ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಹ್ಯಾದ್ರಿ ಉತ್ಸವ:ಪ್ರವಾಸಿ ತಾಣಗಳ ವೀಕ್ಷಣೆಗೆ ಹೆಲಿಕ್ಯಾಪ್ಟರ್ ಆಯೋಜನೆ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಜನವರಿ 15: ಸಹ್ಯಾದ್ರಿ ಉತ್ಸವ ಜನವರಿ 23ರಿಂದ 27ರವರೆಗೆ ನಡೆಯುತ್ತಿದ್ದು,ಉತ್ಸವದ ಅಂಗವಾಗಿ ಹೆಲಿಕ್ಯಾಪ್ಟರ್ ಮೂಲಕ ಇಲ್ಲಿನ ಪ್ರವಾಸಿ ತಾಣಗಳನ್ನು ವೀಕ್ಷಿಸುವ ಅವಕಾಶವನ್ನು ಸಾರ್ವಜನಿಕರಿಗೆ ಕಲ್ಪಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ತಿಳಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಅವರು ಉತ್ಸವದಲ್ಲಿ ಕೆಸರು ಗದ್ದೆ ಓಟ, ಸೈಕಲ್ ಸ್ಪರ್ಧೆ, ಎತ್ತಿನಗಾಡಿ ಓಟ, ದೇಹದಾರ್ಢ್ಯ ಸ್ಪರ್ಧೆ, ಲಾನ್ ಟೆನ್ನಿಸ್, ಈಜು, ಸ್ಕೇಟಿಂಗ್ ಸ್ಪರ್ಧೆಗಳನ್ನೂ ಆಯೋಜಿಸಲಾಗುತ್ತಿದೆ ಎಂದರು.

ಆಗಸದಿಂದ ಉಡುಪಿಯ ಕಣ್ತುಂಬಿಕೊಳ್ಳಲು ಆರಂಭವಾಗಿದೆ ಹೆಲಿಟೂರಿಸಂಆಗಸದಿಂದ ಉಡುಪಿಯ ಕಣ್ತುಂಬಿಕೊಳ್ಳಲು ಆರಂಭವಾಗಿದೆ ಹೆಲಿಟೂರಿಸಂ

ಉತ್ಸವದ ಮೂಲಕ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಲು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಸಬ್ಸಿಡಿ ದರದಲ್ಲಿ ಬಸ್ ಮೂಲಕ ಟೂರ್ ಪ್ಯಾಕೇಜ್ ಮಾಡಲಾಗಿದೆ. ಒಟ್ಟು 7 ಮಾರ್ಗಗಳನ್ನು ಮಾಡಲಾಗಿದ್ದು, ಕೇವಲ 100ರೂ. ದರ ನಿಗದಿಪಡಿಸಲಾಗಿದೆ.

Public is given opportunity to view tourist destinations through the Helicopter in Shivamogga

ಸೈನ್ಸ್ ಮೈದಾನದಿಂದ ಪ್ರತಿದಿನ ಮುಂಜಾನೆ 7.30ಗಂಟೆಗೆ ಬಸ್ ಹೊರಟು ಸಂಜೆ 5.30ಕ್ಕೆ ವಾಪಾಸಾಗಲಿದೆ. ಉತ್ತಮ ಗುಣಮಟ್ಟದ ಖಾಸಗಿ ಬಸ್ ಗಳ ಮೂಲಕ ಪ್ರವಾಸ ಆಯೋಜಿಸಲಾಗುವುದು.

ಮಧ್ಯಾಹ್ನದ ಊಟದ ವೆಚ್ಚವನ್ನು ಸಹ ಭರಿಸಲಾಗುವುದು. ಸಾರ್ವಜನಿಕರು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಕಡಿಮೆ ವೆಚ್ಚದಲ್ಲಿ ಭೇಟಿ ನೀಡಲು ಇದು ಉತ್ತಮ ಅವಕಾಶವಾಗಿದೆ. ಚಾರಣಪ್ರಿಯರಿಗಾಗಿ ಚಾರಣ ಮಾರ್ಗವನ್ನು ಗುರುತಿಸಿ ಗೈಡೆಡ್ ಚಾರಣ ಮಾಡಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

English summary
Public is given opportunity to view tourist destinations through the Helicopter as part of the Sahyadri festival in Shivamogga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X