ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗದಲ್ಲಿ ವೃದ್ಧೆಗೆ ಮಾಸ್ಕ್ ನೀಡಿದ ಪಿಎಸ್ಐ ಕಾರ್ಯಕ್ಕೆ ಶ್ಲಾಘನೆ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಮಾರ್ಚ್ 29: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಇಡೀ ದೇಶವೇ ಲಾಕ್‌ಡೌನ್ ಆಗಿದ್ದ ಸಂದರ್ಭದಲ್ಲಿ ಎಲ್ಲೆಂದರಲ್ಲಿ ಓಡಾಡುವ ಜನರಿಗೆ ಪೊಲೀಸರು ಲಾಠಿ ರುಚಿ ತೋರಿಸಿರುವುದು ಸಾಮಾನ್ಯವಾಗಿದೆ ಆದರೆ ಶಿಕಾರಿಪುರ ಪಟ್ಟಣ ಠಾಣೆ ಪಿಎಸ್ಐ ರಾಜುರೆಡ್ಡಿ ವೃದ್ಧ ಮಹಿಳೆಯೊಬ್ಬರಿಗೆ ಆಹಾರ ಪದಾರ್ಥ ಮತ್ತು ಮಾಸ್ಕ್ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಶಿಕಾರಿಪುರ ಪಟ್ಟಣದ ದೊಡ್ಡಪೇಟೆ ರಸ್ತೆಯಲ್ಲಿ ಶುಕ್ರವಾರ ಪೊಲೀಸ್ ಗಸ್ತು ವಾಹನದಲ್ಲಿ ಹೋಗುತ್ತಿರುವಾಗ ಮನೆಯ ಕಟ್ಟೆ ಮೇಲೆ ಕುಳಿತಿದ್ದ ವೃದ್ಧ ಮಹಿಳೆ ಬಳಿ ತೆರಳಿದ ಪಿಎಸ್ಐ, ಆಕೆಗೆ ಮೊದಲು ನೀರು, ಜ್ಯೂಸ್ ಕುಡಿಯಲು ನೀಡಿದ್ದಲ್ಲದೇ ಹಣ್ಣನ್ನೂ ನೀಡಿ ಆಕೆಗೆ ಮಾಸ್ಕ್ ನೀಡಿದರು.

ಕೊರೊನಾ ಪರಿಹಾರಕ್ಕೆ ಸಚಿವ ಕೆ.ಎಸ್ ಈಶ್ವರಪ್ಪ ಕೊಟ್ರು 4 ತಿಂಗಳ ವೇತನಕೊರೊನಾ ಪರಿಹಾರಕ್ಕೆ ಸಚಿವ ಕೆ.ಎಸ್ ಈಶ್ವರಪ್ಪ ಕೊಟ್ರು 4 ತಿಂಗಳ ವೇತನ

ಪಿಎಸ್ಐ ಜೊತೆಯಲ್ಲಿದ್ದ ಸಿಬ್ಬಂದಿ ಮಲ್ಲೇಶಪ್ಪ ಮತ್ತಿತರರು ಆಕೆ ಯಾವ ಊರು, ಮಕ್ಕಳಿದ್ದಾರ ಎಂದು ವಿಚಾರಿಸಿ ಆಕೆಯ ಗ್ರಾಮವಾದ ತಾಲೂಕಿನ ಬಳೂರಿಗೆ ತೆರಳುವುದಕ್ಕೆ ವ್ಯವಸ್ಥೆ ಕಲ್ಪಿಸಿದರು.

PSI Gave Mask And Food To Old Woman In Shikaripura

ಶಿಕಾರಿಪುರ ತಾಲ್ಲೂಕಿನ ಬಹುತೇಕ ವ್ಯಾಟ್ಸಪ್ ಗ್ರೂಪ್‌ನಲ್ಲಿ ವಿಡಿಯೋ ಶೇರ್ ಆಗಿದ್ದು, ಬಹುತೇಕರು ಪೊಲೀಸರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೂರಾರು ಯುವಕರ ಸ್ಟೇಟಸ್‌ನಲ್ಲೂ ಅದು ಸ್ಥಾನ ಪಡೆದಿರುವುದು ವಿಶೇಷ. ಪಿಎಸ್ಐ ಕಾರ್ಯಕ್ಕೆ ತಹಶೀಲ್ದಾರ್, ಡಿವೈಎಸ್ಪಿ, ವೃತ್ತ ನಿರೀಕ್ಷಕರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

English summary
Shikaripura town PSI Raju Reddy has Shown humanity to an elderly woman by providing food and mask.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X