನೆ ನೀಡಲಾಗಿದೆ" ಎಂದು ಸಚಿವರು ತಿಳಿಸಿದರು.

ಶಿವಮೊಗ್ಗ; ಪ್ರವಾಸಿಗರನ್ನು ಸೆಳೆಯಲು ಮತ್ತಷ್ಟು ಯೋಜನೆ ಶಿವಮೊಗ್ಗ; ಪ್ರವಾಸಿಗರನ್ನು ಸೆಳೆಯಲು ಮತ್ತಷ್ಟು ಯೋಜನೆ

"ವಿಮಾನ ನಿಲ್ದಾಣ ಕಾಮಗಾರಿ ಮುಂದುವರೆಯಲು ಯಾವುದೇ ಅಡ್ಡಿಗಳಿಲ್ಲ. ಕೇಂದ್ರ ವಿಮಾನಯಾನ ಮಂತ್ರಾಲಯದ ಅನುಮೋದನೆಯೂ ದೊರೆತಿದೆ. ಕಾಮಗಾರಿ ಪೂರ್ಣಗೊಳಿಸಿದ ನಂತರದಲ್ಲಿ ಉಡಾನ್ ಯೋಜನೆಯಡಿ ಸೌಲಭ್ಯವನ್ನು ಪಡೆಯಲು ಪ್ರಯತ್ನ ನಡೆಸಲಾಗುತ್ತದೆ" ಎಂದು ಸಚಿವರು ಭರವಸೆ ನೀಡಿದರು.

ಶಿವಮೊಗ್ಗ ವಿಮಾನ ನಿಲ್ದಾಣ; ಯೋಜನೆಯ ಮುಖ್ಯಾಂಶಗಳುಶಿವಮೊಗ್ಗ ವಿಮಾನ ನಿಲ್ದಾಣ; ಯೋಜನೆಯ ಮುಖ್ಯಾಂಶಗಳು

ಶಂಕು ಸ್ಥಾಪನೆ ಮಾಡಲಾಗುತ್ತದೆ

ಶಂಕು ಸ್ಥಾಪನೆ ಮಾಡಲಾಗುತ್ತದೆ

"ಬಿ. ಎಸ್. ಯಡಿಯೂರಪ್ಪ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ವಿಜಯಪುರ ಮತ್ತು ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ನಂತರ ಅವಧಿಯಲ್ಲಿ ನೆನೆಗುದಿಗೆ ಬಿದ್ದಿದ್ದ ಕಾಮಗಾರಿಗೆ ಪುನಃ ಚಾಲನೆ ದೊರೆತು ಕಾರ್ಯಾರಂಭಗೊಂಡಿದೆ. ಸಂಕ್ರಾಂತಿಯ ದಿನ 220 ಕೋಟಿ ರೂ. ಗಳ ವೆಚ್ಚದಲ್ಲಿ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಾಗುತ್ತದೆ" ಎಂದು ಗೋವಿಂದ ಎಂ. ಕಾರಜೋಳ ಹೇಳಿದರು.

ಕಾಮಗಾರಿಗೆ ಯಾವುದೇ ಅಡಚಣೆ ಇಲ್ಲ

ಕಾಮಗಾರಿಗೆ ಯಾವುದೇ ಅಡಚಣೆ ಇಲ್ಲ

"ಈ ವಿಮಾನ ನಿಲ್ದಾಣ ಕಾಮಗಾರಿ ಮುಂದುವರೆಯಲು ಯಾವುದೇ ಅಡ್ಡಿ ಆಕ್ಷೇಪಣೆಗಳಿಲ್ಲ. ಕೇಂದ್ರ ಏವಿಯೇಶನ್ ಮಂತ್ರಾಲಯದ ಅನುಮೋದನೆ ಸಹ ದೊರೆತಿದೆ. ಮುಂದಿನ ದಿನಗಳಲ್ಲಿ ನಿಲ್ದಾಣಕ್ಕೆ ಪೂರಕವಾಗಿರುವ ಯಂತ್ರಗಳನ್ನು ಅಳವಡಿಸುವ ಭರವಸೆ ಇದೆ. ಕಾಮಗಾರಿ ಪೂರ್ಣಗೊಳಿಸಿದ ನಂತರದಲ್ಲಿ ‘ಉಡಾನ್' ಯೋಜನೆಯಡಿ ಸೌಲಭ್ಯವನ್ನು ಪಡೆಯಲು ಯತ್ನಿಸಲಾಗುವುದು" ಎಂದು ಸಚಿವರು ಭರವಸೆ ನೀಡಿದರು.

ಇನ್ನಷ್ಟು ಅಭಿವೃದ್ಧಿ ಕೆಲಸಗಳು

ಇನ್ನಷ್ಟು ಅಭಿವೃದ್ಧಿ ಕೆಲಸಗಳು

"ಕಳೆದ 2 ವರ್ಷಗಳಲ್ಲಿ ಆಡಳಿತಾರೂಢ ಸರ್ಕಾರವು ಪ್ರವಾಹ, ಅತಿವೃಷ್ಠಿ, ಕೋವಿಡ್‌ನಂತಹ ಅನೇಕ ಸಮಸ್ಯೆ-ಸವಾಲುಗಳನ್ನು ಎದುರಿಸಿದೆ. 2019ರಲ್ಲಿ 35,000ಕೋಟಿ ರೂ. ಹಾಗೂ 2020ರಲ್ಲಿ 25,000ಕೋಟಿ ರೂ. ಸೇರಿದಂತೆ ಸುಮಾರು 60,000ಕೋಟಿ ಮೊತ್ತದ ರಸ್ತೆ, ಸೇತುವೆ, ಸಾರ್ವಜನಿಕ ಆಸ್ತಿ, ಬೆಳೆ ಮುಂತಾದವುಗಳಿಂದಾಗಿ ನಷ್ಟ ಉಂಟಾಗಿದೆ. ಕೊರೋನ ಸೋಂಕು ರಾಜ್ಯದಲ್ಲಿ ಇಳಿಮುಖವಾಗುತ್ತಿರುವುದರಿಂದ ರಾಜ್ಯದ ಬೊಕ್ಕಸಕ್ಕೆ ಹರಿದು ಬರುತ್ತಿರುವ ಆದಾಯದಲ್ಲಿ ಏರಿಕೆಯಾಗಿರುವುದರಿಂದ ಮುಂದಿನ ದಿನಗಳಲ್ಲಿ ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಇನ್ನಷ್ಟು ಅನುದಾನ ಕಾಯ್ದಿರಿಸಲಾಗುವುದು" ಎಂದು ಸಚಿವರು ಮಾಹಿತಿ ನೀಡಿದರು.

ಬಜೆಟ್‌ನಲ್ಲಿ ಅನುದಾನ ಕೇಳಲಾಗುತ್ತದೆ

ಬಜೆಟ್‌ನಲ್ಲಿ ಅನುದಾನ ಕೇಳಲಾಗುತ್ತದೆ

"9601ಕಿ. ಮೀ. ಜಿಲ್ಲಾ ಮುಖ್ಯ ರಸ್ತೆಯನ್ನು ರಾಜ್ಯ ರಸ್ತೆಯನ್ನಾಗಿ ಹಾಗೂ 15510 ಕಿ. ಮೀ. ಗ್ರಾಮೀಣ ರಸ್ತೆಯನ್ನು ಜಿಲ್ಲಾ ಮುಖ್ಯ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಈ ರಸ್ತೆಗಳನ್ನು ಸಂಚಾರಕ್ಕೆ ಅನುಕೂಲವಾಗುವಂತೆ ರೂಪಿಸಲಾಗುವುದು ಅಲ್ಲದೆ ಅಗತ್ಯವಿರುವಲ್ಲಿ ದುರಸ್ತಿಗೊಳಿಸಲು ಮುಂದಿನ ಬಜೆಟ್‍ನಲ್ಲಿ ಅನುದಾನ ಕಾಯ್ದಿರಿಸಲು ಮುಖ್ಯಮಂತ್ರಿಗಳನ್ನು ಕೋರಲಾಗುವುದು" ಎಂದು ಸಚಿವರು ತಿಳಿಸಿದರು.

English summary
PWD minister of Karnataka Govind M. Karjol inspected the Shivamogga airport works. Minister directed the officials to complete work with in one year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X