ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಮೊಗ್ಗ; ಅನ್‌ಲಾಕ್‌ ಆದರೂ ರಸ್ತೆಗೆ ಇಳಿದಿಲ್ಲ ಖಾಸಗಿ ಬಸ್‌ಗಳು

|
Google Oneindia Kannada News

ಶಿವಮೊಗ್ಗ, ಜುಲೈ 29; ಶಿವಮೊಗ್ಗದಲ್ಲಿ ಖಾಸಗಿ ಬಸ್ ಮಾಲೀಕರು ಸಂಪೂರ್ಣವಾಗಿ ಸೇವೆಯನ್ನು ಆರಂಭಿಸಿಲ್ಲ. ಅಪಾರವಾದ ನಷ್ಟ ಅನುಭವಿಸಿರುವ ಮಾಲೀಕರು ಅನ್‌ಲಾಕ್ ಘೋಷಣೆ ಬಳಿಕವೂ ರಸ್ತೆಗೆ ಬಸ್ ಇಳಿಸುವ ಪರಿಸ್ಥಿತಿಯಲ್ಲಿಲ್ಲ.

ಲಾಕ್‌ಡೌನ್, ತೈಲ ಬೆಲೆ ಏರಿಕೆ, ಕಾರ್ಮಿಕರ ವೇತನ ಹೆಚ್ಚಳ, ತೆರಿಗೆ ಇವುಗಳಿಂದಾಗಿ ಖಾಸಗಿ ಬಸ್ ಮಾಲೀಕರಿಗೆ ನಷ್ಟವಾಗಿದೆ. ಹೀಗಾಗಿ ಲಾಕ್‌ಡೌನ್ ಅವಧಿಯಲ್ಲಿ ನಿಲ್ಲಿಸಲಾದ ಬಸ್ ಸೇವೆ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿಲ್ಲ.

ಬೆಂಗಳೂರು-ಪಾಂಡಿಚೇರಿ ನಡುವೆ ಐಷಾರಾಮಿ ಬಸ್; ದರಪಟ್ಟಿ ಬೆಂಗಳೂರು-ಪಾಂಡಿಚೇರಿ ನಡುವೆ ಐಷಾರಾಮಿ ಬಸ್; ದರಪಟ್ಟಿ

ಎಎನ್‌ಐ ಜೊತೆ ಈ ಕುರಿತು ಎಸ್‌ಕೆಎಂಎಸ್ ಬಸ್‌ನ ಡಿ. ಬಿ. ಬಸವರಾಜಪ್ಪ ಮಾತನಾಡಿದ್ದಾರೆ. "ನಮಗೆ ಅಪಾರವಾದ ನಷ್ಟವಾಗಿದೆ. ರಾಜ್ಯ ಸರ್ಕಾರ ಖಾಸಗಿ ಬಸ್ ಮಾಲೀಕರನ್ನು ಪರಿಗಣನೆ ಮಾಡಿಲ್ಲ. ನಮ್ಮ ಮೇಲೆಯೇ ನಷ್ಟದ ಹೊರೆಯನ್ನು ಬಿಟ್ಟಿದ್ದಾರೆ" ಎಂದರು.

ರಾತ್ರೋರಾತ್ರಿ ಬಸ್ ತುಂಬಾ ಮಹಿಳೆಯರನ್ನು ಸಾಗಿಸಿದ ಮಂಗಳೂರಿನ ಆಸ್ಪತ್ರೆರಾತ್ರೋರಾತ್ರಿ ಬಸ್ ತುಂಬಾ ಮಹಿಳೆಯರನ್ನು ಸಾಗಿಸಿದ ಮಂಗಳೂರಿನ ಆಸ್ಪತ್ರೆ

Private Bus

"ನಮ್ಮ ಸೇವೆಯನ್ನು ಆರಂಭಿಸಲು ಕಷ್ಟವಾಗುತ್ತಿದೆ. ಪ್ರತಿ ಮೂರು ತಿಂಗಳಿಗೆ ಒಮ್ಮೆ ನಾವು 50 ಸಾವಿರ ರೂ. ತೆರಿಗೆ ಪಾವತಿ ಮಾಡುತ್ತೇವೆ. ಡ್ರೈವರ್ ಮತ್ತು ಕಂಡಕ್ಟರ್‌ಗಳಿಗೆ ವೇತನ ನೀಡಬೇಕು. ಬಸ್ ನಿರ್ವಹಣಾ ವೆಚ್ಚವನ್ನು ನೋಡಿಕೊಳ್ಳಬೇಕು. ಡೀಸೆಲ್ ದರಗಳು ಹೆಚ್ಚಾಗುತ್ತಿರುವಾಗ ಇವೆಲ್ಲವನ್ನು ನೋಡಿಕೊಳ್ಳುವುದು ಸಾಧ್ಯವಾಗುವುದಿಲ್ಲ" ಎಂದು ಹೇಳಿದ್ದಾರೆ.

ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಖಾಸಗಿ ಬಸ್‌ಗಳ ಪ್ರಭಾವ ಹೆಚ್ಚು. ಈಗ ಸರ್ಕಾರಿಗಳ ಬಸ್‌ಗಳ ಓಡಾಟ ನಿಧಾನವಾಗಿ ಆರಂಭವಾಗುತ್ತಿದೆ. ಆದರೆ ಕೋವಿಡ್ ಲಾಕ್‌ಡೌನ್, ಡೀಸೆಲ್ ದರ ಏರಿಕೆ ಹಿನ್ನಲೆಯಲ್ಲಿ ಬಸ್ ಮಾಲೀಕರು ಕಂಗಾಲಾಗಿದ್ದಾರೆ.

ಗೋವಾಕ್ಕೆ ಬಸ್ ಸಂಚಾರ ಆರಂಭಿಸಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಗೋವಾಕ್ಕೆ ಬಸ್ ಸಂಚಾರ ಆರಂಭಿಸಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ

ಲಾಕ್‌ಡೌನ್ ಘೋಷಣೆಯಾದಾಗ ಬಸ್ ಮಾಲೀಕರು ತಮ್ಮ ಪರ್ಮಿಟ್‌ ಅನ್ನು ಸಾರಿಗೆ ಇಲಾಖೆಗೆ ನೀಡಿದ್ದರು. ಆದರೆ ಅನ್‌ಲಾಕ್ ಘೋಷಣೆಯಾಗಿ ಬಸ್ ಸಂಚಾರ ಆರಂಭವಾದರೂ ಪರ್ಮಿಟ್ ವಾಪಸ್ ಪಡೆದಿಲ್ಲ. ಪರ್ಮಿಟ್ ವಾಪಸ್ ಪಡೆದ ತಕ್ಷಣದ ಬಸ್ ಸಂಚಾರ ಆರಂಭವಾಗಿದೆ ಎಂದರ್ಥ ಮತ್ತು ತೆರಿಗೆಯನ್ನು ಪಾವತಿ ಮಾಡಬೇಕಿದೆ.

ಖಾಸಗಿ ಬಸ್ ಮಾಲೀಕರ ಒಕ್ಕೂಟ ದರ ಏರಿಕೆಗೆ ಅವಕಾಶ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಆದರೆ ಸರ್ಕಾರ ಇದುವರೆಗೂ ಈ ಕುರಿತು ಯಾವುದೇ ತೀರ್ಮಾನವನ್ನು ಕೈಗೊಂಡಿಲ್ಲ. ಸರ್ಕಾರ ಕೋವಿಡ್ ಸಂದರ್ಭದಲ್ಲಿ ವಿವಿಧ ವರ್ಗಗಳಿಗೆ ಪ್ಯಾಕೇಜ್ ಘೋಷಣೆ ಮಾಡಿತು. ಆದರೆ ಖಾಸಗಿ ಬಸ್ ಮಾಲೀಕರನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿತು ಎಂಬುದು ಮಾಲೀಕರ ಆರೋಪವಾಗಿದೆ.

English summary
Private bus operators in Shivamogga fail to resume full services due to hike in diesel price. We are incurring losses, govt is inconsiderate towards private operators said D. V. Basavarajappa SKMS bus service.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X